ವೀರಾಜಪೇಟೆ, ನ. ೮: ಕೊಡವ ಸಮಾಜಗಳ ಒಕ್ಕೂಟದ ಅಧೀನದಲ್ಲಿ ವಿವಿಧ ಕೊಡವ ಸಮಾಜಗಳ ನಡುವೆ ಬಾಳುಗೋಡುವಿನಲ್ಲಿ ನಡೆಯುತ್ತಿರುವ ಹಾಕಿ ಪಂದ್ಯಾಟದಲ್ಲಿ ಆರಾಯಿರನಾಡು ಹಾಗೂ ಪೊನ್ನಂಪೇಟೆ ಕೊಡವ ಸಮಾಜಗಳು ಫೈನಲ್ ಪ್ರವೇಶಿಸಿವೆ.
ಇಂದು ನಡೆದ ಮೊದಲ ಸೆಮಿಫೈನಲ್ ಪಂದ್ಯಾಟದಲ್ಲಿ ಆರಾಯಿರನಾಡು ಕೊಡವ ಸಮಾಜ ತಂಡವು ೩-೧ ಗೋಲುಗಳಿಂದ ಹುದಿಕೇರಿ ಕೊಡವ ಸಮಾಜ ತಂಡವನ್ನು ಟೈಬ್ರೇಕರ್‌ನಲ್ಲಿ ಪರಾಭವ ಗೊಳಿಸಿತು. ನಿಗದಿತ ಅವಧಿಯಲ್ಲಿ ಎರಡು ತಂಡಗಳು ಗೋಲು ಗಳಿಸದ ಕಾರಣ ಆಯೊಜಕರು ಟೈಬ್ರೇಕರ್ ನಿಯಮವನ್ನು ಅಳವಡಿಸಿದರು. ಆರಾಯಿರ ತಂಡದ ಪರ ಕರ್ತಚಿರ ಡ್ಯಾನಿ ಕಾಳಪ್ಪ, ಕೇಚಂಡ ದೇವಯ್ಯ, ಮೇಕೇರಿರ ರೋನಕ್ ತಿಮ್ಮಯ್ಯ ಗೋಲು ದಾಖಲಿಸಿದರು. ಹುದಿಕೇರಿ ತಂಡದ ಪರ ಚೆಕ್ಕೆರ ಬೋಪಣ್ಣ ಏಕೈಕ ಗೋಲುಗಳಿಸಿದರು. ಫೈನಲ್ ಪ್ರವೇಶದಿಂದ ವಂಚಿತರಾದರು.
ಎರಡನೆ ಸೆಮಿಫೈನಲ್ಸ್ನಲ್ಲಿ ಪೊನ್ನಂಪೇಟೆ ಕೊಡವ ಸಮಾಜ ತಂಡ ೩-೦ ಗೋಲುಗಳಿಂದ ಕುಟ್ಟಾ ಕೊಡವ ಸಮಾಜ ತಂಡವನ್ನು ಪರಾಭವ ಗೊಳಿಸಿತು. ಆರಂಭದಿAದಲೇ ಸಂಘಟಿತ ಆಟಕ್ಕೆ ಒತ್ತು ನೀಡಿದ ಪೊನ್ನಂಪೇಟೆ ತಂಡದ ಕೊಳೇರ ಹೃತಿಕ್ ಪ್ರಥಮಾರ್ಧದಲ್ಲಿ ೧೫ ಮತ್ತು ೨೦ ನಿಮಿಷದಲ್ಲಿ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ದ್ವೀತಿಯಾರ್ಧದ ೪೩ನೇ ನಿಮಿಷದಲ್ಲಿ ಗಾಣಂಗಡ ಬೆನ್ ಮತ್ತೊಂದು ಗೋಲು ಬಾರಿಸಿದರು.
ಪಂದ್ಯಾಟದ ತೀರ್ಪಗಾರರಾಗಿ ಕರವಂಡ ಅಪ್ಪಣ್ಣ, ಬೊಳ್ಳಚಂಡ ನಾಣಯ್ಯ, ಚಂದಪAಡ ಆಕಾಶ್, ಬೊಟ್ಟಂಗಡ ಕೌಶಿಕ್ ಕಾವೇರಪ್ಪ, ತಾಂತ್ರಿಕ ನಿರ್ದೇಶಕರಾಗಿ ಕನ್ನಂಬಿರ ಚಿಣ್ಣಪ್ಪ, ಕಾರ್ಯನಿರ್ವಹಿಸಿದರು. ಮಾಳೇಟಿರ ಶ್ರೀನಿವಾಸ್, ಚೆಪ್ಪುಡಿರ ಕಾರ್ಯಪ್ಪ ಪಂದ್ಯಾಟದ ವೀಕ್ಷಕ ವಿವರಣೆಯನ್ನು ನೀಡಿದರು. ತಾ.೯ರಂದು ಮಧ್ಯಾಹ್ನ ೨ ಗಂಟೆಗೆ ಫೈನಲ್ ಪಂದ್ಯಾಟ ನಡೆಯಲಿದೆ. ೪ಏಳನೇ ಪುಟಕ್ಕೆ (ಮೊದಲ ಪುಟದಿಂದ)
ಫೈಸೈರ‍್ಸ್ : ಫೈಸೈರ‍್ಸ್ ಮಹಿಳೆಯರ ಹಾಕಿ ಪಂದ್ಯಾಟದಲ್ಲಿ ನಡೆದ ಪ್ರಥಮ ಸೆಮಿಫೈನಲ್ಸ್ ಪಂದ್ಯದಲ್ಲಿ ವೀರಾಜಪೇಟೆ ಕೊಡವ ಸಮಾಜ ತಂಡ ೩-೦ ಗೋಲುಗಳಿಂದ ಬಾಳೆಲೆ ಕೊಡವ ಸಮಾಜವನ್ನು ಪರಾಭವಗೊಳಿಸಿ ಫೈನಲ್ಸ್ ಪ್ರವೇಶಿಸಿತು. ವೀರಾಜಪೇಟೆ ತಂಡದ ಪರ ಮುಕ್ಕಾಟಿರ ಕಾವ್ಯ, ಮಾಳೇಟಿರ ನೀಲಮ್ಮ, ಶಿವಚಾಳಿಯಂಡ ದೇಚಕ್ಕ ಗೋಲು ಗಳಿಸಿದರು.
ಎರಡನೇ ಸೆಮಿಫೈನಲ್ಸ್ನಲ್ಲಿ ಮೈಸೂರು ಕೊಡವ ಸಮಾಜ ೨-೦ ಗೋಲುಗಳಿಂದ ನಾಪೋಕ್ಲು ಕೊಡವ ಸಮಾಜವನ್ನು ಮಣಿಸಿ ಫೈನಲ್ಸ್ ಪ್ರವೇಶಿಸಿತು. ಮೈಸೂರು ಕೊಡವ ಸಮಾಜದ ಪರ ಮೇಕೇರಿರ ಶೈನಾ, ಚೆಯ್ಯಂಡ ಭಾಗ್ಯಶ್ರೀ ಗೋಲು ದಾಖಲಿಸಿದರು. ತೀರ್ಪಗಾರರಾಗಿ ಕುಪ್ಪಂಡ ದಿಲನ್, ಚೈಯ್ಯಂಡ ಅಪ್ಪಚ್ಚು ಕಾರ್ಯ ನಿರ್ವಹಿಸಿದರು.
ಮೈಸೂರು ಕೊಡವ ಸಮಾಜ ಹಾಗೂ ವೀರಾಜಪೇಟೆ ಕೊಡವ ಸಮಾಜದ ನಡುವೆ ತಾ.೯ರಂದು ಮಧ್ಯಾಹ್ನ ೧.೩೦ ಗಂಟೆಗೆ ಫೈನಲ್ ಪಂದ್ಯ ನಡೆಯಲಿದೆ.
ಯೋಧರ ಸ್ಥಂಭಕ್ಕೆ ಪುಷ್ಪ ನಮನ : ಪೂರ್ವಹ್ನ ೧೧ ಗಂಟೆಗೆ ನಿವೃತ್ತಿ ಲೆಫ್ಟಿನೆಂಟ್ ಕರ್ನಲ್ ಹಾಗೂ ಒಲಂಪಿಯನ್ ಬಾಳೇಯಡ ಸುಬ್ರಮಣಿ, ಹಾಗೂ ನಿವೃತ ಮೇಜರ್ ಜನರಲ್ ಕುಪ್ಪಂಡ ನಂಜಪ್ಪ ಅವರುಗಳು ಯೋಧರ ಸ್ಮಾರಕ ಸ್ಥಂಬಕ್ಕೆ ಪುಷ್ಪಗುಚ್ಚ ಇರಿಸಿ ಅಗಲಿದ ಯೋಧರಿಗೆ ನಮನ ಸಲ್ಲಿಸಿದರು. ಇದೇ ಸಂಧರ್ಭದಲ್ಲಿ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಕೊಡವ ಸಮಾಜದ ಒಕ್ಕೂಟದ ಉಪಾಧ್ಯಕ್ಷರುಗಳಾದ ಮಂಡುವAಡ ಮುತ್ತಪ್ಪ, ಚೆರಿಯಪಂಡ ಸುರೇಶ್ ನಂಜಪ್ಪ, ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಮಾಜಿ ಅಧ್ಯಕ್ಷ ಮಲ್ಲೆಂಗಡ ದಾದ ಬೆಳ್ಯಪ್ಪ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ, ಕೊಡಗು ಜಿಲ್ಲಾ ಮಾಜಿ ಸೈನಿಕರ ಸಹಕಾರ ಸಂಘದ ಪದಾಧಿಕಾರಿಗಳು ವಿವಿಧ ಕೊಡವ ಸಮಾಜದ ಅಧ್ಯಕ್ಷರುಗಳು, ಮತ್ತಿತರರು ಉಪಸ್ಥಿತರಿದ್ದರು.
-ಪಳೆಯಂಡ ಪಾರ್ಥ ಚಿಣ್ಣಪ್ಪ