ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ವಿವಿಧ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಂಭ್ರಮದಿAದ ಆಚರಿಸಲಾಯಿತು.

ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ದಾನಿಗಳಾದ ತಲ್ತಾರೆಶೆಟ್ಟಳ್ಳಿ ನಾಗ್ತಳ್ಳಿ ಗ್ರಾಮದ ಎಸ್.ಪಿ.ಗಿರಿ ಜೋಯಪ್ಪ ಅವರ ಸಹಕಾರದಿಂದ ಆಟೋ ನಿಲ್ದಾಣದಲ್ಲಿ ಹೊಸದಾಗಿ ನಿರ್ಮಾಣ ಮಾಡಿರುವ ಕನ್ನಡ ಧ್ವಜಸ್ತಂಭವನ್ನು ಉದ್ಘಾಟಿಸಲಾಯಿತು.

ಧ್ವಜಸ್ತಂಭÀ ಉದ್ಘಾಟಿಸಿ ಮಾತನಾಡಿದ ಗಿರಿ ಜೋಯಪ್ಪ ಅವರು, ಕನ್ನಡ ನಾಡು, ನುಡಿಗಾಗಿ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದರು.

ಈ ಸಂದರ್ಭ ಸಂಘದ ಅಧ್ಯಕ್ಷ ಉಮೇಶ್ ತಲ್ತಾರೆ, ದಾನಿಗಳಾದ ಎಸ್.ಪಿ. ಈರಮ್ಮ, ಸಂಘದ ಉಪಾಧ್ಯಕ್ಷ ಎಂ.ವೈ. ಜೀವನ್, ಕಾರ್ಯದರ್ಶಿ ಎಂ.ಎಸ್. ಮಹಮ್ಮದ್ ಶಫಿ, ಸಹ ಕಾರ್ಯದರ್ಶಿ ಎ.ಫೆಲಿಕ್ಸ್, ಖಜಾಂಚಿ ಕೆ.ಎಂ. ಶಶಿ ಸೇರಿದಂತೆ ಪದಾಧಿಕಾರಿಗಳು ಇದ್ದರು.

ಕಸಾಪ: ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತ್ಯ ಭವನದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ಪರಿಷತ್ ಅಧ್ಯಕ್ಷ ಎಸ್.ಡಿ. ವಿಜೇತ್ ನಾಡಧ್ವಜ ಹಾರಿಸಿದರು. ಕಾರ್ಯದರ್ಶಿ ಜ್ಯೋತಿ ಅರುಣ್, ಎ.ಪಿ. ವೀರರಾಜು, ಮಾಜಿ ಅಧ್ಯಕ್ಷರುಗಳಾದ ಜೆ.ಸಿ. ಶೇಖರ್, ಎಚ್.ಜೆ. ಜವರಪ್ಪ, ಪದಾಧಿಕಾರಿಗಳಾದ ಎಚ್.ಸಿ. ನಾಗೇಶ್ ಸಿ.ಎಸ್. ನಾಗರಾಜ್, ಕೆ.ಪಿ. ದಿನೇಶ್, ಕಾಟ್ನಮನೆ ಗಿರೀಶ್, ಶುಭ ಬಾಬುರಾಯ ಇದ್ದರು.

ಕರವೇ ವತಿಯಿಂದ: ಕೊಡಗು ಜಿಲ್ಲೆಯ ಪ್ರವೀಣ್ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕದ ಸೋಮವಾರಪೇಟೆ ತಾಲೂಕು ಅಧ್ಯಕ್ಷರಾದÀ ಗಣೇಶ್ ಗೌಡ ನೇತೃತ್ವದಲ್ಲಿ ಸೋಮವಾರಪೇಟೆ ನಗರದ ಕನ್ನಡಾಂಬೆ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.

ವೃತ್ತದಲ್ಲಿರುವ ಕನ್ನಡಾಂಬೆಯ ಪ್ರತಿಮೆಗೆ ಪದಾಧಿಕಾರಿಗಳು ಮಾಲಾರ್ಪಣೆ ಮಾಡಿದರು.

ಜಿಲ್ಲಾ ಯುವ ಘಟಕದ ಅಧ್ಯಕ್ಷ ವಸಂತ್ ಮತ್ತು ಕೊಡಗು ಜಿಲ್ಲಾ ಅಧ್ಯಕ್ಷ ದೀಪಕ್ ಅವರುಗಳು ಧ್ವಜಾರೋಹಣ ನೆರವೇರಿಸಿದರು.

ಪುರುಷೋತ್ತಮ್ ಮತ್ತು ಸುಮತಿ ಅವರಿಂದ ಕನ್ನಡ ಗೀತೆಗಾಯನ ಮೂಡಿಬಂತು. ನಗರ ಘಟಕದ ಅಧ್ಯಕ್ಷ ಬಿ.ಎಸ್. ಮಂಜುನಾಥ್, ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ಆರ್. ಮೋಹನ್, ಸಂಘದ ಜಿಲ್ಲಾ ಉಪಾಧ್ಯಕ್ಷ ಚಂದ್ರು, ಮದನ್, ರವೀಶ್ ಕಲ್ಕಂದೂರ್, ಲತಾ, ಇಬ್ರಾಹಿಂ, ಜೀವನ್, ನಿತಿನ್, ಸಚಿನ್, ವೆಂಕಟೇಶ್ ಸೇರಿದಂತೆ ಇತರರು ಇದ್ದರು.

ಅಬ್ಬೂರುಕಟ್ಟೆ: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಬೂರುಕಟ್ಟೆ ಗ್ರಾಮದಲ್ಲಿ ಸ್ಥಳೀಯ ರೆಡ್‌ಬುಲ್ ತಂಡದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ನಡೆಯಿತು.

ನಮ್ಮ ಗ್ರಾಮದ ಸ್ವಚ್ಛತೆ ನಮ್ಮ ಹೊಣೆ ಎಂಬ ಘೋಷಣೆಯೊಂದಿಗೆ, ರೆಡ್‌ಬುಲ್ ತಂಡದ ನೇತೃತ್ವದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು, ಗ್ರಾಮ ಪಂಚಾಯಿತಿ, ಮಹಿಳಾ ಸ್ವಸಹಾಯ ಸಂಘ, ಸಮಾಜ ಸೇವಾ ಸಂಘಟನೆಗಳ ಸಹಯೋಗದೊಂದಿಗೆ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನೋದ್ ಕುಮಾರ್, ರೆಡ್‌ಬುಲ್ಸ್ ತಂಡದ ಅಧ್ಯಕ್ಷ ಅಶ್ವಥ್ ಸಿ.ಸಿ., ಕಾರ್ಯದರ್ಶಿ ನಿತಿನ್ ಪೆರೇರಾ, ಎಸ್. ಎಂ. ಡಿಸಿಲ್ವಾ, ರವಿ ಕುಮಾರ್, ಅಂಕುರA ವಿದ್ಯಾ ಸಂಸ್ಥೆಯ ನಿರ್ದೇಶಕರ ಮಂಡಳಿ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬೆಟ್ಟದಳ್ಳಿಯಲ್ಲಿ: ತಾಲೂಕಿನ ಶಾಂತಳ್ಳಿ ಬೆಟ್ಟದಳ್ಳಿಯ ಶ್ರೀ ಕುಮಾರಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಮಕ್ಕಳು ಕನ್ನಡ ನಾಡಿನ ಹೆಸರಾಂತ ಸಾಧಕರು, ಸಾಹಿತಿಗಳ ವೇಷಭೂಷಣ ತೊಟ್ಟು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಸಾಗಿದರು.

ನಂತರ ಶಾಲಾ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆಯನ್ನು ಶಾಲಾಡಳಿತ ಮಂಡಳಿ ಅಧ್ಯಕ್ಷ ಹೆಚ್.ಎನ್. ರವೀಂದ್ರ ವಹಿಸಿದ್ದರು. ವೇದಿಕೆಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಪ್ರದೀಪ್‌ಕುಮಾರ್, ಕಾರ್ಯಪ್ಪ, ರಾಜೇಶ್, ಮುಖ್ಯ ಶಿಕ್ಷಕಿ ಲೀಲಾವತಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಕೂಡಿಗೆ: ಕುಶಾಲನಗರ ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಟಿಬೆಟ್ ನಿರಾಶ್ರಿತರ ಕೇಂದ್ರದಲ್ಲಿರುವ ಬೈಲುಕುಪ್ಪೆ ಟಿ.ಸಿ.ವಿ. ಶಾಲೆ ಸಂಯುಕ್ತ ಆಶ್ರಯದಲ್ಲಿ ಶಾಲಾ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಯಮಿ ಎಂ.ಕೆ. ದಿನೇಶ್ ನೆರವೇರಿಸಿ ಮಾತನಾಡಿ, ಪಠ್ಯ ವಿಷಯ ಯಾವುದೇ ಇರಲಿ ಆದರೆ ಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವುದರಿಂದ ಇತರರೆೆÆಂದಿಗೆ ಬೆರತು ಬದುಕನ್ನು ಸಾಗಿಸಲು ಅನುಕೂಲವಾಗುತ್ತದೆ ಎಂದರು.

ದಿನದ ಮಹತ್ವದ ಬಗ್ಗೆ ಮಾತನಾಡಿದ ಬಳಗದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ವಿಶ್ವದಲ್ಲಿ ಕನ್ನಡಕ್ಕೆ ವಿಶೇಷ ಮಾನ್ಯತೆ ಇದೆ. ದೇಶದಲ್ಲಿ ಅತಿ ಉನ್ನತ ಪದವಾದ ರಾಷ್ಟçಪತಿ ಎಂಬ ಪದವನ್ನು ಸಹ ತಿ.ನಂ.ಶ್ರೀ. ಎಂಬ ಕನ್ನಡಿಗ ನೀಡುವುದರ ಮುಖಾಂತರ ರಾಷ್ಟçದ ಮೊದಲ ಪ್ರಜೆಯ ನಾಮಾಂಕಿತ ಸ್ಥಾನವನ್ನು ನಿರ್ಣಯಿಸಿರುವ ಹೆಮ್ಮೆ ಕನ್ನಡದ್ದಾಗಿದೆ ಎಂದರು. ಕಾರ್ಯಕ್ರಮದಲ್ಲಿ ಬೌದ್ಧ ಗುರು ಟುಪ್ಟೆನ್ ನಾಮ್ಗ್ಯಾಲ್ ಉಪಸ್ಥಿತಿಯಲ್ಲಿ ಅಧ್ಯಕ್ಷತೆಯನ್ನು ಟಿ.ಸಿ.ವಿ. ಶಾಲಾ ನಿರ್ದೇಶಕ ತ್ಸೆರಿಂಗ್ ದೊರ್ಜೆ ವಹಿಸಿದ್ದರು.

ವೇದಿಕೆಯಲ್ಲಿ ಕನ್ನಡ ಸಿರಿ ಸ್ನೇಹ ಬಳಗದ ಪ್ರಮುಖರಾದ ಕೆ.ಕೆ. ನಾಗರಾಜ ಶೆಟ್ಟಿ, ಶಾಲಾ ಪ್ರಾಂಶುಪಾಲ ನಾಮ್ಗ್ಯಾಲ್ ತ್ಸೆರಿಂಗ್, ಕುಶಾಲನಗರ ತಾಲೂಕು ಕ.ರ.ವೇ. ಅಧ್ಯಕ್ಷ ಅಣ್ಣಯ್ಯ, ಮಹಿಳಾ ಘಟಕದ ಅಧ್ಯಕ್ಷೆ ಅನಿತಾ, ಪದಾಧಿಕಾರಿಗಳಾದ ಅನಂದಗೌಡ, ಯೋಗೇಶ್ ಸೇರಿದಂತೆ ಹಲವರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಹಲವು ಕನ್ನಡ ಗೀತೆಗಳಿಗೆ ನೃತ್ಯ ನಡೆಯಿತು. ಶಾಲಾ ಶಿಕ್ಷಕಿ ಬಾನು ಸ್ವಾಗತಿಸಿ, ವಂದಿಸಿದರು.ವೀರಾಜಪೇಟೆ: ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕöÈತಿ ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಹೇಳಿದರು.

ವೀರಾಜಪೇಟೆಯ ಕರ್ನಾಟಕ ಸಂಘದ ವತಿಯಿಂದ ಮಹಿಳಾ ಸಮಾಜ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ರಾಜ್ಯೋತ್ಸವ ಆಚರಣೆ ಹಾಗೂ ವಿವಿಧ ತಾಲೂಕುಮಟ್ಟದ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾವು ಕನ್ನಡ ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ವಿಸ್ತರಿಸಬೇಕು. ಕನ್ನಡ ನುಡಿ, ಸಂಸ್ಕöÈತಿ, ಪರಂಪರೆ ಉಳಿಸಲು ಸದಾ ಕಟಿಬದ್ಧರಾಗಿರುತ್ತೇವೆ ಎಂದು ತೀರ್ಮಾನಿಸಬೇಕು ಎಂದರು.

ಸಮಾರAಭದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಸಂಘದ ಅಧ್ಯಕ್ಷ ಮಾಳೇಟಿರ ಬೋಪಯ್ಯ ಮಾತನಾಡಿ, ಜ್ಞಾನ ಸಂಪಾದನೆಗೆ ಎಲ್ಲಾ ಭಾಷೆಗಳು ಅಗತ್ಯ. ಇಂಗ್ಲಿಷ್ ಮತ್ತು ಇತರ ಭಾಷೆಗಳನ್ನು ಕಲಿಯೋಣ, ವ್ಯವಹಾರಕ್ಕಾಗಿ ಬಳಸೋಣ. ಆದರೆ ನಮ್ಮ ಮಾತೃಭಾಷೆ ಕನ್ನಡವನ್ನು ಪ್ರೀತಿಯಿಂದ ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸೋಣ ಎಂದರು.

ಇದೇ ಸಂದರ್ಭ ಕ್ರೀಡಾ ಕ್ಷೇತ್ರದಲ್ಲಿ ಚೆಪ್ಪುಡಿರ ಎಸ್. ಪೂಣಚ್ಚ, ಸೇನಾ ಕ್ಷೇತ್ರದಲ್ಲಿ ಚೇಂದ್ರಿಮಾಡ ನಂಜಪ್ಪ, ಶಿಕ್ಷಣ ಕ್ಷೇತ್ರದಲ್ಲಿ ದೇವಣಗೇರಿ ಬಿ.ಸಿ. ಪ್ರೌಢಶಾಲೆಯ ಮುಖ್ಯ ಶಿಕ್ಷಕ ಹೆಚ್.ಡಿ. ಲೋಕೇಶ್ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಈರಮಂಡ ಹರಿಣಿ ಇವರುಗಳ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಸನ್ಮಾನಿತರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ನಿರ್ದೇಶಕರಾದ ಚಿಲ್ಲವಂಡ ಕಾವೇರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮೂಕಚಂಡ ಡಿ. ಕಾವೇರಮ್ಮ, ಚೇಂದ್ರಮಾಡ ಪವೀನ್ ನಾಚಪ್ಪ ಸ್ಪರ್ಧೆಗಳ ತೀರ್ಪುಗಾರಿಕೆ ನೀಡಿದರು.

ವೇದಿಕೆಯಲ್ಲಿ ಕರ್ನಾಟಕ ಸಂಘದ ಉಪಾಧ್ಯಕ್ಷ ಚೇನಂಡ ಈ. ಗಿರೀಶ್ ಪೂಣಚ್ಚ, ಕಾರ್ಯದರ್ಶಿ ಮುಂಡ್ಯೋಳAಡ ಕುಸುಮ ಸೋಮಣ್ಣ, ಕೋಶಾಧಿಕಾರಿ ಕೋಟೆರ ಯು. ಗಣೇಶ್ ತಮ್ಮಯ್ಯ, ನಿರ್ಧೇಶಕರಾದ ಸಿ.ಪಿ. ಕಾವೇರಪ್ಪ, ಚೇನಂಡ ಎಂ. ಸುರೇಶ್ ನಾಣಯ್ಯ, ಪುಗ್ಗೇರ ನಂದ, ಮುಂಡAಡ ರಾಣು ಮಂದಣ್ಣ, ಬೊಳ್ಯಪಂಡ ಎಂ. ಸುರೇಶ್, ಬಾಚೀರ ಗಣೇಶ್ ಬಿದ್ದಪ್ಪ, ಕಂಜಿತAಡ ಎಂ. ಮೊಣ್ಣಪ್ಪ, ಮೂಕಚಂಡ ಬಿ. ದೇವಯ್ಯ, ಚಾರಿಮಂಡ ಯು. ಶರಣು ನಂಜಪ್ಪ, ಬಲ್ಲಡಿಚಂಡ ಜಿ. ವಿಜು ಕುಶಾಲಪ್ಪ, ಪೋರೇರ ಎಂ. ಬಿದ್ದಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿದ್ಯಾರ್ಥಿ ಪೂಜಾ ಪ್ರಾರ್ಥಿಸಿ, ತಾತಂಡ ಪ್ರಭಾ ನಾಣಯ್ಯ ನಿರೂಪಿಸಿ, ಕಂಜಿತAಡ ಎಂ. ಮೊಣ್ಣಪ್ಪ ಸ್ವಾಗತಿಸಿ, ಬಾಚೀರ ಗಣೇಶ್ ಬಿದ್ದಪ್ಪ ವಂದಿಸಿದರು.ಸಿದ್ದಾಪುರ: ನೆಲ್ಲಿಹುದಿಕೇರಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.ಕೆ.ಪಿ.ಎಸ್. ಶಾಲೆಯ ಮುಖ್ಯ ಶಿಕ್ಷಕಿ ಭಾರತಿ ಕನ್ನಡ ನಾಡು ನುಡಿಯ ಕುರಿತು ಮಾತನಾಡಿದರು. ಇದೇ ಸಂದರ್ಭ ಕ್ರೀಡೆಯಲ್ಲಿ ಸಾಧನೆ ಮಾಡಿದ ಶಾಲೆಯ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಸಹಾಯಕ ಶಿಕ್ಷಕಿ ರೆಮ್ಮಿ ಹಾಗೂ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಜರಿದ್ದರು.

ಗುಡ್ಡೆಹೊಸೂರು: ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜೋತ್ಸವವನ್ನು ಆಚರಿಸಲಾಯಿತು. ಎಸ್.ಡಿ.ಎಂ.ಸಿ ಅಧ್ಯಕ್ಷರಾದ ನಾಗೇಂದ್ರ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭ ಎಸ್.ಡಿ.ಎಂ.ಸಿ ಸದಸ್ಯರು ಹಾಜರಿದ್ದರು. ಶಾಲಾ ಮಕ್ಕಳಿಂದ ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗೇಂದ್ರ ವಹಿಸಿದ್ದರು. ದಿನದ ಮಹತ್ವÀದ ಬಗ್ಗೆ ಶಿಕ್ಷಕಿ ಎ.ವಿ. ಮರಿಯಾ ಮಾತನಾಡಿದರು. ಮುಖ್ಯ ಶಿಕ್ಷಕರಾದ ಸಣ್ಣಸ್ವಾಮಿ ಸ್ವಾಗತಿಸಿದರು.

ಬಿ.ಎನ್. ಗೀತಾ ವಂದಿಸಿದರು. ಶಿಕ್ಷಕಿ ರುಕ್ಮಿಣಿ ಕಾರ್ಯಕ್ರಮ ನೀರೂಪಿಸಿದರು. ಪಿ.ಡಿ. ಯಶುಮತಿ ನೇತೃತ್ವದಲ್ಲಿ ಶಾಲಾ ಮಕ್ಕಳಿಂದ ಗುಡ್ಡೆಹೊಸೂರು ವೃತ್ತದಲ್ಲಿ ಕನ್ನಡ ಗೀತೆಗೆ ನೃತ್ಯ ನಡೆಯಿತು. ಸುಂಟಿಕೊಪ್ಪ: ಭಾರತಾಂಭೆಯ ಸೇವೆಯಲ್ಲಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳಲು ಕನ್ನಡ ರಾಜ್ಯೋತ್ಸವ ನಮ್ಮೆಲ್ಲರಿಗೂ ಪ್ರೇರಣೆ ನೀಡುವಂತಹ ಆಚರಣೆಯಾಗಬೇಕೆಂದು ಸುಂಟಿಕೊಪ್ಪ ಗ್ರೇಡ್ ೧ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ವಿ.ಜಿ. ಲೋಕೇಶ್ ಹೇಳಿದರು.

ಸುಂಟಿಕೊಪ್ಪದ ಕನ್ನಡ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು ಕನ್ನಡ ನಾಡು ನುಡಿ ಸಂಸ್ಕೃತಿ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಕಟ್ಟಿಬದ್ದರಾಗಬೇಕೆಂದು ಕರೆ ನೀಡಿದರು.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್‌ಕುಮಾರ್ ಮಾತನಾಡಿ ಮುಂದಿನ ವರ್ಷದಿಂದ ಗ್ರಾಮ ಪಂಚಾಯಿತಿ ಕನ್ನಡ ಸಾಹಿತ್ಯ ಪರಿಷತ್‌ನೊಂದಿಗೆ ಕೈ ಜೋಡಿಸಲಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸುಂಟಿಕೊಪ್ಪ ಹೋಬಳಿ ಕಸಾಪ ಕಾರ್ಯದರ್ಶಿ ಕೆ.ಎಸ್. ಅನಿಲ್‌ಕುಮಾರ್ ಕನ್ನಡ ವೃತ್ತಕ್ಕೆ ೪ ದಶಕಗಳ ಇತಿಹಾಸ ಇದ್ದು ಕಳೆದ ೩೫ ವರ್ಷಗಳಿಂದ ಕನ್ನಡ ಧ್ವಜ ವರ್ಷಂಪೂರ್ತಿ ಕನ್ನಡ ವೃತ್ತದಲ್ಲಿ ಹಾರಾಡುತ್ತಿದೆ. ಕನ್ನಡ ವೃತ್ತದಲ್ಲಿ ಧ್ವಜಾರೋಹಣವನ್ನು ಹಿರಿಯ ಪತ್ರಕರ್ತ ಮತ್ತು ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದ ಉಪಾಧ್ಯಕ ಬಿ.ಸಿ. ದಿನೇಶ್ ನೇರವೇರಿಸಿದರು.

ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಜೆಸಿಂತ ಜೊವಿಟಾ ವಾಸ್ ಅವರು ಅನುದಾನಿತ ಶಾಲಾ ಶಿಕ್ಷಕರ ಸಂಘದ ವತಿಯಿಂದ ನೀಡಲಾಗುವ ರಾಜ್ಯ ಶಿಕ್ಷಕರ ಪ್ರಶಸ್ತಿಗೆ ಭಾಜನರಾಗಿದ್ದು, ಇವರನ್ನು ಸನ್ಮಾನಿಸಲಾಯಿತು. ಅದೇ ರೀತಿ ಪತ್ರಿಕಾ ಕ್ಷೇತ್ರ ಮತ್ತು ಸಾಮಾಜಿಕ ಕ್ಷೇತ್ರದಲ್ಲಿನ ಸೇವೆಗಾಗಿ ಹಿರಿಯ ಪತ್ರಕರ್ತ ಬಿ.ಸಿ. ದಿನೇಶ್ ಅವರನ್ನು ವೇದಿಕೆಯಲ್ಲಿದ್ದ ಅತಿಥಿ ಗಣ್ಯರು ಸನ್ಮಾನಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಎಫ್. ಸಬಾಸ್ಟಿನ್ ವಹಿಸಿದ್ದರು. ಕಸಾಪ ಕಾರ್ಯದರ್ಶಿ ಕೆ.ಎಸ್.ಅನಿಲ್‌ಕುಮಾರ್ ಸ್ವಾಗತಿಸಿ, ನಿರೂಪಿಸಿ, ರಫೀಕ್‌ಖಾನ್ ವಂದಿಸಿದರು.

ವೇದಿಕೆಯಲ್ಲಿ ಕ.ಸಾ.ಪ. ಹಿರಿಯ ಸದಸ್ಯ ಹಾಗೂ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಡಾ. ಯಶೋಧ ಪೂಜಾರಿ, ಎಸ್.ಜಿ. ಶ್ರೀನಿವಾಸ್, ಸುಂಟಿಕೊಪ್ಪ ಹೋಬಳಿ ಕಸಾಪ ಕಾರ್ಯದರ್ಶಿ ಲೀಲಾವತಿ, ಖಜಾಂಚಿ ಸತೀಶ್ ಶೇಟ್, ಸದಸ್ಯರುಗಳಾದ ವಹೀದ್‌ಜಾನ್, ಆಶೋಕ್ ಶೇಟ್, ಗ್ರಾ.ಪಂ. ಸದಸ್ಯರುಗಳಾದ ವಸಂತಿ, ಜೀನಾಸುದ್ಧಿನ್, ರಫೀಕ್ ಖಾನ್, ವಾಹನ ಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ, ಆಟೋ ಚಾಲಕರ ಸಂಘದ ಅಧ್ಯಕ್ಷ ಕೆ.ಎಚ್. ಶರೀಫ್, ಕಾರ್ಯದರ್ಶಿ ಸಚಿನ್, ಕೆ.ಎಚ್. ಶಿವಣ್ಣ, ಹಿರಿಯ ಪತ್ರಕರ್ತ ಜಿ.ಕೆ. ಬಾಲಕೃಷ್ಣ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಶಾಲಾ ಕಾಲೇಜುಗಳ ಶಿಕ್ಷಕ, ಶಿಕ್ಷಕಿಯರು, ಮಕ್ಕಳು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.*ಗೋಣಿಕೊಪ್ಪ: ಹರಿಶ್ಚಂದ್ರಪುರ ಚೇಂಬರ್ ಅಪ್ ಕಾಮರ್ಸ್ ಕಚೇರಿ ಕಟ್ಟಡ ಮುಂಭಾಗದಲ್ಲಿ ಕನ್ನಡದ ಧ್ವಜಾರೋಹಣ ಮಾಡುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಕಲಾವಿದ ನಾರಾಯಣಸ್ವಾಮಿ ನಾಯ್ಡು ನೇತೃತ್ವದಲ್ಲಿ ಆಚರಿಸಲಾಯಿತು. ಪತ್ರಕರ್ತ ಜಗದೀಶ್ ಜೋಡುಬೀಟಿ ಮಾತನಾಡಿ, ಕನ್ನಡ ನಾಡು ನುಡಿಯ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಹೊಂದಿರಬೇಕು. ಕನ್ನಡ ನಾಡನ್ನು ಕಟ್ಟಲು ಹಲವಾರು ಮಹನೀಯರು ಹೋರಾಟದ ಮೂಲಕ ತ್ಯಾಗ ಮಾಡಿದ್ದಾರೆ. ಇಲ್ಲಿನ ಭವ್ಯ ಪರಂಪರೆಯನ್ನು ಉಳಿಸಿ ಬೆಳೆಸುವುದು. ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯವಾಗಿದೆ ಎಂದರು. ಕಲಾವಿದ ನಾರಾಯಣಸ್ವಾಮಿ ಮಾತನಾಡಿ, ಪ್ರಥಮ ವರ್ಷದ ಆಚರಣೆಯಾಗಿ ೭೦ನೇ ವರ್ಷದ ರಾಜ್ಯೋತ್ಸವವನ್ನು ಸಂಸ್ಥೆಯ ವತಿಯಿಂದ ನಡೆಸಲಾಗುತ್ತಿದೆ. ಮುಂದಿನ ವರ್ಷ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಕನ್ನಡದ ಹಬ್ಬವನ್ನು ವೈಭವಯುತವಾಗಿ ಆಚರಿಸಲು ಚಿಂತನೆ ಹರಿಸಲಾಗಿದೆ ಎಂದು ಹೇಳಿದರು. ಗೋಣಿಕೊಪ್ಪ ಗ್ರಾಪಂ ಸದಸ್ಯ ಬಿ.ಎನ್. ಪ್ರಕಾಶ್ ಮತ್ತು ಸಾಹಿತಿ, ಡಾ. ಜೆ ಸೋಮಣ್ಣ, ಗೋಣಿಕೊಪ್ಪ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಸತೀಶ್ ಸಿಂಗಿ, ಗ್ಯಾರೆಂಟಿ ಅನುಷ್ಠಾನ ಸಮಿತಿ ತಾಲೂಕು ಸದಸ್ಯ ಖಾಲೀದ್, ರಾಜ್ಯ ಮಾನವ ಹಕ್ಕು ಸಮಿತಿ ಅಧ್ಯಕ್ಷ ಗುರುಸ್ವಾಮಿ, ಕರವೇ ಗೋಣಿಕೊಪ್ಪ ನಗರ ಸಂಚಾಲಕಿ ಸುಚಿತ್ರ ಪಿ.ಸಿ., ಚಿತ್ರ ಕಲಾವಿದ ಮುನ್ನ, ಸರಿನಾ, ಜ್ಯೋತಿ, ಜಾರ್ಜ್ ಸೇರಿದಂತೆ ಹಲವರು ಇದ್ದರು.