ಚೆಯ್ಯಂಡಾಣೆ, ನ. ೧೨: ಕೋಕೇರಿ ಪ್ರೀಮಿಯರ್ ಲೀಗ್ (ಕೆಪಿಎಲ್) ದ್ವಿತೀಯ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅದ್ದೂರಿಯಾಗಿ ೩ ದಿನಗಳ ಕಾಲ ನಡೆಯಿತು.

ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನಲ್ಲಿ ನಡೆದ ಫೈನಲ್ ಪಂದÀ್ಯದಲ್ಲಿ ಬೌಲ್‌ಔಟ್ ನಿಯಮದಲ್ಲಿ ನಡೆದ ಪಂದÀ್ಯದಲ್ಲಿ ಹರಿಕಾ ಕ್ರಿಕೆಟರ್ಸ್ ತಂಡವನ್ನು ಸೋಲಿಸುವ ಮೂಲಕ ಟೀಂ ಹಂಟರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.

ಬೌಲ್‌ಔಟ್‌ನಲ್ಲಿ ಮೊದಲು ಬೌಲಿಂಗ್ ಮಾಡಿದ ಹರಿಕಾ ಕ್ರಿಕೆಟರ್ಸ್ ತಂಡ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ನಂತರ ಬೌಲಿಂಗ್ ಆರಂಭಿಸಿದ ಟೀಮ್ ಹಂಟರ್ಸ್, ೫ನೇ ಬಾಲ್ ಅನ್ನು ತಂಡದ ಆಟಗಾರ ತಬ್‌ಶೀರ್ ವಿಕೆಟ್ ಉರುಳಿಸಿ ಚಾಂಪಿಯನ್ ಪಟ್ಟ ಮೂಡಿಗೇರಿಸಿಕೊಂಡಿತು.

ಇದಕ್ಕೂ ಮೊದಲು ನಡೆದ ಮೊದಲ ಕ್ವಾಲಿಫೈಯರ್‌ನಲ್ಲಿ ಚೆಯ್ಯಂಡಾಣೆ ಸೂಪರ್ ಕಿಂಗ್ಸ್ ತಂಡವನ್ನು ಟೀಂ ಹಂಟರ್ಸ್ ತಂಡ ೬ ರನ್‌ಗಳಿಂದ ಸೋಲಿಸಿ ಫೈನಲ್ ಪ್ರವೇಶ ಪಡೆಯಿತು.

ಎರಡನೇ ಕ್ವಾಲಿಫೈಯರ್‌ನಲ್ಲಿ ಹರಿಕಾ ಕ್ರಿಕೆಟರ್ಸ್ ತಂಡ ಚೆಯ್ಯಂಡಾಣೆ ಸೂಪರ್ ಕಿಂಗ್ಸ್ ತಂಡವನ್ನು ೫ ರನ್‌ಗಳಿಂದ ಸೋಲಿಸಿ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿತು. ಚಾಂಪಿಯನ್ ಟೀಂ ಹಂಟರ್ಸ್ ತಂಡಕ್ಕೆ ರೂ. ೫೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ರನ್ನರ್ಸ್ ಹರಿಕಾ ಕ್ರಿಕೆಟರ್ಸ್ ತಂಡಕ್ಕೆ ರೂ. ೩೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ತೃತೀಯ ಸ್ಥಾನ ಪಡೆದ ಚೆಯ್ಯಂಡಾಣೆ ಸೂಪರ್ ಕಿಂಗ್ಸ್ ತಂಡಕ್ಕೆ ರೂ. ೧೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಹಾಗೂ ನಾಲ್ಕನೇ ಸ್ಥಾನ ಪಡೆದ ಅದ್ವಿತ್ ಕ್ರಿಕೆಟರ್ಸ್ ತಂಡಕ್ಕೆ ಆಕರ್ಷಕ ಟ್ರೋಫಿ ನೀಡಲಾಯಿತು.

ವೈಯಕ್ತಿಕ ಬಹುಮಾನ

ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಟೀಂ ಹಂಟರ್ಸ್ನ ತಬ್‌ಶಿರ್, ಉತ್ತಮ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ಟೈಟಾನ್ಸ್ ಕೆದಮುಳ್ಳೂರು ತಂಡದ ಆಟಗಾರ ನವೀನ್ ನಂಜಪ್ಪ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಕೆಸಿಸಿ ತಂಡದ ಆಟಗಾರ ಅಸ್ಕರ್, ಹೆಚ್ಚು ಸಿಕ್ಸರ್ ಭಾರಿಸಿದ ಪ್ರಶಸ್ತಿಯನ್ನು ಗ್ಲೋಬಲ್ ಪೆರಾಟಿಸ್ ತಂಡದ ದರ್ಶನ್ ಕರಿನೆರವಂಡ, ಬೆಸ್ಟ್ಬೌಲರ್ ಪ್ರಶಸ್ತಿಯನ್ನು ಅದ್ವಿತ್ ಕ್ರಿಕೆಟರ್ಸ್ ತಂಡದ ನೌಶಾದ್ ಕೆ.ಕೆ., ಎಮರ್ಜಿಂಗ್ ಪ್ಲೇಯರ್ ಆಗಿ ಗ್ಲೋಬಲ್ ಪೆರಾಟಿಸ್ ತಂಡದ ಮುಜೀಬ್, ಬೆಸ್ಟ್ಫೀಲ್ಡರ್ ಆಗಿ ಹರಿಕಾ ಕ್ರಿಕೆಟರ್ಸ್ ತಂಡದ ಗಗನ್, ಶಿಸ್ತುಬದ್ದ ತಂಡ ಪ್ರಶಸ್ತಿಯನ್ನು ಕೋಕೇರಿ ಕ್ರಿಕೆಟ್ ಕ್ಲಬ್ ತಂಡ ಪಡೆದುಕೊಂಡಿತು.

ಪAದ್ಯಾಟದ ತೀರ್ಪುಗಾರರಾಗಿ ಇಮ್ರಾನ್ ಕುಟ್ಟಿ ಹಾಗೂ ಹನೀಫಾ ಕಾರ್ಯ ನಿರ್ವಹಿಸಿದರೆ, ಸ್ಕೋರರ್ ಆಗಿ ಗಗನ್, ರಿಷಿತ್ ಚೋಕು ಹಾಗೂ ವೀಕ್ಷಕ ವಿವರಣೆಯನ್ನು ಹನೀಫಾ, ಕಾಳಪ್ಪ, ಅರ್ಷಾದ್ ನಡೆಸಿಕೊಟ್ಟರು.

ಕೆಪಿಎಲ್ ಅಧ್ಯಕ್ಷ ಚೇನಂಡ ರೋಷನ್ ಚಂಗಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ನರಿಯಂದಡ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ರಾಜೇಶ್ ಅಚ್ಚಯ್ಯ, ಜಮಾಲ್ ಕಿಕ್ಕರೆ, ಕೆಪಿಎಲ್‌ನ ಉಪಾಧ್ಯಕ್ಷ ಪೆಮ್ಮಂಡ ದಕ್ಷತ್ ಸುಬ್ಬಯ್ಯ, ಕೋಶಾಧಿಕಾರಿ ಚೇನಂಡ ವಿಪಿನ್ ಗಣಪತಿ, ಪೊನ್ನಚಂಡ ಕಾಳಪ್ಪ, ಚೇನಂಡ ಹರ್ಷ ಅಯ್ಯಣ್ಣ, ಸೋಮಯ್ಯ, ಪೊನ್ನಯ್ಯ, ಅಜಿತ್ ಚಂಗಪ್ಪ, ಕುಮ್ಮಂಡ ಗಣಪತಿ, ಪೊನ್ನಚಂಡ ಭರತ್, ಮೂಡೇರ ವರುಣ್, ಅಪ್ಪು, ಬಿಪಿನ್, ಗಗನ್, ಚಂಗುಳAಡ ಉತ್ತಯ್ಯ, ಕೆಪಿಎಲ್ ಆಡಳಿತ ಮಂಡಳಿಯ ಪದಾಧಿಕಾರಿಗಳು, ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು. ಅತಿಥಿಗಳು ಚಾಂಪಿಯನ್ ಹಾಗೂ ರನ್ನರ್ಸ್ ತಂಡಕ್ಕೆ ಬಹುಮಾನ ವಿತರಿಸಿದರು.