ಮಡಿಕೇರಿ, ನ. ೭: ಸ್ವಾತಂತ್ರö್ಯ ಹೋರಾಟಗಾರ ಸುಬೇದಾರ್ ಅಪ್ಪಯ್ಯ ಗೌಡ ಹಾಗೂ ಹಾಲೇರಿ ರಾಜವಂಶದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ ಹಂಚಿಕೊAಡಿದ್ದ ವ್ಯಕ್ತಿಯನ್ನು ನಗರ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಕೆಲ ದಿನಗಳ ಹಿಂದೆ ಅಪ್ಪಯ್ಯಗೌಡ ಅವರ ಕುರಿತು ವ್ಯಕ್ತಿಯೊಬ್ಬರು ಫೇಸ್‌ಬುಕ್‌ನಲ್ಲಿ ಹಂಚಿಕೊAಡಿದ್ದ ಸಂದೇಶಕ್ಕೆ ನಾಪೋಕ್ಲು ಮೂಲದ, ಮಹಾ ರಾಷ್ಟçದಲ್ಲಿ ಉದ್ಯೋಗದಲ್ಲಿದ್ದ ಅರೆಯಡ ರಾಜ ಪೂವಯ್ಯ ಎಂಬವರನ್ನು ಮಡಿಕೇರಿ ನಗರ ಠಾಣೆಗೆ ಕರೆಸಿ ವಿಚಾರಣೆ ಕೈಗೊಂಡಿದ್ದಾರೆ.

ಅವಹೇಳನಕಾರಿ ಪೋಸ್ಟ್ ಕುರಿತು ಗೌಡ ಸಮಾಜಗಳ ಒಕ್ಕೂಟ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್‌ಗೆ ದೂರು ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿತ್ತು.