ಪೊನ್ನಂಪೇಟೆ, ನ. ೮: ಪೊನ್ನಂಪೇಟೆ ಕುಶಾಲಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ಆಯೋಜಿಸಲಾಗಿರುವ ಪೊನ್ನಂಪೇಟೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಪೊನ್ನಂಪೇಟೆ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ಬಿ.ಎಂ ವಿಜಯ್ ಅವರ ಬೌಲಿಂಗ್‌ಗೆ ಪೊನ್ನಂಪೇಟೆ ವಿ.ಎಸ್.ಎಸ್.ಎನ್ ಬ್ಯಾಂಕ್ ಅಧ್ಯಕ್ಷ ಚೀರಂಡ ಕಂದ ಸುಬ್ಬಯ್ಯ ಬ್ಯಾಟ್ ಮಾಡುವ ಮೂಲಕ ಚಾಲನೆ ನೀಡಲಾಯಿತು.

ಈ ಸಂದರ್ಭ ಚೀರಂಡ ಕಂದ ಸುಬ್ಬಯ್ಯ ಮಾತನಾಡಿ, ಕ್ರೀಡೆಯಿಂದ ದೈಹಿಕ ಮಾನಸಿಕ ಅರೋಗ್ಯ ಉತ್ತಮವಾಗುವುದರ ಜೊತೆಗೆ ಸ್ನೇಹ ಸಂಬAಧ ಗಟ್ಟಿಗೊಳ್ಳುತ್ತದೆ ಎಂದರು.

ಮತ್ತೊಬ್ಬ ಅತಿಥಿ ಬಿ.ಎಂ. ವಿಜಯ್ ಮಾತನಾಡಿ, ಕ್ರೀಡೆಯಿಂದಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.

ಪAದ್ಯಾವಳಿಯಲ್ಲಿ ೧೦ ತಂಡಗಳು ಪಾಲ್ಗೊಂಡಿದ್ದು, ಪಿ.ಪಿ.ಎಲ್ ಕ್ರೀಡಾಕೂಟದ ಅಧ್ಯಕ್ಷ ಸಂತೋಷ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೀರಂಡ ಕಂದ ಸುಬ್ಬಯ್ಯ, ಬಿ.ಎಂ. ವಿಜಯ್, ಅಲೀರ ರಶೀದ್, ಅಲೀರ ಮುಸಾ ಹಾಗೂ ಹತ್ತು ತಂಡಗಳ ಮಾಲೀಕರನ್ನು ಪಿ.ಪಿ.ಎಲ್ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭ ಹ್ಯಾರಿ ಜೋಡುಬೀಟಿ, ಪಿ.ಪಿ.ಎಲ್. ಗೌರವ ಅಧ್ಯಕ್ಷ ಕೆ.ಬಿ. ಮಂಜು, ಕಾರ್ಯದರ್ಶಿ ಮಯೂರ್, ಸಹ ಕಾರ್ಯದರ್ಶಿ ಸೋಯಾಲ್ ಉಣ್ಣಿ, ಖಜಾಂಚಿ ಜುನೈದ್, ಮೈದಾನ ಮೇಲ್ವಿಚಾರಕ ಮಹಮ್ಮದ್ ಅನೀಶ್, ಇನ್ನಿತರರು ಇದ್ದರು.