ಶ್ರೀಮಂಗಲ, ನ. ೧೩: ಪೊನ್ನಂಪೇಟೆ ತಾಲೂಕು ಬೆಕ್ಕೆಸೂಡ್ಲೂರು ಅರಳಿಗುಡ್ಡೆಕೇರಿ ಕೊಡವ ಸಂಘದ ವಾರ್ಷಿಕ ಮಹಾಸಭೆ ಫೋರಂಗಡ ಪೂಣಚ್ಚ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕೇರಿಯ ಸದಸ್ಯರಾದ ಪೊನ್ನಿಮಾಡ ಸುಬ್ರಮಣಿ ಅವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇರಿಯ ಸರ್ವ ಸದಸ್ಯರು ಅವರ ಸಂಸಾರದೊAದಿಗೆ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯಲ್ಲಿ ಕೇರಿಯ ಸದಸ್ಯರು ಅನ್ಯೋನ್ಯವಾಗಿ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಮತ್ತು ಬಾಂಧವ್ಯ ವೃದ್ಧಿಗೆ ಸಾಕಷ್ಟು ಚರ್ಚೆಗಳನ್ನು ಮಾಡಲಾಯಿತು.
ಆರಂಭದಲ್ಲಿ ಅಗಲಿದ ಆತ್ಮಗಳಿಗೆ ಸಂತಾಪ ಸೂಚನೆ ಮಾಡಲಾಯಿತು. ಕಾರ್ಯದರ್ಶಿ ಮಲ್ಲಮಾಡ ಸುಧಿ ಕಳೆದ ವಾರ್ಷಿಕ ಸಭೆಯ ವರದಿ ಮತ್ತು ಲೆಕ್ಕಪತ್ರ ಮಂಡನೆಯನ್ನು ಮಾಡಿದರು. ಉಳುವಂಗಡ ಲೋಹಿತ್ ಭೀಮಯ್ಯ ಪ್ರಾರ್ಥನೆ ಮಾಡಿದರು. ಮಚ್ಚಮಾಡ ತಮ್ಮಯ್ಯ ಕಾರ್ಯಕ್ರಮದಲ್ಲಿ ಮಾತನಾಡಿ ಕೇರಿಯು ೨೦ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಸಂಘದ ಪ್ರತಿಯೊಬ್ಬ ಸದಸ್ಯರ ಸುಖ ದುಃಖಗಳಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವಂತಾಗಿದೆ. ಮರಣ ನಿಧಿ ಸ್ಥಾಪನೆಯೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರಲಾಗುತ್ತಿದೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕೆಲಸಗಳು ನಡೆಯುವಂತಾಗಬೇಕು ಎಂದು ಹಲವು ಸಲಹೆಗಳನ್ನು ನೀಡಿದರು.
ವೇದಿಕೆಯಲ್ಲಿ ನಿರ್ದೇಶಕರಾದ ತೀತಮಾಡ ಜಯ, ಸುಳ್ಳಿಮಾಡ ಸುಬ್ಬಯ್ಯ, ತೀತಮಾಡ ಮುತ್ತಪ್ಪ, ತೀತಮಾಡ ಗೌರಿ, ಆರಮಾಡ ತಾರಾಮಣಿ, ಫೋರಂಗಡ ಪಟ್ಟು ಉಪಸ್ಥಿತರಿದ್ದರು.