ಮಡಿಕೇರಿ, ನ. ೧೨: ಶಾಲಾ ಶಿಕ್ಷಣದಲ್ಲಿ ಸ್ಥಳೀಯ ಕಲೆಗಳು ಅಂತರ್ಗತಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಅರಿವು ಮೂಡಿಸಲು ಇಂಡಿಯಾ ಫೌಂಡೇಶನ್ ಫಾರ್ ದ ಆರ್ಟ್ಸ್ ಸಂಸ್ಥೆಯಿAದ ಕೊಡಗು ಜಿಲ್ಲೆಯಾದ್ಯಂತ ಕಲಾಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ಐಎಫ್‌ಎಯ ಕಲಾ ವಿಭಾಗದ ಕಾರ್ಯಕ್ರಮ ಅಧಿಕಾರಿ ರಾಧಿಕಾ ಭಾರದ್ವಾಜ್ ಹೇಳಿದರು.

ಬೆಂಗಳೂರಿನ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಸಂಸ್ಥೆಯ ವತಿಯಿಂದ ಕೊಡಗು ಜಿಲ್ಲೆಯಲ್ಲಿ ನಡೆದ ಕಲಾಯಾತ್ರೆಗೆ ಸೋಮವಾರಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳ ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆ ತರುವ ಉದ್ದೇಶದಿಂದ ಐಎಫ್‌ಎ ಸಂಸ್ಥೆ ಪ್ರತೀ ವರ್ಷ ಶಿಕ್ಷಕರು ಹಾಗೂ ಕಲಾವಿದರಿಗೆ ಕಲಿಕಲಿಸು ಯೋಜನೆಯನ್ವಯ ಅನುದಾನ ನೀಡುತ್ತಿದೆ ಎಂದರು.

ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಮಂಜೇಶ್ ಎಂ.ವಿ. ಮಾತನಾಡಿ, ಶಿಕ್ಷಣದಲ್ಲಿ ಕಲೆಯ ವಿವಿಧ ಸಾಧ್ಯತೆಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕಲಾಯಾತ್ರೆಯ ಚಟುವಟಿಕೆಗಳು ಗಮನೀಯವಾಗಿವೆ ಎಂದರು.

ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಗಿರೀಶ್ ಬಿ.ಆರ್., ಪ್ರೇಮಾ ವಿ., ಪ್ರೌಢಶಾಲಾ ವಿಭಾಗದ ಪ್ರಬಾರ ಮುಖ್ಯ ಶಿಕ್ಷಕ ಶಶಿಧರ್, ಸಹಶಿಕ್ಷಕರಾದ ವಿಜಯ ಕುಮಾರ್, ರಾಜರತ್ನ, ಐಎಫ್‌ಎ ಸಂಪನ್ಮೂಲ ವ್ಯಕ್ತಿಗಳಾದ ಭಾರತಿ ಕೊಪ್ಪ, ಪ್ರಶಾಂತ್ ಮೈಸೂರು, ಪ್ರವೀಣ್ ಬೆಳ್ಳಿ, ಮೌನೇಶ ವಿಶ್ವಕರ್ಮ, ರಾಣಿ ಮೈಸೂರು, ದೀಪಾ ಮೈಸೂರು ಮೊದಲಾದವರು ಉಪಸ್ಥಿತರಿದ್ದರು.