ಮಡಿಕೇರಿ, ನ. ೮ : ಮಲೇಷಿಯಾದಲ್ಲಿ ನವೆಂಬರ್ ೨೩ ರಿಂದ ಡಿ. ೩ರ ತನಕ ಜರುಗಲಿರುವ ಪ್ರತಿಷ್ಠಿತ ಅಜ್ಲಾನ್ ಶಾ ಕಪ್ ಹಾಕಿ ಪಂದ್ಯಾವಳಿಗೆ ಭಾರತ ತಂಡವನ್ನು ಹಾಕಿ ಇಂಡಿಯಾ ಪ್ರಕಟಿಸಿದ್ದು ಕೊಡಗಿನ ಹಾಕಿಪಟು ಚಂದೂರ ಬಿ. ಪೂವಣ್ಣ ತಂಡದಲ್ಲಿದ್ದಾರೆ. ರಾಜ್ಯದ ಮೂವರು ಆಟಗಾರರು ತಂಡಕ್ಕೆ ಆಯ್ಕೆಯಾಗಿದ್ದು, ಆರು ರಾಷ್ಟçಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿವೆ. ರಾಜ್ಯದ ಆಟಗಾರರಾದ ಮೋಹಿತ್, ಮೊಹಮದ್ ರಾಹಿಲ್ ಹಾಗೂ ಸಿ.ಬಿ. ಪೂವಣ್ಣ ತಂಡದಲ್ಲಿದ್ದಾರೆ. ಪೂವಣ್ಣ ಕಂಡAಗಾಲದ ನಿವಾಸಿ ಚಂದೂರ ಎಸ್. ಬಾಬಿ (ಪ್ರಭು) ಹಾಗೂ ಅನಿಲ ದಂಪತಿಯ ಪುತ್ರ.