ಮುಳ್ಳೂರು, ನ. ೧೭: ರೈತ ಮತ್ತು ಜಾನುವಾರುಗಳ ಭಾವಾನಾತ್ಮಕ ಸಂಬAಧ ಹಿನ್ನೆಲೆ ಮತ್ತು ನಾನೂರು ವರ್ಷಗಳ ಇತಿಹಾಸ ಹೊಂದಿರುವ ಸಮಿಪದ ಕೊಡಗು-ಹಾಸನ ಜಿಲ್ಲಾ ಗಡಿ ಭಾಗದಲ್ಲಿರುವ ಹೊಸೂರು ಬೆಟ್ಟದ ಬಸವೇಶ್ವರ ಸ್ವಾಮಿಯ ಕೌಟೆಕಾಯಿ ಜಾತ್ರೆ ವಿಜೃಂಭಣೆಯಿAದ ಸಾಂಪ್ರದಾಯಕವಾಗಿ ನೆರವೇರಿತು. ಹೊಸೂರು ಗ್ರಾಮದ ಬೆಟ್ಟದ ಮೇಲಿರುವ ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿ ಮತ್ತು ಗ್ರಾಮಸ್ಥರು ಹಾಗೂ ದಾನಿಗಳ ಸಹ ಭಾಗಿತ್ವದಲ್ಲಿ ನಡೆಸಲಾಗುವ ಕೌಟೆಕಾಯಿ ಜಾತ್ರೆಯನ್ನು ನಡೆಸಲಾಗುತ್ತದೆ ಅದೇ ರೀತಿಯಲ್ಲಿ ಬೆಳಿಗ್ಗೆ ೧೧ ಗಂಟೆಗೆ ಬೆಟ್ಟದ ಮೇಲಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಅರ್ಚಕರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು ನಂತರ ನೂರಾರು ಭಕ್ತರು ಶ್ರೀ ಸ್ವಾಮಿಯ ದರ್ಶನ ಪಡೆದರು.

ಮಧ್ಯಾಹ್ನ ಅರಳಿ ಮರದ ಕಟ್ಟೆಯ ವೇದಿಕೆಯಲ್ಲಿ ಸಾಂಪ್ರದಾಯಿಕ ಪದ್ಧತಿಯಂತೆ ಕೌಟೆಕಾಯಿಯ ತಿರುಳಿನ ಹಣತೆಗೆ ದೀಪ ಹಚ್ಚಿ ಕೌಟೆಕಾಯಿ ಜಾತ್ರೆಯನ್ನು ಉದ್ಘಾಟಿಸಲಾಯಿತು. ಸಕಲೇಶಪುರ-ಆಲೂರು ಕ್ಷೇತ್ರದ ಕಾಂಗ್ರೆಸ್ ಮುಖಂಡ ಮುರುಳಿ ಮೋಹನ್ ಜಾತ್ರೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನೂರಾರು ವರ್ಷಗಳಿಂದ ರೈತ, ಜಾನುವಾರು ಮತ್ತು ಸಾವಯವ ಕೃಷಿ ಬಾಂಧವ್ಯತೆಯ ಸಂಕೇತವಾಗಿ ಕೌಟೇಕಾಯಿ ಜಾತ್ರೆಯನ್ನು ಗ್ರಾಮಸ್ಥರು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ಎಲ್ಲರೂ ಇಂತಹ ಜಾತ್ರೋತ್ಸವವನ್ನು ಉಳಿಸಿಕೊಳ್ಳುವಂತೆ ಸಲಹೆ ನೀಡಿದರು.

ಸಕಲೇಶಪುರದ ಉದ್ಯಮಿ ಮಂಜು ಮಾತನಾಡಿ, ಜಾತ್ರೋತ್ಸವಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕಾದರೆ ಈಗಿನ ಪೀಳಿಗೆಯವರಿಗೆ ವಿಶಿಷ್ಟವಾದ ಕೌಟೇಕಾಯಿ ಜಾತ್ರೆಯಂತಹ ಜಾತ್ರೋತ್ಸವದ ಮಹತ್ವ, ಹಿನ್ನೆಲೆ, ಆಚಾರ ವಿಚಾರ, ಸಂಸ್ಕೃತಿ ಪರಂಪರೆಯ ಬಗ್ಗೆ ಹಿರಿಯರು ತಿಳಿಸಿಕೊಡಬೇಕು ಎಲ್ಲರೂ ಪರಿಸರವನ್ನು ಉಳಿಸಬೇಕು. ಪ್ಲಾಸ್ಟಿಕ್ ನಿರ್ಮೂಲನೆ ಮಾಡುವ ಮೂಲಕ ಸ್ವಚ್ಛತೆಯನ್ನು ಕಾಪಾಡುವಂತೆ ಮನವಿ ಮಾಡಿದರು.

ಕೌಟೆಕಾಯಿ ಜಾತ್ರೆಯ ಬಗ್ಗೆ ದೇವಸ್ಥಾನ ಸಮಿತಿ ಕಾರ್ಯದರ್ಶಿ ರಮೇಶ್ ತಿಳಿಸಿಕೊಟ್ಟರು. ಈ ಸಂದರ್ಭ ದೇವಸ್ಥಾನ ಸಮಿತಿಯಿಂದ ದೇವಸ್ಥಾನಕ್ಕೆ ಬೆಳ್ಳಿಯ ಮುಖವಾಡ ನೀಡಿದ ದಾನಿ ಹೃಷಿಕೇಶ್ ಮತ್ತು ಉದ್ಯಮಿ ಮಧುಸೂದನ್ ಇವರುಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಹೊಸೂರು ಕೃಷಿ ಪತ್ತಿನ ಸಂಘದ ಅಧ್ಯಕ್ಷ ಎಚ್.ಟಿ.ಪುಟ್ಟೇಗೌಡ, ಗವಿಶ್ರೀ ರುದ್ರಗಿರಿ ಟ್ರಷ್ಟಿನ ಅಧ್ಯಕ್ಷ ಜಗದೀಶ್, ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು. ಜಾತ್ರೋತ್ಸವದ ಪ್ರಯುಕ್ತ ಶನಿವಾರಸಂತೆ, ಹೊಸೂರು ಮುಂತಾದ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಜಾತ್ರೋತ್ಸವದಲ್ಲಿ ಹೊಸೂರು ಸೇರಿದಂತೆ ಕೊಡಗು ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು. ದೇವಸ್ಥಾನ ಸಮಿತಿಯಿಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಸಲಾಯಿತು. -ಭಾಸ್ಕರ್ ಮುಳ್ಳೂರು