ಮಡಿಕೇರಿ, ನ. ೮ : ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಅವರು ತಿಳಿಸಿದ್ದಾರೆ.
ಜಿಲ್ಲಾ ಪ್ರಚಾರ ಸಮಿತಿಯ ಉಪಾಧ್ಯಕ್ಷರುಗಳಾಗಿ ಮೋಹನ್ ಮೌರ್ಯ, ಬಾಚಮಂಡ ಲವ ಚಿಣ್ಣಪ್ಪ, ಕೋಶಾಧಿಕಾರಿಯಾಗಿ ಎ.ಕೆ.ಹ್ಯಾರಿಸ್, ಜಿಲ್ಲಾ ಸಂಯೋಜಕರಾಗಿ ಹೆಚ್. ನಟೇಶ್ ಗೌಡ, ಕೇಟೋಳಿರ ಮೋಹನ್ ರಾಜ್, ಎಸ್.ಸಿ. ಶರತ್ ಶೇಖರ್, ಮತ್ರಂಡ ದಿಲ್ಲು, ಜಿಲ್ಲಾ ಜಂಟಿ ಸಂಯೋಜಕರಾಗಿ ಕೆ. ನಂಜುAಡ ಸ್ವಾಮಿ, ಪುದಿಯನೆರವನ ರೇವತಿ ರಮೇಶ್, ಇಸಾಕ್ ಖಾನ್, ಪಂಕಜಾ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಸದಾನಂದ ಬಂಗೇರ, ಜುಬೈರ್, ಹೆಚ್.ಡಿ .ಗಣೇಶ್, ಶಬರೀಶ್ ಶೆಟ್ಟಿ, ಪಿ.ಜಿ. ಶೇಖರ್, ರಾಫಿಕ್, ಬಾಲಚಂದ್ರ ನಾಯರ್, ಜಾನಕಿ ವೆಂಕಟೇಶ್, ಔರಂಗಜೇಬ್, ವಿ.ಎಸ್. ಸಾಜಿ ಹಾಗೂ ಜುಲೇಕಾಬಿ ನೇಮಕಗೊಂಡಿದ್ದಾರೆ.
ಜಿಲ್ಲೆಯ ಶಾಸಕರುಗಳಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರ ಶಿಫಾರಸ್ಸಿನಂತೆ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಆದೇಶ ಪತ್ರ ನೀಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ನೂತನ ಸಮಿತಿಯ ಪ್ರಥಮ ಸಭೆಯನ್ನು ಡಿ.೧೨ ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದೆ ಎಂದು ಟಿ.ಪಿ. ರಮೇಶ್ ಹೇಳಿದ್ದಾರೆ.