ನವದೆಹಲಿ, ನ. ೧೨: ರಾಷ್ಟç ರಾಜಧಾನಿಯ ಕೆಂಪುಕೋಟೆ ಬಳಿ ತಾ.೧೦ರ ಸಂಜೆ ನಡೆದ ಸ್ಫೋಟಕ್ಕೆ ಸಂಬAಧಿಸಿದAತೆ ಸ್ಫೋಟಕ ಹೊಂದಿದ್ದ ವಾಹನವನ್ನು ಚಾಲಿಸುತ್ತಿದ್ದ ಜೈಶ್ ಇ ಮಹಮದ್ ಉಗ್ರ ಸಂಘಟನೆಯ ಡಾ. ಉಮರ್‌ಟಿ ಮಾಲೀಕತ್ವದಲ್ಲಿ ಮತ್ತೊಂದು ವಾಹನ ಕೆಂಪು ಬಣ್ಣದ ಫೋರ್ಡ್ ಇಕೋ ಸ್ಪೋರ್ಟ್ ಇದ್ದುದ್ದಾಗಿ ತಿಳಿದುಬಂದಿದ್ದು, ಇದೀಗ ಆ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಉಮರ್ ಚಾಲಿಸುತ್ತಿದ್ದ ಎನ್ನಲಾದ ಹ್ಯೂಂಡಯ್ ಐ-೨೦ ವಾಹನ ಸ್ಫೋಟಗೊಂಡ ಪರಿಣಾಮ ಒಟ್ಟು ಇದುವರೆಗೆ ೧೩ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಉಮರ್ ಕೂಡ ಇದೇ ಸ್ಫೋಟದಲ್ಲಿ ಬಲಿಯಾಗಿರುವುದಾಗಿ ಮೇಲ್ನೋಟಕ್ಕೆ ತಿಳಿದು ಬಂದಿದ್ದು, ದೃಢೀಕರಣಕ್ಕೆ ಉಮರ್ ತಾಯಿಯ ಡಿ.ಎನ್.ಎ ಪರೀಕ್ಷೆ ನಡೆಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈ ಡಿ.ಎನ್.ಎ ಅನ್ನು ಸ್ಫೋಟಗೊಂಡ ಸ್ಥಳದಲ್ಲಿನ ದೇಹಗಳ ಡಿ.ಎನ್.ಎ ಗಳೊಂದಿಗೆ ಹೊಂದಿಸಿ ಖಚಿತಪಡಿಸುವುದೊಂದೇ ಬಾಕಿ ಇದೆ.

ತಪ್ಪಿಸಿಕೊಳ್ಳುವ ಸಂದರ್ಭ ಆಕಸ್ಮಿಕ

ಸ್ಫೋಟಗೊಂಡ ಶಂಕೆ

ತಾ.೧೦ ರಂದು ನಡೆದ ಸ್ಫೋಟದ ಹಿಂದಿನ ದಿನ ಫರಿದಾಬಾದ್‌ನಲ್ಲಿ ಜಮ್ಮು ಹಾಗೂ ದೆಹಲಿ ಪೊಲೀಸ್ ಜಂಟಿ ಕಾರ್ಯಾಚರಣೆ ನಡೆಸಿ ೨,೯೦೦ ಕೆ.ಜಿ ಸ್ಫೋಟಕ ಸೇರಿದಂತೆ ಶಸ್ತಾçಸ್ತçಗಳನ್ನು ವಶಪಡಿಸಿಕೊಂಡಿದ್ದರು. ಈ ಸ್ಫೋಟಕಗಳನ್ನು ಬಳಸಿ ದೊಡ್ಡ ಪ್ರಮಾಣದಲ್ಲಿ ಭಯೋತ್ಪಾದನಾ ದಾಳಿಗೆ ಉಗ್ರ ಜೈಶ್ ಸಂಘಟನೆ ಮುಂದಾಗಿತ್ತು ಎಂದು ತಿಳಿದಿಬಂದಿದೆ. ಡಾ.ಉಮರ್ ಕೂಡ ಇದೇ ಗುಂಪಿಗೆ ಸೇರಿದ್ದು, ಪೊಲೀಸ್ ಕಾರ್ಯಾಚರಣೆಯಲ್ಲಿ ಸ್ಫೋಟಕ ಹಾಗೂ ಕೆಲ ಶಂಕಿತ ಉಗ್ರರನ್ನು ವಶಪಡಿಸಿಕೊಂಡ ಹಿನ್ನೆಲೆ ಉಮರ್ ಹೆದರಿ ತಪ್ಪಿಸಿಕೊಳ್ಳುವ ಸಂದರ್ಭ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಫರೀದಾಬಾದ್ ಕಾರ್ಯಾಚರಣೆಯಲ್ಲಿ ಉಮರ್ ಸಹಯೋಗಿಗಳು ಎನ್ನಲಾದ ಡಾ.ಅದೀಲ್ ಹಾಗೂ ಡಾ.ಮುಜಾಮಿಲ್ ಅವರುಗಳ ಬಂಧನವಾಗಿದ್ದು ವಿಚಾರಣೆ ನಡೆಯುತ್ತಿದೆ.