ಮಡಿಕೇರಿ, ನ. ೧೬: ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ನಗರದ ಜ. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕೊಡವ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಂಜಿಗೇರಿ ನಾಡ್ ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು. ಕೊಡವ ನೈಟ್ಸ್ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಅಂಜಿಗೇರಿ ನಾಡ್, ಕೊಡವ ನೈಟ್ಸ್ ತಂಡಕ್ಕೆ ಬ್ಯಾಟಿಂಗ್ ನೀಡಿತು. ನಿಗದಿತ ೮ ಓವರ್‌ಗೆ ಕೊಡವ ನೈಟ್ಸ್ ೫ ವಿಕೆಟ್ ನಷ್ಟಕ್ಕೆ ೬೪ ರನ್ ಪೇರಿಸಿ ೬೫ ರನ್‌ಗಳ ಗುರಿಯನ್ನು ಅಂಜಿಗೇರಿ ನಾಡ್ ತಂಡಕ್ಕೆ ನೀಡಿತು. ಗುರಿ ಬೆನ್ನತ್ತಿದ್ದ ಅಂಜಿಗೇರಿ ನಾಡ್ ೫.೧ ಓವರ್‌ಗಳಲ್ಲಿ ೬೮ ರನ್ ದಾಖಲಿಸಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಅಂಜಿಗೇರಿ ನಾಡ್ ಪರ ಸಿ.ಎಸ್. ಕಾರ್ಯಪ್ಪ ೨೪ ಬಾಲ್‌ಗಳಿಗೆ ಸತತ ೪ ಸಿಕ್ಸರ್ ಜೊತೆಗೆ ಆಕರ್ಷಕ ೫೪ ರನ್ ಸಿಡಿಸಿ ಮಿಂಚಿದರು.

ಮೊದಲ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಎಂ.ಟಿ.ಬಿ. ರಾಯಲ್ಸ್ ತಂಡವನ್ನು ಮಣಿಸಿ ಅಂಜಿಗೇರಿ ನಾಡ್ ಫೈನಲ್ ಪ್ರವೇಶಿಸಿತು. ಮೊದಲು ಬ್ಯಾಟ್ ಮಾಡಿದ ಎಂ.ಟಿ.ಬಿ. ರಾಯಲ್ಸ್ ನಿಗದಿತ ೬ ಓವರ್‌ಗಳಲ್ಲಿ ೬೪ ರನ್ ಗಳಿಸಿತು. ಗುರಿಯನ್ನು ಬೆನ್ನತ್ತಿದ ಅಂಜಿಗೇರಿ ನಾಡ್ ಮಡಿಕೇರಿ, ನ. ೧೬: ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ನಗರದ ಜ. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕೊಡವ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಂಜಿಗೇರಿ ನಾಡ್ ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು. ಕೊಡವ ನೈಟ್ಸ್ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಅಂಜಿಗೇರಿ ನಾಡ್, ಕೊಡವ ನೈಟ್ಸ್ ತಂಡಕ್ಕೆ ಬ್ಯಾಟಿಂಗ್ ನೀಡಿತು. ನಿಗದಿತ ೮ ಓವರ್‌ಗೆ ಕೊಡವ ನೈಟ್ಸ್ ೫ ವಿಕೆಟ್ ನಷ್ಟಕ್ಕೆ ೬೪ ರನ್ ಪೇರಿಸಿ ೬೫ ರನ್‌ಗಳ ಗುರಿಯನ್ನು ಅಂಜಿಗೇರಿ ನಾಡ್ ತಂಡಕ್ಕೆ ನೀಡಿತು. ಗುರಿ ಬೆನ್ನತ್ತಿದ್ದ ಅಂಜಿಗೇರಿ ನಾಡ್ ೫.೧ ಓವರ್‌ಗಳಲ್ಲಿ ೬೮ ರನ್ ದಾಖಲಿಸಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಅಂಜಿಗೇರಿ ನಾಡ್ ಪರ ಸಿ.ಎಸ್. ಕಾರ್ಯಪ್ಪ ೨೪ ಬಾಲ್‌ಗಳಿಗೆ ಸತತ ೪ ಸಿಕ್ಸರ್ ಜೊತೆಗೆ ಆಕರ್ಷಕ ೫೪ ರನ್ ಸಿಡಿಸಿ ಮಿಂಚಿದರು.

ಮೊದಲ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಎಂ.ಟಿ.ಬಿ. ರಾಯಲ್ಸ್ ತಂಡವನ್ನು ಮಣಿಸಿ ಅಂಜಿಗೇರಿ ನಾಡ್ ಫೈನಲ್ ಪ್ರವೇಶಿಸಿತು. ಮೊದಲು ಬ್ಯಾಟ್ ಮಾಡಿದ ಎಂ.ಟಿ.ಬಿ. ರಾಯಲ್ಸ್ ನಿಗದಿತ ೬ ಓವರ್‌ಗಳಲ್ಲಿ ೬೪ ರನ್ ಗಳಿಸಿತು. ಗುರಿಯನ್ನು ಬೆನ್ನತ್ತಿದ ಅಂಜಿಗೇರಿ ನಾಡ್