ಗೋಣಿಕೊಪ್ಪ ವರದಿ, ನ. ೮ : ಬೆಂಗಳೂರು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೧೪ ವಯೋಮಿತಿಯ ನಾಲ್ಕನೇ ಕರ್ನಾಟಕ ಮಿನಿ ಒಲಂಪಿಕ್ಸ್ ಹಾಕಿ ಟೂರ್ನಿಯಲ್ಲಿ ಚಾಂಪಿಯನ್ ಬಾಲಕರ ಹಾಕಿ ಕೂರ್ಗ್ ತಂಡ ಸೋಲನುಭವಿಸಿ ಹೊರಬಿದ್ದಿದೆ.
ಬಳ್ಳಾರಿ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ೨-೪ ಗೋಲುಗಳಿಂದ ಸೋಲನುಭವಿಸಿತು. ಕೂರ್ಗ್ ಪರ ದೈವಿಕ್ ಪೂಣಚ್ಚ, ಪ್ರಖ್ಯಾತ್ ಪೂಜಾರಿ ಗೋಲು ಹೊಡೆದರು.
ಮೂರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಕಪ್ ಗೆಲ್ಲುವ ಉತ್ಸಾಹದಲ್ಲಿದ್ದ ತಂಡಕ್ಕೆ ತೀವ್ರ ನಿರಾಸೆಯಾಗಿದೆ.