ಮಡಿಕೇರಿ, ನ. ೧೧: ಮಡಿಕೇರಿ ತಾಲೂಕಿನ ಬೇಂಗ್‌ನಾಡ್ (ಚೇರಂಬಾಣೆ) ಕೊಡವ ಸಮಾಜದ ಪದಾಧಿಕಾರಿಗಳು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರನ್ನು ಭೇಟಿ ಮಾಡಿ ಸಮಾಜದ ಕಟ್ಟಡ ಅನುದಾನಕ್ಕೆ ಬೇಡಿಕೆ ಸಲ್ಲಿಸಿದರು.

ಸುಮಾರು ರೂ. ೪ ಕೋಟಿ ವೆಚ್ಚದಲ್ಲಿ ಬೇಂಗ್‌ನಾಡ್ ಕೊಡವ ಸಮಾಜದ ಕಟ್ಟಡ ನಿರ್ಮಾಣಕ್ಕೆ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಸುಸಜ್ಜಿತ ಭವನ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದು, ಸರ್ಕಾರದಿಂದ ಅನದಾನ ಒದಗಿಸುವಂತೆ ಶಾಸಕರಲ್ಲಿ ಕೋರಲಾಯಿತು.

ಶಾಸಕ ಪೊನ್ನಣ್ಣ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶಾಸಕರನ್ನು ಭೇಟಿ ಮಾಡಿದ ನಿಯೋಗದಲ್ಲಿ ಅಧ್ಯಕ್ಷ ಬಾಚÀರಣಿಯಂಡ ಗಣಪತಿ, ಕಾರ್ಯದರ್ಶಿ ಕೇಕಡ ಮೊಣ್ಣಪ್ಪ, ಪದಾಧಿಕಾರಿಗಳಾದ ನಾಪಂಡ ಪ್ರತಾಪ್, ಕುಂಚೆಟ್ಟಿರ ಅಜಿತ್ ಪೆಮ್ಮಯ್ಯ, ಕಲ್ಮಾಡಂಡ ಗಣೇಶ, ವಾಸು ಉತ್ತಯ್ಯ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.