ಕುಶಾಲನಗರ, ನ. ೧೭: ಕುಶಾಲನಗರದ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟಿçÃಸ್ ನಿರಂತರ ಚಟುವಟಿಕೆಗಳ ಮೂಲಕ ಸದೃಢವಾಗುತ್ತಿದೆ. ೩೫ ವರ್ಷಗಳ ಇತಿಹಾಸವಿರುವ ಸಂಸ್ಥೆಯನ್ನು ವರ್ತಕರಿಗೆ ಅನುಕೂಲವಾಗುವಂತೆ ಮತ್ತಷ್ಟು ಗಟ್ಟಿಗೊಳಿಸಲಾಗುತ್ತಿದೆ ಎಂದು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ತಿಳಿಸಿದರು.
ಕುಶಾಲನಗರದ ಬಾಪೂಜಿ ಬಡಾವಣೆಯಲ್ಲಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟಿçÃಸ್ ಸ್ಥಾನಿಕ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊಡಗಿನಾದ್ಯಂತ ಸುಮಾರು ೧೩ಕ್ಕಿಂತ ಅಧಿಕ ಸ್ಥಾನಿಯ ಸಮಿತಿಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. ಅದರಲ್ಲಿ ಕುಶಾಲನಗರ ಘಟಕ ಸಾಕಷ್ಟು ಸಾಮಾಜಿಕ ಜನೋಪಯೋಗಿ ಕೆಲಸಗಳನ್ನು ಮಾಡಿ ಜನರ ವಿಶ್ವಾಸ ಗಳಿಸಿದೆ ಎಂದು ಹೇಳಿದರು.
ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಅಭಿಯಾನ, ಕುಶಾಲನಗರ ಹಬ್ಬ ೨೦೨೫ ಎನ್ನುವ ವಿಶಿಷ್ಠ ಗ್ರಾಹಕ ಮೇಳ, ಕಾರ್ಮಿಕ ಇಲಾಖೆಯಿಂದ ವರ್ತಕರಿಗೆ ಅವೈಜ್ಞಾನಿಕ ನೋಟಿಸ್ ಜಾರಿಯಾಗಿದ್ದನ್ನು ಪ್ರಶ್ನಿಸಿ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊAಡಿದ್ದು ಹೀಗೆ ಹಲವು ಯಶಸ್ವಿ ಕಾರ್ಯಕ್ರಮಗಳು ನಡೆದಿರುವ ಕುರಿತು ಸ್ಥಾನಿಯ ಸಮಿತಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಕೆ.ಎಸ್. ನಾಗೇಶ್ ಮಾತನಾಡಿ, ಕುಶಾಲನಗರ ಜನತೆಗೆ ಪುರಸಭೆ ಅವೈಜ್ಞಾನಿಕವಾಗಿ ತೆರಿಗೆ ಹೆಚ್ಚಿಸಿದ್ದನ್ನು ಆಡಳಿತ ಮಂಡಳಿಯ ಗಮನಕ್ಕೆ ತಂದು ಕಳೆದ ವರ್ಷಕ್ಕೆ ಕೇವಲ ೧೦% ಹೆಚ್ಚಳ ಮಾಡಿಸಲಾಗಿದೆ. ೧೯೯೦ರ ದಶಕದಲ್ಲಿ ಸ್ಥಾಪನೆಯಾದ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ನ ಸ್ಥಾಪಕ ಆಡಳಿತ ಮಂಡಳಿಯ ಸದಸ್ಯರುಗಳ ಕಾರ್ಯ ಸಾಧನೆಗಳನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕುಶಾಲನಗರ ಸ್ಥಾನೀಯ ಘಟಕದ ಉಪಾಧ್ಯಕ್ಷರು, ಜಿಲ್ಲಾ ನಿರ್ದೇಶಕ ರಂಗಸ್ವಾಮಿ, ಕಚೇರಿಗೆ ಕಟ್ಟಡವನ್ನು ತಾತ್ಕಾಲಿಕವಾಗಿ ಉಚಿತವಾಗಿ ನೀಡಿದ ಅಬ್ದುಲ್ ರಶೀದ್, ಕಾರ್ಯದರ್ಶಿ ಚಿತ್ರ ರಮೇಶ್, ಖಜಾಂಜಿ ಎನ್.ವಿ. ಬಾಬು, ನಿರ್ದೇಶಕರಾದ ಪಿ.ಎಂ. ಮೋಹನ್, ಕೆ.ಜೆ. ಸತೀಶ್, ರಿಚರ್ಡ್ ಡಿಸೋಜ, ಓಂ ಪ್ರಕಾಶ್, ಜನಾರ್ಧನ ಪ್ರಭು, ವಿಮಲ್ ಜೈನ್, ಮತ್ತಿತ್ತರ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.