ಚೆಯ್ಯAಡಾಣೆ, ನ. ೪: ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್ ಜೆಎಂ) ಕೊಡಗು ಜಿಲ್ಲಾ ಸಮಿತಿಯ ವತಿಯಿಂದ “ಅರಳಿದ ಸಾಹಿತ್ಯ ಬೆಳಗಿದ ಸಮಾಜ”ಎಂಬ ಧ್ಯೇಯ ವಾಕ್ಯದಲ್ಲಿ ಮುಅಲ್ಲಿಂ ಮೆಹರ್ ಜಾನ್ ೨೦೨೫ ಕಾರ್ಯಕ್ರಮ ಜರುಗಿತು.

ಹಾಕತ್ತೂರಿನ ಶಾದಿ ಮಹಲ್ ಸಭಾಂಗಣದಲ್ಲಿ ಮೆಹರ್ ಜಾನ್ ಜಿಲ್ಲಾ ಚೆರ್ಮೆನ್ ಶಂಸುದ್ದಿನ್ ಅಮ್ಜದ್ದಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಉದ್ಘಾಟಿಸಿ ಮಾತನಾಡಿದರು.

ಎಸ್‌ವೈಎಸ್ ಜಿಲ್ಲಾಧ್ಯಕ್ಷ ಮುನೀರ್ ಮಹ್ಳರಿ, ಕೆಎಂಜೆ ಕೋಶಾಧಿಕಾರಿ ಖಾಲಿದ್ ಫೈಝಿ, ಹಾಕತ್ತೂರು ಮುಸ್ಲಿಂ ಜಮಾಅತ್ ಖತೀಬ್ ಅಬ್ದುಲ್ಲ ಖಾಸಿಮಿ, ಉಪಾಧ್ಯಕ್ಷ ಖಾಲಿದ್, ಎಸ್ ಜೆಎಂ ಜಿಲ್ಲಾಧ್ಯಕ್ಷ ಅಬ್ದುಲ್ಲ ಸಖಾಫಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಜಿಲ್ಲೆಯ ಒಟ್ಟು ೬ ರೇಂಜ್‌ಗಳಿAದ ೩೮ ಸ್ಪರ್ಧೆಗಳಲ್ಲಿ ೧೦೦ಕ್ಕೂ ಅಧಿಕ ಸ್ಪರ್ಧಾರ್ಥಿಗಳು ಪಾಲ್ಗೊಂಡಿದ್ದರು. ಇದರಲ್ಲಿ ಮೂರ್ನಾಡು ರೇಂಜ್ ೧೭೫ ಅಂಕ ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದರೆ, ೧೭೦ ಅಂಕ ಪಡೆದು ಎಮ್ಮೆಮಾಡು ರೇಂಜ್ ರನ್ನರ್ಸ್ ಸ್ಥಾನ ಪಡೆಯಿತು. ಸೋಮವಾರಪೇಟೆ ರೇಂಜ್ ೧೬೧ ಅಂಕ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಸ್ಟಾರ್ ಅಪ್ ದ ಚಾಂಪಿಯನ್ ಆಗಿ ಹೈ ಝೋನ್ ವಿಭಾಗದಿಂದ ಅಹ್ಮದ್ ಮದನಿ ವೀರಾಜಪೇಟೆ, ಅಲಿ ಮುಸ್ಲಿಯಾರ್ ಸೋಮವಾರಪೇಟೆ ಹಾಗೂ ಗ್ರೌಂಡ್ ಝೋನ್ ವಿಭಾಗದಲ್ಲಿ ಯೂನುಸ್ ಮರ್ಝೂಖಿ ಎಮ್ಮೆಮಾಡು ಆಯ್ಕೆಯಾದರು. ಈ ಸಂದರ್ಭ ಎಸ್ ಜೆಎಂ ಮಾಜಿ ಜಿಲ್ಲಾಧ್ಯಕ್ಷ ಮುಸ್ತಫಾ ಸಖಾಫಿ, ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್, ಕೋಶಾಧಿಕಾರಿ ಶರೀಫ್, ಎಸ್‌ಎಸ್‌ಎಫ್ ಜಿಲ್ಲಾಧ್ಯಕ್ಷ ಖಮರುದ್ದಿನ್ ಅನ್ವಾರಿ ಸಖಾಫಿ, ಎಸ್‌ಎಸ್‌ಎಫ್ ರಾಜ್ಯ ನಾಯಕ ಮುಜೀಬ್ ಕೊಂಡAಗೇರಿ, ಹಾಕತ್ತೂರು ಮುಸ್ಲಿಂ ಜಮಾಅತ್ ಅಧ್ಯಕ್ಷ ಅಬ್ದುಲ್ಲ, ಹಾಕತ್ತೂರ್ ಮುಸ್ಲಿಂ ಜಮಾಅತ್ ಪದಾಧಿಕಾರಿಗಳು, ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಕಾರ್ಯಕಾರಿ ಸಮಿತಿಯ ಸದಸ್ಯರುಗಳು, ಮತ್ತಿತರರು ಇದ್ದರು. ಮೆಹರ್ ಜಾನ್ ಸ್ವಾಗತ ಸಮಿತಿಯ ಕನ್ವಿನರ್ ಕಬೀರ್ ಝುಹರಿ ಸ್ವಾಗತಿಸಿ, ವಂದಿಸಿದರು.