ಕುಶಾಲನಗರ, ನ. ೧೧: ಕಾಮಗಾರಿ ಹಲವು ಕಾರಣಗಳಿಂದ ಕಳೆದ ಎರಡು ವರ್ಷಗಳಿಂದ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಈ ವರ್ಷದ ಅಂತ್ಯದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಲ್ಲಿದೆ.
ಕುಶಾಲನಗರ ಮಡಿಕೇರಿ ರಸ್ತೆಯ ಬಸವನಹಳ್ಳಿ ವ್ಯಾಪ್ತಿಯಲ್ಲಿ ಸುಮಾರು ೪ ಎಕರೆ ಜಾಗದಲ್ಲಿ ಎಂಟು ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕುಶಾಲನಗರ ಘಟಕದ ಕಾಮಗಾರಿ ನಿರಂತರ ಮಳೆ ಹಿನ್ನೆಲೆಯಲ್ಲಿ ಕುಂಟುತ್ತಾ ಸಾಗಿತ್ತು.
ಇದೀಗ ನೂತನ ಘಟಕದ ಆಡಳಿತ ವಿಭಾಗದ ಕಚೇರಿ, ಯಾಂತ್ರಿಕೃತ ವಿಭಾಗ ವರ್ಕ್ ಶಾಪ್, ಬಸ್ ರಿಪೇರ್ ಬೇ ಸೇರಿದಂತೆ ಹಲವು ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿ ಇವೆ.
ಘಟಕದ ಆವರಣಕ್ಕೆ ಸುತ್ತಲೂ ಕಾಂಪೌAಡ್ ನಿರ್ಮಾಣ ಕಾಮಗಾರಿ ಸಂಪೂರ್ಣಗೊAಡಿದೆ. ಇನ್ನುಳಿದಂತೆ ಭದ್ರತಾ ಕೊಠಡಿ ಕಟ್ಟಡ, ಪೆಟ್ರೋಲ್ ಬಂಕ್ ಮತ್ತು ಬಹುತೇಕ ಮೂಲಭೂತ ಸೌಲಭ್ಯಗಳು ಒದಗಿಸುವ ನಿಟ್ಟಿನಲ್ಲಿ ಕಾಮಗಾರಿ ಭರದಿಂದ ಸಾಗುತ್ತಿದೆ.
ಮೂಲವಾಗಿ ಅರಣ್ಯ ಇಲಾಖೆಗೆ ಸೇರಿದ ಈ ಸ್ಥಳದಲ್ಲಿ ಬೆಳೆದು ನಿಂತಿದ್ದ ಮರಗಳ ತೆರವುಗೊಳಿಸುವ ಕಾರ್ಯ ವಿಳಂಬ ಆಗಿರುವ ಹಿನ್ನೆಲೆಯಲ್ಲಿ ಹಾಗೂ ನಿರಂತರ ಆರು ತಿಂಗಳ ಕಾಲ ಮಳೆ ಸುರಿದ ಕಾರಣ ಕಾಮಗಾರಿ ವಿಳಂಬಗೊAಡಿದೆ ಎಂದು ಕಟ್ಟಡ ನಿರ್ಮಾಣ ಉಸ್ತುವಾರಿ ಹೊತ್ತಿರುವ ಇಂಜಿನಿಯರ್ ಪವನ್ ಅವರು ‘ಶಕ್ತಿ’ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಅರಣ್ಯದ ಭೂಪ್ರದೇಶ ಶೀತಮಯವಾದ ಹಿನ್ನಲೆಯಲ್ಲಿ ಸಾಮಗ್ರಿಗಳು ಸಾಗಿಸುವ ಸಂದರ್ಭ ಬೃಹತ್ ಗಾತ್ರದ ವಾಹನಗಳು ಕೆಸರಿನಲ್ಲಿ ಸಿಲುಕಿಕೊಳ್ಳುತ್ತಿದ್ದ ಕಾರಣ ಕಾಮಗಾರಿ ವೇಗಕ್ಕೆ ತೊಡಕು ಉಂಟಾಯಿತು ಎಂದು ಅವರು ತಿಳಿಸಿದ್ದಾರೆ.
ಕಳೆದ ಎರಡು ವಾರಗಳಿಂದ ಮಳೆ ಪ್ರಮಾಣ ಕ್ಷೀಣಗೊಂಡ ಕಾರಣ ಕಾಮಗಾರಿ ನಿರಂತರವಾಗಿ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈ ಬಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಮಡಿಕೇರಿ ಕ್ಷೇತ್ರದ ಶಾಸಕ ಡಾ ಮಂತರ್ ಗೌಡ, ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಈಗಾಗಲೇ ರಾಜ್ಯ ಸಾರಿಗೆ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಕ್ಷಣ ಘಟಕವನ್ನು ಲೋಕಾರ್ಪಣೆಗೊಳಿಸುವ ಕಾರ್ಯ ನಡೆಯಲಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಹು ನಿರೀಕ್ಷಿತ ಕುಶಾಲನಗರ ಡಿಪೋ ಶೀಘ್ರದಲ್ಲಿ ಪ್ರಾರಂಭಗೊAಡರೆ ಸಾರಿಗೆ ಸಂಸ್ಥೆಯಿAದ ಹೆಚ್ಚಿನ ಸೌಲಭ್ಯ ದೊರಕುವುದರೊಂದಿಗೆ ಸಾವಿರಾರು ೪ಐದÀನೇ ಪುಟಕ್ಕೆ ಸಂಖ್ಯೆಯ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಮಗಾರಿ ನಡೆಯುವ ಸ್ಥಳಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪುತ್ತೂರು ವಿಭಾಗದ ಅಧಿಕಾರಿ ಹರಿಬಾಬು ಅವರು ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದ್ದು ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದಾರೆ.
ಇದೀಗ ಮೈಸೂರು ಕುಶಾಲನಗರ ಚತುಷ್ಪಥ ಹೆದ್ದಾರಿ ಕಾಮಗಾರಿ ಕೂಡ ಚಾಲನೆಗೊಂಡಿದ್ದು ಇದೇ ಘಟಕದ ಮುಂಭಾಗದಲ್ಲಿ ಮಡಿಕೇರಿ ಹೆದ್ದಾರಿ ರಸ್ತೆಗೆ ಆನೆಕಾಡು ಬಳಿ ಸಂಪರ್ಕಗೊಳ್ಳಲಿದೆ.
ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಬಸವನಹಳ್ಳಿ ಗುಡ್ಡೆಹೊಸೂರು ಹೊಸಕೋಟೆ ವ್ಯಾಪ್ತಿಯ ಗ್ರಾಮಗಳು ಶೀಘ್ರ ಬೆಳವಣಿಗೆ ಹಾಗೂ ಅಭಿವೃದ್ಧಿ ಪಥದತ್ತ ಸಾಗುವುದು ಖಚಿತ ಎನ್ನುವುದು ಸ್ಥಳೀಯ ಉದ್ಯಮಿಗಳ ಆಶಾ ಭಾವನೆಯಾಗಿದೆ. ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕುಶಾಲನಗರ ಬಸ್ ಡಿಪೋ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಲೋಕಾರ್ಪಣೆ ಗೊಳಿಸುವ ನಿಟ್ಟಿನಲ್ಲಿ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಕಾರ್ಯಯೋನ್ಮುಖರಾಗಬೇಕಾಗಿದೆ.