ಮಡಿಕೇರಿ, ನ. ೧೨: ತಾಲೂಕು ಮಟ್ಟದ ಕ್ರೀಡೆಯಲ್ಲಿ ಜಯಗಳಿಸಿ ಮೂರ್ನಾಡು ವಿದ್ಯಾಸಂಸ್ಥೆ ಪ್ರೌಢಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
೪x೪೦೦ ಮೀಟರ್ ರಿಲೇಯಲ್ಲಿ ಎಂ.ಆರ್. ನಿಶಾಂತ್, ಕೆ.ಎನ್. ಉಸೈದ್, ಕೆ.ಆರ್. ನಾಜಿಮ್, ಟಿ.ಯು. ನಮನ್ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಎಂ.ಆರ್. ನಿಶಾಂತ್ ತಾಲೂಕು ಮಟ್ಟದ ತ್ರಿವಿಧ ಜಿಗಿತದಲ್ಲಿ ದ್ವಿತೀಯ ಹಾಗೂ ಉದ್ದ ಜಿಗಿತದಲ್ಲಿ ತೃತೀಯ, ಬಾಲಕಿಯ ಉದ್ದ ಜಿಗಿತದಲ್ಲಿ ಫತಿಮತ್ ಜುಮ್ಣ ತೃತೀಯ ಸ್ಥಾನ ಪಡೆದಿದ್ದಾರೆ.