ಕೂಡಿಗೆ, ನ. ೧೨ : ಉದ್ಯಮಿಗಳು, ಕಾಂಗ್ರೆಸ್ ಮುಖಂಡರು ಹಾಗೂ ಸಮಾಜ ಸೇವಕರಾದ ನಾಪಂಡ ಮುತ್ತಪ್ಪ, ನಾಪಂಡ ಮುದ್ದಪ್ಪ ಸಹೋದರರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳಿಂದ ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘದ ಸಭಾಂಗಣದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಲವು ಮಂದಿಗೆ ಗೌರವಿಸಿ ಸನ್ಮಾನಿಸಲಾಯಿತು. ಮಾಸ್ಟರ್ ತಿಮ್ಮಪ್ಪ, ಪತ್ರಕರ್ತ ಕೆ.ಕೆ ನಾಗರಾಜಶೆಟ್ಟಿ, ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ದಿಡ್ಡಳ್ಳಿ ಹೋರಾಟಗಾರ್ತಿ ಮುತ್ತಮ್ಮ, ಬೋಪಣ್ಣ, ಮಂಜಣ್ಣ, ಕುಸ್ತಿ ಪಟು ವಿಕಾಶ್, ಗುಲ್‌ಜರ್, ಅವರನ್ನು ನಾಪಂಡ ಮುದ್ದಪ್ಪ, ನಾಪಂಡ ಮುತ್ತಪ್ಪ ಸಹೋದರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಅಭಿಮಾನಿ ಬಳಗದ ಮುಖಂಡ ಮಂಜು ನೇತೃತ್ವದಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು. ಅಭಿಮಾನಿಗಳಾದ ಹರೀಶ್ ವಿಜಯ್, ಶಾಜು, ಕಿರಣ್, ಲೋಕೇಶ್, ಕಾರ್ತಿಕ್ ಸೇರಿದಂತೆ ಹಲವು ಮಂದಿ ಇದ್ದರು.