ಮಡಿಕೇರಿ, ನ. ೧೩: ಸೂಕ್ತ ನಿರ್ವಹಣೆ ಇಲ್ಲದೆ ಅಶುಚಿತ್ವದಿಂದ ಕೂಡಿದ್ದ ನಗರದ ಹೊಸ ಖಾಸಗಿ ಬಸ್ ನಿಲ್ದಾಣದಲ್ಲಿರುವ ಪ್ರಯಾಣಿಕರ ತಂಗುದಾಣವನ್ನು ನಗರಸಭಾ ಸದಸ್ಯ ಅರುಣ್ ಶೆಟ್ಟಿ ಮುತುವರ್ಜಿ ವಹಿಸಿ ಶುಚಿಗೊಳಿಸಿದ್ದಾರೆ. ತಂಗುದಾಣ ಬೀಡಾಡಿ ದನಗಳ ಆಶ್ರಯತಾಣವಾಗಿತ್ತು. ಸಗಣಿ ತ್ಯಾಜ್ಯದಿಂದ ದುರ್ನಾಥ ಬೀರುತ್ತಿದ್ದ ಹಿನ್ನೆಲೆ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಮನಗಂಡ ಅರುಣ್ ಶೆಟ್ಟಿ ನಗರಸಭೆ ಪೌರಕಾರ್ಮಿಕರ ನೆರವಿನೊಂದಿಗೆ ತಂಗುದಾಣವನ್ನು ಸಂಪೂರ್ಣವಾಗಿ ಶುಚಿಗೊಳಿಸಲು ಕ್ರಮ ಕೈಗೊಂಡಿದ್ದಾರೆ.