ಐಗೂರು, ನ.೧೧: ತುಳು ಭಾಷೆ ಮಾತನಾಡುವ ಆದಿ ದ್ರಾವಿಡ ಸಮಾಜದವರು ಒಗ್ಗಟ್ಟಾಗಿ ಸದೃಢ ಸಮಾಜವನ್ನು ಕಟ್ಟಿ ಬೆಳೆಸಬೇಕಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪನ್ಯಾಸಕ ರಘು ಧರ್ಮಸೇನಾ ಕರೆ ನೀಡಿದರು.
ಹೊಸ ತೋಟದ ಸಮುದಾಯ ಭವನದಲ್ಲಿ ನಡೆದ ಜಿಲ್ಲಾಮಟ್ಟದ ಆದಿ ದ್ರಾವಿಡ ಸೇವಾ ಸಮಾಜದ ಸಭೆಯಲ್ಲಿ ಮಾತನಾಡಿದರು.ಸರಕಾರಕ್ಕೆ ಸಮುದಾಯದ ಕೂಗು ಮುಟ್ಟಬೇಕಾಗಿದ್ದು, ಕುಲಶಾಸ್ತç ಅಧ್ಯಯನ ಆಗಬೇಕಾಗಿದೆ. ಕೃಷಿ ಮೂಲದ ಸಮುದಾಯವಾಗಿದ್ದು, ಸಮಾಜದಲ್ಲಿ ಎಲ್ಲರಂತೆ ನಮಗೆ ಸ್ಥಾನಮಾನ ಸಿಗಬೇಕು. ನಾವು ಆರ್ಥಿಕವಾಗಿ ಸಬಲರಾಗಬೇಕು. ಸಾಂಸ್ಕೃತಿಕವಾಗಿ ಶ್ರೀಮಂತಿಕೆಯ ಸಮುದಾಯ ನಮ್ಮದ್ದಾಗಿದ್ದು, ಸಾಮೂಹಿಕ ಚಳವಳಿಯಲ್ಲಿ ಮುಂಚೂಣಿಯಲ್ಲಿ ಹೋರಾಡುವ ಸಮುದಾಯ ನಮ್ಮದು, ಸಮಾಜದ ಬಗ್ಗೆ ಜನರಿಗೆ ಮನದಟ್ಟು ಮಾಡುವ ಕೆಲಸ ಆಗಬೇಕು. ನಮಗೆ ನಮ್ಮ ಸಮುದಾಯದ ಬಗ್ಗೆ ತಿಳಿದಿಲ್ಲ. ಹರಿದು ಹಂಚಿ ಹೋಗಿದ್ದ ಸಮುದಾಯ ಬಾಂಧವರನ್ನು ಆದಿ ದ್ರಾವಿಡ ಸಂಘಟನೆಯ ಅಡಿಯಲ್ಲಿ ಒಟ್ಟು ಸೇರಿಸಬೇಕಾಗಿದೆ ಎಂದರು.
ಸAಘದ ಜಿಲ್ಲಾಧ್ಯಕ್ಷ ಕುಶಾಲಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದು, ರಾಜ್ಯ ಕಾರ್ಯದರ್ಶಿ ವಕೀಲ ಪಿ.ಬಿ. ಸುರೇಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟರಾಜು, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಕಿಟ್ಟು, ವೀರಾಜಪೇಟೆ ತಾಲೂಕು ಅಧ್ಯಕ್ಷ ಶಿವಪ್ಪ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.