ಕುಶಾಲನಗರ, ನ. ೮: ಕುಶಾಲನಗರ ತಾಲೂಕಿನ ಮಾದಪಟ್ಟಣ ಗ್ರಾಮದ ೨.೫೪ ಎಕರೆ ವಿಸ್ತೀರ್ಣದ ಕುಳುವಾಡಿಕಟ್ಟೆ ಕೆರೆಯ ಒತ್ತುವರಿಯನ್ನು ಕಂದಾಯ ಅಧಿಕಾರಿಗಳು ಸರ್ವೆ ಇಲಾಖಾಧಿಕಾರಿಗಳೊಂದಿಗೆ ಜಂಟಿಯಾಗಿ ಹದ್ದುಬಸ್ತು ಗುರುತಿಸಿ ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಲಾಯಿತು.
ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಅವರು ಉಪಸ್ಥಿತರಿದ್ದು ಗ್ರಾಮ ಪಂಚಾಯಿತಿಗೆ ಕೆರೆಯನ್ನು ಹಸ್ತಾಂತರಿಸಿದರು.
ಈ ಸಂದರ್ಭ ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯ ಉಪಾಧ್ಯಕ್ಷ ಪ್ರವೀಣ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ ಎಂ ಆರ್, ಆಡಳಿತ ಮಂಡಳಿ ಸದಸ್ಯರಾದ ಶಿವಪ್ಪ ಗಂಗಮ್ಮ ಲಕ್ಷö್ಮಣ್ ರಮೇಶ್ ಕಂದಾಯಾಧಿಕಾರಿ ಸಂತೋಷ್ ಹಾಗೂ ಕಂದಾಯ ಮತ್ತು ಸರ್ವೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.