ಸೋಮವಾರಪೇಟೆ, ನ. ೪: ಚಿಕ್ಕಮಗಳೂರಿನಲ್ಲಿ ನಡೆದ ವಲಯ ೧೪ರ ಜೂನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಸಮ್ಮೇಳನ, ವಿಜಯಪರ್ವ - ೨೦೨೫ ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಜೇಸಿಐ ಘಟಕಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜೇಸಿಐ ಚಿಕ್ಕಮಗಳೂರು ಮಲ್ನಾಡ್ ಘಟಕದ ಆತಿಥ್ಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ, ಜೇಸಿಐ ಸೋಮವಾರಪೇಟೆ ಪುಷ್ಪಗಿರಿ ಘಟಕವು ಶೇ.೧೦೦ರಷ್ಟು ಪರಿಣಾಮಕಾರಿಯಾಗಿ ತನ್ನ ವಾರ್ಷಿಕ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿನ್ನೆಲೆ “ಈuಟಟ ಙeಚಿಡಿ Pಡಿogಡಿಚಿm ತಿiಣh ೧೦೦% ಇಜಿಜಿiಛಿieಟಿಛಿಥಿ ಂತಿಚಿಡಿಜ” ಗೌರವಕ್ಕೆ ಪಾತ್ರವಾಯಿತು.

ವಲಯ ೧೪ರ ಅಧ್ಯಕ್ಷ ವಿಜಯಕುಮಾರ್ ಅವರು ಸೋಮವಾರಪೇಟೆ ಘಟಕದ ಅಧ್ಯಕ್ಷರಾದ ಜಗದಾಂಬ ಗುರುಪ್ರಸಾದ್ ಅವರಿಗೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ವಲಯ ನಿರ್ದೇಶಕಿ ಮಾಯಾ ಗಿರೀಶ್, ಮಾಜಿ ಅಧ್ಯಕ್ಷ ಗಿರೀಶ್, ಜೆಎಸಿ ಮಮತಾ ಹಾಗೂ ಗುರುಪ್ರಸಾದ್ ಉಪಸ್ಥಿತರಿದ್ದರು.