ಸುAಟಿಕೊಪ್ಪ, ನ. ೧೨: ಪರಿಸರ ಕಾನೂನು ಪರೀಕ್ಷೆಯಲ್ಲಿ ದಿವ್ಯಶ್ರೀ ಎಂ. ರಾಜ್ಯಕ್ಕೆ ೫ನೇ ರ್ಯಾಂಕ್ ಗಳಿಸಿದ್ದಾರೆ.
ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾನಿಲಯ ಹುಬ್ಬಳ್ಳಿಯಲ್ಲಿ ನಡೆದ ೭ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರಿಂದ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಶಿವರಾಜ್ ವಿ. ಪಾಟೀಲ್ ಹಾಗೂ ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಹೆಚ್.ಕೆ. ಪಾಟೀಲ್ ಅವರ ಸಮ್ಮುಖದಲ್ಲಿ ಚಿನ್ನದ ಪದಕ, ಪಾರಿತೋಷಕ ಹಾಗೂ ಅತ್ಯಧಿಕ ಅಂಕಗಳಿಸಿರುವದಕ್ಕೆ ಸ್ಕಾಲರ್ಶಿಪ್ ಸ್ವೀಕರಿಸಿದರು.
ದಿ. ಬಿ.ಎಸ್. ಮುತ್ತಪ್ಪ ಹಾಗೂ ಕುಸುಮ ದಂಪತಿಯ ಪುತ್ರಿಯಾಗಿರುವ ಇವರು ಪ್ರಸುತ್ತ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ವೃತ್ತಿ ನಡೆಸುತ್ತಿದ್ದು, ಮಡಿಕೇರಿಯಲ್ಲಿ ಸೇವೆ ಸಲ್ಲಿಸಿದ ಪೊಲೀಸ್ ಇನ್ಸ್ಪೆಕ್ಟರ್ ಶಾಂತರಾA ಅವರ ಪತ್ನಿ.