ಕಣಿವೆ, ನ. ೧೬: ಸ್ವಚ್ಛ ಭಾರತ್ ಮಿಷನ್ ಯೋಜನೆಯ ಸಾಮರ್ಥ್ಯ ಅಭಿವೃದ್ಧಿ ಘಟಕದಡಿಯಲ್ಲಿ ಬೆಂಗಳೂರಿನ ಸ್ವಚ್ಛ ಗೃಹ ಕಲಿಕ ಕೇಂದ್ರಕ್ಕೆ ಕುಶಾಲನಗರದ ಪುರಸಭೆಯ ಪೌರ ಕಾರ್ಮಿಕರ ನಿಯೋಗ ಒಂದು ದಿನದ ಅಧ್ಯಯನ ಪ್ರವಾಸ ಕೈಗೊಂಡಿತು.

ಬೆAಗಳೂರಿನ ಸ್ವಚ್ಛ ಗೃಹ ಕಲಿಕಾ ಕೇಂದ್ರದಲ್ಲಿ ನಡೆಯುತ್ತಿರುವ ದೇವಸ್ಥಾನದ ಕಸವನ್ನು ಹೇಗೆ ಗೊಬ್ಬರವಾಗಿಸಬೇಕು, ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಗೊಬ್ಬರ ಮಾಡುವ ವಿಧಾನಗಳು, ಕಸವನ್ನು ಯಾವ ರೀತಿ ಮನೆಯಲ್ಲಿ ವಿಂಗಡಣೆ ಮಾಡಬೇಕು, ನಾಗರಿಕರೊಂದಿಗೆ ಸಂವಾದ ಹೇಗೆ ನಡೆಸಬೇಕು, ಮನೆಯಲ್ಲಿಯೇ ಕಸವನ್ನು ಬೇರ್ಪಡಿಸಿ ತರಬೇಕೆಂದು ತಿಳಿಸಲಾಯಿತು. ಎರೆಹುಳು ಗೊಬ್ಬರ ತಯಾರಿಸುವ ವಿಧಾನ, ಪೈಪ್ ಕಾಂಪೋಸ್ಟಿAಗ್, ಮೆಶ್ ಕಾಂಪೋಸ್ಟಿAಗ್ ಬಗ್ಗೆ ಮಾಹಿತಿ ನೀಡಲಾಯಿತು.

ಇದೇ ಸಂದರ್ಭ ಸ್ವಚ್ಛ ಕಲಿಕಾ ಕೇಂದ್ರದ ಸಂಪನ್ಮೂಲ ವ್ಯಕ್ತಿಯೊಬ್ಬರು ಪ್ಲಾಸ್ಟಿಕಾಸುರ ಎಂಬ ನಾಮಾಂಕಿತರು ಪ್ಲಾಸ್ಟಿಕ್‌ಗಳಿಂದ ಪರಿಸರದ ಮೇಲಾಗುವ ಹಾನಿಗಳ ಬಗ್ಗೆ ಮಾಹಿತಿ ನೀಡುವ ರೂಪಕ ನಡೆಸಿಕೊಟ್ಟರು. ಈ ಪ್ರವಾಸದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕ ಉದಯಕುಮಾರ್, ಯೋಜನಾ ನಿರ್ದೇಶಕರ ಕಚೇರಿಯ ಘನ ತ್ಯಾಜ್ಯಾ ನಿರ್ವಹಣಾ ತಜ್ಞ ಎಂ. ಕೀರ್ತಿ ಪ್ರಸಾದ್, ಸಂಪನ್ಮೂಲ ವ್ಯಕ್ತಿಗಳಾದ ಎಸ್‌ಡಬ್ಲ್ಯೂಎಂಆರ್ ಟಿ ಸಂಸ್ಥೆಯ ವಾಸುಕಿ ಅಯ್ಯಂಗಾರ್, ಗ್ರೀನ್ ಅಯಾನ್ ಸಂಸ್ಥೆಯ ಸಿ.ಎಂ. ಸಂಪತ್ ಹಾಗೂ ಎಚ್ ಎಸ್ ಅರ್ ಸಿಟಿಜನ್ ಫೋರಂನ ಲಕ್ಷಿö್ಮ ಉಪಸ್ಥಿತರಿದ್ದರು.