ಪಾಲಿಬೆಟ್ಟ, ನ. ೧೬: ಆಧುನಿಕತೆಯ ಮುನ್ನೋಟ ದೃಷ್ಟಿಯಲ್ಲಿ ನಮ್ಮ ಕೃಷಿ, ಪದ್ಧತಿ ಪರಂಪರೆಗಳು ಯುವ ಸಮುದಾಯದಲ್ಲಿ ಆಸಕ್ತಿ ಮೂಡಿಸದೆ ಇರುವುದು ಆಘಾತಕಾರಿ ಬೆಳವಣಿಗೆ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಳೆಯಂಡ ಯು. ರಾಬಿನ್ ದೇವಯ್ಯ ಕಳವಳ ವ್ಯಕ್ತಪಡಿಸಿದರು.
ಪಾಲಿಬೆಟ್ಟ ಅನುಗ್ರಹ ಲಯನ್ ಸೇವಾ ಭವನದಲ್ಲಿ ೭೨ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷಿ ಪತ್ತಿನ ಸಹಕಾರ ಸಂಘಗಳು ಪಾರದರ್ಶಕತೆಯಿಂದ ರೈತರಿಗೆ ಅನುಕೂಲಕರ ಸೌಲಭ್ಯಗಳನ್ನು ಒದಗಿಸಿ ಕೊಟ್ಟಾಗ ಕೃಷಿಗೆ ಹೆಚ್ಚಿನ ಸಹಕಾರ ನೀಡಿದಂತಾಗುತ್ತದೆ. ರೈತರು ಈ ಹಿನ್ನೆಲೆಯಲ್ಲಿಯೇ ಸಹಕಾರ ಸಂಘದಲ್ಲಿ ಕರ್ತವ್ಯ ನಿರ್ವಹಿಸಲು ನಮ್ಮ ಮೇಲೆ ಭರವಸೆ ಇಟ್ಟು ಆಯ್ಕೆ ಮಾಡಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ಕೃಷಿ ಸಹಕಾರ ಸಂಘಗಳು ರೈತರು ಉನ್ನತೀಕರಣಕ್ಕೆ ಚಿಂತನೆ ಹರಿಸಬೇಕು. ಸೈನಿಕ ಮತ್ತು ಕೃಷಿ ಕ್ಷೇತ್ರ ಕೊಡಗು ಜಿಲ್ಲೆ ಅಪಾರವಾದ ಕೊಡುಗೆಯನ್ನು ನೀಡಿದೆ. ಪ್ರತಿಯೊಬ್ಬರ ಬದುಕು ಸ್ವಾವಲಂಬಿಯಾಗಬೇಕು. ಗ್ರಾಮೀಣ ಪ್ರದೇಶಗಳು ಉನ್ನತೀಕರಣಗೊಳ್ಳಬೇಕು. ಈ ನಿಟ್ಟಿನಲ್ಲಿ ಮೋದಿ ಸರ್ಕಾರ ಚಿಂತನೆ ಹರಿಸಿ ರೈತರ ಬೆಳವಣಿಗೆಗೆ ಸಹಕಾರದ ಯೋಜನೆಗಳನ್ನ ಅನುಷ್ಠಾನಕ್ಕೆ ತಂದಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಮಾತನಾಡಿ, ೧೮ನೇ ಶತಮಾನದಲ್ಲಿ ಇಂಗ್ಲೆAಡ್ನಲ್ಲಿ ಸಹಕಾರ ಸಂಘ ಪ್ರಾರಂಭವಾಯಿತು. ನೆಹರು ಕಾಲದಲ್ಲಿ ಸಹಕಾರ ಸಂಘದ ಬೆಳವಣಿಗೆಗೆ ದೇಶದಲ್ಲಿ ಬುನಾದಿಯನ್ನು ಹಾಕಲಾಯಿತು. ಇಂದು ಸಹಕಾರ ಸಂಘಗಳಲ್ಲಿ ರಾಜಕೀಯ ಬೆಳವಣಿಗೆ ಕಾಣಿಸುತ್ತಿರುವುದರಿಂದ ಭ್ರಷ್ಟಾಚಾರಕ್ಕೆ ಕಾರಣವಾಗುತ್ತಿದೆ. ರೈತರ ಮತ್ತು ಸಹಕಾರಿಗಳ, ಸೇವೆಯನ್ನು ವೃದ್ಧಿಸಲು ಸಹಕಾರ ಸಂಘಗಳಲ್ಲಿ ಪಕ್ಷ ರಾಜಕೀಯ ನಡೆ ಉತ್ತಮ ಬೆಳವಣಿಗೆಯಲ್ಲ. ಸೇವೆಯ ಕಾಳಜಿ ಹೊಂದಿರುವವರು ಮಾತ್ರ ಸಂಘದೊಳಗೆ ಬಂದಾಗ ಭ್ರಷ್ಟ ರಹಿತ ಆಡಳಿತ ನೀಡಲು ಸಾಧ್ಯವಾಗುತ್ತದೆ ಎಂದರು.
ಕೊಡಗು ಜಿಲ್ಲೆಯ ಕೃಷಿ ಪತ್ತಿನ ಮತ್ತು ಸಹಕಾರಿ ಸಂಘಗಳು ರೈತ ಮತ್ತು ಬೆಳೆಗಾರರ ಅನುಕೂಲಕ್ಕೆ ಮುಕ್ತ ಅವಕಾಶ ನೀಡಿ ಆರ್ಥಿಕತೆಯ ಬೆಳವಣಿಗೆಗೆ ಪೂರಕ ಸವಲತ್ತುಗಳನ್ನು ಒದಗಿಸುತ್ತದೆ ಎಂದು ತಿಳಿಸಿದರು.
ಪಾಲಿಬೆಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಟ್ಟಂಡ ಅಜಿತ್ ಕರುಂಬಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರಿಗಳು ಸಹಕಾರದ ತತ್ವಗಳನ್ನು ನಂಬಿ ಸಹಕಾರ ಸಂಘಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕಾಗಿದೆ ಎಂದರು.
ಹಿರಿಯ ಸಹಕಾರಿಗಳಾದ ಕುಪ್ಪಂಡ ಸುಬ್ರಮಣಿ, ಪೂದ್ರಿಮಾಡ ಬೋಪ್ಪಯ್ಯ, ಕೂತಂಡ ಕೆ ಬೋಜಮ್ಮ, ಬಾಂಡ್ ಗಣಪತಿ, ರಾಬಿನ್ ದೇವಯ್ಯ ಮತ್ತು ಅಜ್ಜನಿಕಂಡ ಎಸ್ ಶ್ಯಾಂಮ್ ಚಂದ್ರ ಇವರುಗಳನ್ನು ಗೌರವಿಸಲಾಯಿತು.
ನಿವೃತ್ತ ಪ್ರಾಂಶುಪಾಲೆ, ಕೊಡಗು ಜಿಲ್ಲೆ ಸಹಕಾರ ಯೂನಿಯನ್ ನಿರ್ದೇಶಕಿ ಶ್ಯಾಮಲಾ ಎಂ.ಎ ಅವರು ದಿನದ ಮಹತ್ವದ ಕುರಿತು ಮಾಹಿತಿ ನೀಡಿದರು. ಈ ಸಂದರ್ಭ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರುಗಳಾದ ಅಡ್ಡಂಡ ಸಿ. ಕುಶಾಲಪ್ಪ, ಮೂಕಚಂಡ ಟಿ ಸುಬ್ಬಯ್ಯ, ಅಜ್ಜಿಕುಟ್ಟಿರ ಎಂ ಮುತ್ತಪ್ಪ, ಅಜ್ಜನಿಕಂಡ ಎಸ್ ಶ್ಯಾಮ್ಚಂದ್ರ, ಹೊಟ್ಟೆಂಗಡ ಎಂ ರಮೇಶ್, ಎಸ್ಅರ್ ಸುನಿಲ್ ರಾವ್, ಪೂಳಂಡ ಪಿ ಪೇಮ್ಮಯ್ಯ, ಗುಮ್ಮಟೀರ ಕಿಲನ್ ಗಣಪತಿ, ಪಟ್ರಪಂಡ ರಘು ನಾಣಯ್ಯ, ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೆಪ್ಪುಡಿರ ರಾಮಕೃಷ್ಣ, ಅಮ್ಮತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಐನಂಡ ಲಾಲ ಅಯ್ಯಣ್ಣ, ಪಾಲಿಬೆಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಡಾಲು ವಿ.ವಿ, ಕೊಡಗು ಜಿಲ್ಲಾ ಸಹಕಾರ ಸಂಘ ಯೂನಿಯನ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಯೋಗೇಂದ್ರ ನಾಯಕ್, ಸೇರಿದಂತೆ ಪಾಲಿಬೆಟ್ಟ, ಅಮ್ಮತ್ತಿ, ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ, ನಿರ್ದೇಶಕರುಗಳು, ಸಿಬ್ಬಂದಿ ವರ್ಗ, ಸಹಕಾರಿಗಳು ಹಾಜರಿದ್ದರು.
ವರ