ಗೋಣಿಕೊಪ್ಪ ವರದಿ, ನ. ೧೨ : ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಒಂದರಿAದ ಐದನೇ ತರಗತಿಯವರೆಗಿನ ವಿದ್ಯಾರ್ಥಿಗಳ ನಾಲ್ಕು ತಂಡಗಳು ಕನ್ನಡ ನಾಡು ನುಡಿಗೆ ಸಂಬAಧಿಸಿದAತೆ ಗೀತೆಗಳನ್ನು ಸುಮಧುರವಾಗಿ ಹಾಡಿದರು. ಆರರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳ ನಾಲ್ಕು ತಂಡಗಳು ಕನ್ನಡ ರಾಜ್ಯೋತ್ಸವಕ್ಕೆ ಸಂಬAಧಿಸಿದ ಗೀತೆಗಳನ್ನು ಮಾದರಿ ಸಹಿತ ಹಾಡಿದರು. ಸಂಸ್ಥೆಯ ಸಂಸ್ಥಾಪಕಿ ಡಾ. ಅಪ್ಪನೆರವಂಡ ಶಾಂತಿ ಅಚ್ಚಪ್ಪ ಮಾತನಾಡಿ, ಕನ್ನಡ ನಾಡು ನುಡಿ, ಆಚಾರ- ವಿಚಾರಗಳನ್ನು ಉಳಿಸಲು ಮಹತ್ವದ ಕರೆ ಕೊಟ್ಟರು. ಪ್ರಾಂಶುಪಾಲರಾದ ಕೂತಂಡ ಪುಷ್ಪ ಸುಬ್ಬಯ್ಯ ಮಾತನಾಡಿ, ಕನ್ನಡವನ್ನು ಮತ್ತಷ್ಟು ಚೆನ್ನಾಗಿ ಮಾತನಾಡಲು ಕಲಿಯುವ ಉತ್ಸಾಹ ಅಗತ್ಯ ಎಂದರು. ಯಾವುದೇ ಭಾಷೆ ಕಲಿತರು ಸ್ಪಷ್ಟವಾಗಿ ಅಚ್ಚುಕಟ್ಟಾಗಿ ಕಲಿಯಬೇಕಿದೆ ಎಂದು ಹೇಳಿದರು. ಆದಿಲ್ ಕಾರ್ಯಕ್ರಮವನ್ನು ನಿರೂಪಿಸಿದರೆ, ಮಾಳವಿಕ ಅಭಿನಯ ಮಾಡಿ ಪ್ರಶ್ನೆಗಳನ್ನು ಕೇಳುವುದರ ಮೂಲಕ ಎಲ್ಲರನ್ನು ರಂಜಿಸಿದರು.