ಸೋಮವಾರಪೇಟೆ, ನ. ೧೬: ಮಲಯಾಳಿ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಒಂದಾದ ಓಣಂ ಉತ್ಸವವನ್ನು ಸೋಮವಾರಪೇಟೆ ಭಾಗದ ಮಲಯಾಳಿ ಸಮುದಾಯದವರು ಸಾಮೂಹಿಕವಾಗಿ ಸಂಭ್ರಮದಿAದ ಆಚರಿಸಿದರು.
ತಾಲೂಕು ಹಿಂದೂ ಮಲಯಾಳಿ ಸಮಾಜದ ವತಿಯಿಂದ ಪಟ್ಟಣದಲ್ಲಿ ಆಯೋಜಿಸಿದ್ದ ಓಣಂ ಉತ್ಸವದಲ್ಲಿ ಸಮುದಾಯದ ಹಿರಿಯ-ಕಿರಿಯರು, ಮಕ್ಕಳಾದಿಯಾಗಿ ಮಹಿಳೆಯರು ಸಡಗರದಿಂದ ಭಾಗಿಯಾಗಿದ್ದರು.
ಓಣಂ ಉತ್ಸವದ ಅಂಗವಾಗಿ ಪಟ್ಟಣದ ಸಾಕ್ಷಿ ಕನ್ವೆನ್ಷನ್ ಸಭಾಂಗಣದಲ್ಲಿ ಮಹಿಳೆಯರಿಗೆ ಪೂಕಳಂ ಸ್ಪರ್ಧೆ ಆಯೋಜಿಸಲಾಗಿತ್ತು. ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಮಾಧವನ್ ಸ್ಪರ್ಧೆಗೆ ಚಾಲನೆ ನೀಡಿದರು.
ನಂತರ ಪಟ್ಟಣದ ಕಕ್ಕೆಹೊಳೆ ಜಂಕ್ಷನ್ನಲ್ಲಿರುವ ಶ್ರೀ ಮುತ್ತಪ್ಪ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಾಂಪ್ರದಾಯಿಕ ಸಿಂಗಾರಿ ಮೇಳ ವಾದ್ಯಗೋಷ್ಠಿಯೊಂದಿಗೆ ಆಕರ್ಷಕ ಓಣಾಘೋಷ ಯಾತ್ರೆ ನಡೆಯಿತು. ಬಲಿ ಚಕ್ರವರ್ತಿಯ ವೇಷಧಾರಿಗಳು ಮೆರವಣಿಗೆಗೆ ಹೆಚ್ಚಿನ ಮೆರುಗು ತುಂಬಿದರು. ಶ್ರೀಲಕ್ಷಿö್ಮÃ ಪದ್ಮನಾಭ್ ಅವರಿಂದ ಸ್ವಾಗತ ನೃತ್ಯ, ಸಮಿತಿಯ ಮಹಿಳಾ ಘಟಕದ ನಿರ್ದೇಶಕರುಗಳಿಂದ ಮೂಡಿಬಂದ ತಿರುವಾದಿರ ನೃತ್ಯ ಆಕರ್ಷಕವಾಗಿತ್ತು.
ಸಾಮರಸ್ಯ ವೃದ್ಧಿ: ಸಭಾಂಗಣದಲ್ಲಿ ನಡೆದ ಓಣಂ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಡಾ. ಮಂತರ್ ಗೌಡ, ಸಮಾಜವನ್ನು ಒಂದುಗೂಡಿಸಲು ಇಂತಹ ಉತ್ಸವ ಅಗತ್ಯ. ಸಂಸ್ಕೃತಿಯನ್ನು ಬಿಂಬಿಸಲು ಇದು ಅವಕಾಶ. ಹಬ್ಬಾಚರಣೆಗಳಿಗೆ ಬಡವ -ಶ್ರೀಮಂತ ಎಂಬ ಭೇದ ಇಲ್ಲ. ಸ್ಥಿತಿವಂತರು ಕಷ್ಟದಲ್ಲಿರುವವರಿಗೆ ನೆರವಾಗಬೇಕು. ಸಾಮೂಹಿಕ ಹಬ್ಬಾಚರಣೆಗಳಿಂದ ಸಾಮರಸ್ಯ ವೃದ್ಧಿಸುತ್ತಿದೆ ಎಂದು ಅಭಿಪ್ರಾಯಿಸಿದರು.
ಹಿಂದೂ ಮಲಯಾಳಿ ಸಮಾಜಕ್ಕೆ ಮಡಿಕೇರಿಯಲ್ಲಿ ೨೫ ಸೆಂಟ್ ಜಾಗ ಒದಗಿಸಲು ಕ್ರಮ ವಹಿಸಲಾಗುವುದು ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಬೆಂಗಳೂರಿನ ಸೋಲೂರು ಆರ್ಯ ಈಡಿಗ ಮಹಾ ಸಂಸ್ಥಾನದ ಮಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಹಾಗೂ ಕೇರಳದ ಕಾಞಂಗಾಡ್ ಗೃಹಸ್ಥಾಶ್ರಮ ಮಠದ ಶ್ರೀ ಗಂಗಾಜೀ ನಾಯರ್ ಅವರುಗಳು ಮಾತನಾಡಿ, ಸಂಸ್ಕೃತಿಯು ಜೀವನದ ತಾಯಿಬೇರು. ಇದನ್ನು ಎಂದಿಗೂ ಗಟ್ಟಿಗೊಳಿಸಬೇಕು. ಮಕ್ಕಳಿಗೆ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳ ಬಗ್ಗೆ ತಿಳುವಳಿಕೆ ನೀಡಬೇಕು ಎಂದು ಕರೆ ನೀಡಿದರು.
ಶೈಕ್ಷಣಿಕ ಸಾಧನೆ ತೋರಿದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಆಚಾರ-ವಿಚಾರ ಸಂಸ್ಕೃತಿಯನ್ನು ಉಳಿಸುವ ಕೆಲಸ ಸಮಾಜದವರಿಂದಲೇ ಆಗಬೇಕು. ಧರ್ಮ, ಭಾಷೆಯ ಮೇಲೆ ಅಭಿಮಾನ ಇರಬೇಕು ಎಂದ ಅವರು, ಹಿಂದೂ ಮಲಯಾಳಿ ಸಮಾಜದ ಕಟ್ಟಡ ನಿರ್ಮಾಣ ಸಂದರ್ಭ ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರ ನಿಧಿಯಿಂದ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ ಮಾತನಾಡಿ, ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗದAತೆ ಸಮಾಜ ಗಮನ ಹರಿಸಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜದ ಜಿಲ್ಲಾ ಹಾಗೂ ತಾಲೂಕು ಘಟಕದ ಅಧ್ಯಕ್ಷ ವಿ.ಎಂ. ವಿಜಯ ವಹಿಸಿ ಮಾತನಾಡಿ, ಯುವ ಜನಾಂಗಕ್ಕೆ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ ಕಳೆದ ೫ ವರ್ಷಗಳಿಂದ ಸೋಮವಾರಪೇಟೆಯಲ್ಲಿ ಮಲಯಾಳಿ ಸಮುದಾಯದವರು ಸಾಮೂಹಿಕವಾಗಿ ಓಣಂ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜದ ಗೌರವಾಧ್ಯಕ್ಷ ಕೆ.ಎಸ್. ರಮೇಶ್, ಉಪಾಧ್ಯಕ್ಷ ಸುಧೀರ್, ವಾಸುದೇವ್, ಜಿಲ್ಲಾ ಎಸ್.ಎನ್.ಡಿ.ಪಿ. ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್, ಎಂ.ಕೆ. ಮೋಹನ್, ಪಿ.ಡಿ. ಪ್ರಕಾಶ್, ಕೆ.ಎಸ್.ಪದ್ಮನಾಭ್, ಎಸ್.ಬಿ. ಭರತ್ ಕುಮಾರ್, ವಿನೋದ್ ಕುಮಾರ್, ಉನ್ನಿಕೃಷ್ಣನ್, ಬಾಬು, ಸುಧೀಶ್, ಹರೀಂದ್ರನ್, ಕೆ.ಕೆ. ಬಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಎಂ.ಕೆ. ಮೋಹನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಎಸ್ಎಸ್ಎಲ್ಸಿ, ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳು, ಪಠ್ಯೇತರ ಚಟುವಟಿಕೆಯಲ್ಲಿ ಗಮನಾರ್ಹ ಸಾಧನೆ ಮಾಡಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಡಿಬಂದವು. ಹಿಂದೂ ಮಲಯಾಳಿ ಸಮಾಜದ ಉಪಾಧ್ಯಕ್ಷ ಎಸ್. ಅಯ್ಯಪ್ಪ, ಕೆ.ಬಿ. ಕೃಷ್ಣ, ಸಹ ಕಾರ್ಯದರ್ಶಿ ಗೀತಾ ಮೋಹನ್, ಸುಚಿತ್ರ, ಎನ್.ಆರ್.ಅಜೀಶ್ ಕುಮಾರ್, ಜ್ಯೋತಿ ಅರುಣ್ ಕಾರ್ಯಕ್ರಮ ನಿರ್ವಹಿಸಿದರು.