ಕುಶಾಲನಗರ, ನ. ೧೬: ಕೂಡುಮಂಗಳೂರು ಮಂತರ್ ಗೌಡ ಅಭಿಮಾನಿ ಬಳಗದ ವತಿಯಿಂದ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡರವರ ಹುಟ್ಟು ಹಬ್ಬವನ್ನು ಕೂಡಿಗೆಯ ಶ್ರೀ ಶಕ್ತಿ ವೃದ್ಧಾಶ್ರಮದಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಡಾ. ಮಂತರ್ ಗೌಡ ಅವರು ಕೇಕ್ ಕತ್ತರಿಸಿ ನಂತರ ಆಶ್ರಮದಲ್ಲಿರುವ ವಯೋವೃದ್ಧರಿಗೆ ಊಟೋಪಾಚಾರ ವ್ಯವಸ್ಥೆ ಮಾಡಿದರು.

ವಯೋವೃದ್ಧರ ಕುಶಲೋಪಹರಿಯನ್ನು ವಿಚಾರಿಸಿ ಆರೋಗ್ಯದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಶಾಸಕರು ಪಡೆದರು.

ಕೂಡುಮಂಗಳೂರು ಮಂತರ್ ಗೌಡ ಅಭಿಮಾನಿ ಬಳಗದ ಪ್ರಮುಖರಾದ ಎಂ. ನಾಗರಾಜ್, ಮಧು ಚಂದ್ರ, ಕಾಂತಾರಾಜ್, ಪುನೀತ್ ಕುಮಾರ್, ಮಧು, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಅನಂತ, ಪ್ರಮುಖರಾದ ಅರುಣ್‌ರಾವ್, ಚಂದ್ರು, ಕೂಡ್ಲೂರು ಈರಪ್ಪ, ಗಿರೀಗೌಡ, ಲೋಕೇಶ್, ಧರ್ಮ, ಅಣ್ಣಚಿ, ಹರೀಶ್, ಶ್ರೀ ಶಕ್ತಿ ವೃದ್ಧಾಶ್ರಮ ಮೇಲ್ವಿಚಾರಕ ಬಿ.ಎಸ್. ಚಂದ್ರು ಸೇರಿದಂತೆ ಬಳಗದ ಸದಸ್ಯರು, ಅಭಿಮಾನಿಗಳು ಹಾಜರಿದ್ದರು.