ಮಡಿಕೇರಿ, ನ. ೮: ಕಾವೇರಿ ಹಾಗೂ ಲಕ್ಷö್ಮಣ ತೀರ್ಥ ನದಿಗಳಿಗೆ ತ್ಯಾಜ್ಯ ಹಾಗೂ ಮಲಿನಯುಕ್ತ ನೀರು ಸೇರದಂತೆ ಕ್ರಮಕೈಗೊಳ್ಳಬೇಕೆಂದು ಕೊಡಗು ಜಿಲ್ಲಾಧಿಕಾರಿಗೆ ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗದ ಲೇಖನಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಸೇರಿದಂತೆ ಹೊರರಾಜ್ಯಗಳಲ್ಲಿಯೂ ಕಾವೇರಿ ಹಾಗೂ ಲಕ್ಷö್ಮಣ ತೀರ್ಥ ನದಿ ನೀರು ಬಳಕೆಯಾಗುತ್ತಿದ್ದು, ಮಡಿಕೇರಿ, ಮೂರ್ನಾಡು, ನಾಪೋಕ್ಲು, ಭಾಗಮಂಡಲ, ಕುಶಾಲನಗರ ನೆಲ್ಲಿಹುದಿಕೇರಿ, ಗುಡ್ಡೆಹೊಸೂರು, ವೀರಾಜಪೇಟೆ, ಕಾಕೋಟುಪರಂಬು, ಸಿದ್ದಾಪುರ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಆಸ್ಪತ್ರೆ, ಹೊಟೇಲ್, ಇತರೆಡೆಗಳಿಂದ ತ್ಯಾಜ್ಯ ನದಿಗೆ ಬಿಡಲಾಗುತ್ತಿದೆ. ಇದರೊಂದಿಗೆ ನದಿ ತಟವೂ ಒತ್ತುವರಿಯಾಗಿದೆ. ಆದರೂ ಅಧಿಕಾರಿಗಳು ಕ್ರಮಕೈಗೊಳ್ಳದ ಕುರಿತು ಸೇವ್ ಕಾವೇರಿ ರಿವರ್ ಸಂಸ್ಥೆ ಆಯೋಗಕ್ಕೆ ದೂರು ಸಲ್ಲಿಸಿತ್ತು.
ದೂರು ದಾಖಲಾದ ನಂತರ ಪರಿಸರ, ಜೀವಶಾಸ್ತç ಇಲಾಖೆಗೆ ದೂರಿನ ಬಗ್ಗೆ ವಿಚಾರಣೆ ೪ಏಳನೇ ಪುಟಕ್ಕೆ ನಡೆಸಲು ಆಯೋಗ ಸೂಚಿಸಿತ್ತು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮೂಲಕ ವಿಚಾರಣೆ ನಡೆಸಿ ವರದಿ ಸಲ್ಲಿಸಿದ್ದು, ಇದರಲ್ಲಿ ಸಂಸ್ಕರಣೆ ಮಾಡದೆ ನದಿಗೆ ತ್ಯಾಜ್ಯ ಸೇರುತ್ತಿರುವುದು ಮೇಲ್ನೋಟಕ್ಕೆ ಕಂಡುಬAದ ಹಿನ್ನೆಲೆ ಹರಿಯುವ ಕಾವೇರಿ ಹಾಗೂ ಲಕ್ಷö್ಮಣ ತೀರ್ಥ ನದಿಗಳಿಗೆ ಯಾವುದೇ ತ್ಯಾಜ್ಯ ಹಾಗೂ ಮಲಿನ ನೀರು ಸೇರದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಕೈಗೊಂಡ ಕ್ರಮದ ಬಗ್ಗೆ ತಾ. ೨೭.೪.೨೦೨೬ಕ್ಕೆ ಅನುಪಾಲನ ವರದಿಯನ್ನು ಆಯೋಗಕ್ಕೆ ಸಲ್ಲಿಸುವಂತೆ ಕೊಡಗು ಜಿಲ್ಲಾಧಿಕಾರಿಗೆ ಆದೇಶ ಮಾಡಿದ್ದಾರೆ.