ಚೆಯ್ಯAಡಾಣೆ, ನ. ೧೨: ಕೊಕೇರಿ ಗ್ರಾಮದ ನೀಲ್ಯಾಟ್ ಲೇಡಿಸ್ ಕ್ಲಬ್ ವತಿಯಿಂದ ಪ್ರಥಮ ವರ್ಷದ ಮಹಿಳೆಯರ ಕ್ರಿಕೆಟ್ ಪಂದ್ಯಾಟವನ್ನು ತಾ. ೨೨ ರಂದು ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ.

ಪ್ರಥಮ ಬಹುಮಾನ ರೂ. ೨೨,೦೦೦, ದ್ವಿತೀಯ ಬಹುಮಾನ ರೂ. ೧೧,೦೦೦, ತೃತೀಯ ಬಹುಮಾನ ರೂ. ೬೦೦೦ ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು. ಪಂದ್ಯಾಟದಲ್ಲಿ ೧೮ ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರು ಭಾಗವಹಿಸಬಹುದಾಗಿದ್ದು, ಭಾಗವಹಿಸುವ ತಂಡಗಳು ಹೆಸರು ನೋಂದಾಯಿಸಿಕೊಳ್ಳಲು ತಾ. ೧೫ ಕಡೆಯ ದಿನವಾಗಿದೆ.ತಂಡದ ಹೆಸರು ನೋಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ೭೯೭೫೬೬೨೬೦೦, ೯೪೮೨೮೩೯೦೬೮, ೮೧೩೦೧೦೪೮೯೮. ಸಂಪರ್ಕಿಸುವವರು ಕ್ಲಬ್‌ನ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಹಾಗೂ ಪ್ರಧಾನ ಕಾರ್ಯದರ್ಶಿ ಚೇನಂಡ ಗಾಯತ್ರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.