ಮಡಿಕೇರಿ, ನ. ೧೧: ಸಮರ್ಥ ಕನ್ನಡಿಗರು ಸಂಸ್ಥೆ ವತಿಯಿಂದ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಗರದ ಓಂಕಾರ ಸದನದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ದೇವಯ್ಯ ಸಾಧಕರನ್ನು ಸನ್ಮಾನಿಸಿದರು.ಕಾವಾಡಿಯ ಕಾಮಧೇನು ಗೋಶಾಲೆಯ ರಾಮಚಂದ್ರಭಟ್ (ಗೋಪಾಲನೆ), ಮಡಿಕೇರಿಯ ಹಿರಿಯ ಪತ್ರಕರ್ತ ಬಿ.ಜಿ. ಅನಂತಶಯನ (ಸಾಮಾಜಿಕ ಸೇವೆ), ಮಡಿಕೇರಿಯ ಚೆರಿಯಮನೆ ಡಾ. ಆರ್. ಪ್ರಶಾಂತ್ (ವೈದ್ಯಕೀಯ), ಕಡಗದಾಳು ಗ್ರಾಮದ ಮಾದೇಟಿರ ಬೆಳ್ಯಪ್ಪ (ರಂಗಭೂಮಿ), ಮಡಿಕೇರಿಯ ಕಡ್ಲೇರ ತುಳಸಿ ಮೋಹನ್ (ಸಂಘಟನೆ), ಬಾಳೆಲೆಯ ಅನ್ವಿತ್ ಕುಮಾರ್ (ಸಂಗೀತ), ಕೆ.ಆರ್. ನಗರದ ಕೇಬಲ್ ಮಹದೇವ (ಕೃಷಿ) ಇವರನ್ನು ಸಮರ್ಥ ಕನ್ನಡಿಗರು ಸಂಸ್ಥೆಯ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಧಕರಿಗೆ ಸನ್ಮಾನ ನೆರವೇರಿಸಿ ಮಾತನಾಡಿದ ಎ.ಸಿ. ದೇವಯ್ಯ, ಪ್ರಾಚೀನ ಕಾಲದಿಂದಲೂ ದೇವಾಲಯಗಳಲ್ಲಿ ಸ್ಥಳೀಯ ಸಂಸ್ಕೃತಿ, ಸಾಹಿತ್ಯ ಚಟುವಟಿಕೆಗಳಿಗೆ ಆಶ್ರಯ ನೀಡಲಾಗುತ್ತಾ ಬರಲಾಗಿದೆ. ಓಂಕಾರ ಸದನದಲ್ಲಿಯೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದರು. ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ಜಗತ್ತಿನಲ್ಲಿ ಕನ್ನಡದಂತಹ ಲಿಪಿ ಹೊಂದಿರುವ ಭಾಷೆಗೆ ಎಂದಿಗೂ ಅಳಿವಿಲ್ಲ. ಎಲ್ಲಿಯವರೆಗೆ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ವ್ಯಾಪಿಸುವ ಪ್ರಯತ್ನ ಕಥೆ, ಚಿತ್ರ, ಹಾಡು, ನೃತ್ಯ, ಮುಂತಾದವುಗಳ ಮೂಲಕ ನಡೆಯುತ್ತದೆಯೇ, ಅಲ್ಲಿಯವರೆಗೂ ಕನ್ನಡ ಜೀವಂತಿಕೆಯ ಭಾಷೆಯಾಗಿ ವಿಶ್ವವ್ಯಾಪಿ ಕಂಗೊಳಿಸುವುದರಲ್ಲಿ ಸಂಶಯವಿಲ್ಲ.
ಲಯನ್ಸ್ ಟ್ರಸ್ಟ್ ಅಧ್ಯಕ್ಷ ಅಂಬೆಕಲ್ ನವೀನ್ ಮಾತನಾಡಿ, ಸಮರ್ಥ ಕನ್ನಡಿಗರು ಸಂಸ್ಥೆ ೮ ವರ್ಷಗಳಿಂದ ಸಾಕಷ್ಟು ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಬೆಳಕಿಗೆ ತರುತ್ತಿರುವುದು ಶ್ಲಾಘನೀಯ ಎಂದರು.
ಸಮರ್ಥ ಕನ್ನಡಿಗರು ರಾಜ್ಯ ಪ್ರಧಾನ ಸಂಚಾಲಕ ಆನಂದ್ ದೆಗ್ಗನಹಳ್ಳಿ, ಕೊಡಗು ಜಿಲ್ಲಾ ಸಂಚಾಲಕಿ ಕೆ.ಜಯಲಕ್ಷಿö್ಮ ವೇದಿಕೆಯಲ್ಲಿದ್ದರು. ಪ್ರತಿಮಾ ಹರೀಶ್ ರೈ ನಿರೂಪಿಸಿ, ದಿವ್ಯ ಸತೀಶ್ ಸ್ವಾಗತಿಸಿ, ಸೌಮ್ಯ ಭಟ್ ವಂದಿಸಿದರು. ತಳೂರು ಉಷಾರಾಣಿ ನಿರ್ವಹಿಸಿದರು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು. ಸಮರ್ಥ ಕನ್ನಡಿಗರು ಸಂಸ್ಥೆಯಿAದ ಕನ್ನಡ ಕವಿಗೋಷ್ಟಿ ಆಯೋಜಿಸಲ್ಪಟ್ಟಿತ್ತು. ಗಿರೀಶ್ ಕಿಗ್ಗಾಲು, ಹೇಮಂತ್ ಪಾರೇರ, ಕಡ್ಲೇರ ತುಳಸಿ ಮೋಹನ್, ಹರೀಶ್ ಕಿಗ್ಗಾಲು, ಕೂಡಕಂಡಿ ಓಂಶ್ರೀ ದಯಾನಂದ, ಅದಿಲ್ ಬಿ.ಎ., ಅಂಬೆಕಲ್ ಸುಶೀಲಾ ಕುಶಾಲಪ್ಪ, ತೆನ್ನೀರಾ ಟೀನಾ ಚಂಗಪ್ಪ, ಪಾಲ್ಗೊಂಡು ಕವನ ವಾಚಿಸಿದರು. ಚಿತ್ರಾ ಆರ್ಯನ್ ನಿರೂಪಿಸಿ, ಅರ್ಪಿತಾ, ಸಂದೀಪ್ ನಿರ್ವಹಿಸಿದರು.