vಚೆಟ್ಟಳ್ಳಿ, ನ. ೧೭: ಚೆಟ್ಟಳ್ಳಿ ಗ್ರಾಮ ವ್ಯಾಪ್ತಿಯ ಸಾಂತ್ವನ ಕೇಂದ್ರದ ವತಿಯಿಂದ ರಕ್ತದಾನ ಶಿಬಿರ ಸ್ಥಳೀಯ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹಂಸ ತ್ಯಾಗತ್ತೂರು ವಹಿಸಿದ್ದರು. ಖತೀಬರಾದ ಮಹಮ್ಮದಲಿ ಸಖಾಫಿ ಪ್ರಾರ್ಥಿಸಿ, ವಿ.ಪಿ. ಮೊಯಿದ್ದೀನ್ ಪೊನ್ನತ್‌ಮೊಟ್ಟೆ ಸ್ವಾಗತಿಸಿದರು.

ಸಭೆಯಲ್ಲಿ ರಕ್ತದಾನದ ಮಹತ್ವದ ಕುರಿತು ಜಿಲ್ಲಾ ವೈದ್ಯಾಧಿಕಾರಿ ಡಾ. ಕರುಂಬಯ್ಯ ವಿವರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕೆಡಿಪಿ ಸದಸ್ಯೆ ಸುನಿತಾ ಮಂಜುನಾಥ್ ಪ್ರಾಸ್ತಾವಿಕ ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯ ಸಿ.ಈ. ತೀರ್ಥ ಕುಮಾರ್, ಮಂಜುನಾಥ್ ಪಿ.ಆರ್, ತಾಲೂಕು ಕೆಡಿಪಿ ಸದಸ್ಯ ಹನೀಫ್, ಮಾಜಿ ಸದಸ್ಯ ಮಹಮ್ಮದ್ ರಫಿ, ಟಿ.ಎಂ ಡೆನ್ನಿ ಬರೋಸ್, ಜುಬೈರ್ ಚೆಟ್ಟಳ್ಳಿ, ಗಫೂರ್ ಪಿ.ಎಂ, ಹನೀಫ್ ಉಸ್ತಾದ್ ಭಾಗವಹಿಸಿದ್ದರು.