ಕಡಂಗ, ನ. ೪: ಕೊಟ್ಟಮುಡಿ ದಾರುಲ್ ಉಲೂಮ್ ಮದರಸ ಸಭಾಂಗಣದಲ್ಲಿ ಬಡವರ ನೆರವು ಸಂಘಟನೆ ಮತ್ತು ಮೈಸೂರಿನ ಅಲ್ ಅನ್ಸಾರ್ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಔಷಧ ವಿತರಣೆ ಕಾರ್ಯಕ್ರಮ ನಡೆಸಲಾಯಿತು

ಶಿಬಿರದಲ್ಲಿ ೩೫೦ಕ್ಕೂ ಹೆಚ್ಚು ಜನರು ಭಾಗವಹಿಸಿ ಉಚಿತ ವೈದ್ಯಕೀಯ ತಪಾಸಣೆ ಮತ್ತು ಔಷಧ ಸೇವೆ ಪಡೆದುಕೊಂಡರು. ಸಂಘಟನೆಯ ಮುಖ್ಯಸ್ಥ ಮೈಸಿ ಕತ್ತಣಿ ಹಾಗೂ ಹಮೀದ್ ಎಂ.ಬಿ. ಮಾತನಾಡಿದರು.

ಸಂಘಟನೆಯು ಕಳೆದ ೧೦ ವರ್ಷಗಳಿಂದ ಬಡ ಹಾಗೂ ಅನಾಥ ಹೆಣ್ಣುಮಕ್ಕಳ ವಿವಾಹ, ತುರ್ತು ಚಿಕಿತ್ಸಾ ನೆರವು, ಕಿಟ್ ವಿತರಣೆ ಮತ್ತು ಮನೆ ನಿರ್ಮಾಣದಂತಹ ವಿವಿಧ ಸಮಾಜಮುಖಿ ಸೇವೆಗಳನ್ನು ನಿರಂತರವಾಗಿ ನಡೆಸುತ್ತಿದೆ ಎಂದು ಪ್ರಮುಖರು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಮಾಅತ್ ಅಧ್ಯಕ್ಷ ಹಂಸ ಹೆಚ್ ಎ, ಆಜಾದ್ ನಗರ ಜಮಾತ್ ಅಧ್ಯಕ್ಷ ಅಹ್ಮದ್, ಹೊದ್ದೂರು ಪಂಚಾಯಿತಿ ಸದಸ್ಯ ಮೊಯಿದು, ಉದ್ಯಮಿ ಬಷೀರ್, ಸಮಾಜ ಸೇವಕರಾದ ಮೊಹಮ್ಮದ್ ಕೆ ಎ,ಇಬ್ರಾಹಿಂ ಮೀತಲ್, ಕರೀಂ ಹಾಜಿ, ಗಫೂರ್, ಆಶ್ರಫ್, ಹನೀಫ ಕಬಿನಿ, ಬಷೀರ್, ಕಾಸಿಂ, ರಜಾಕ್ ಹೆಚ್ ಅಂಡ್ ಎಸ್, ಶೌಕತ್, ಉಸ್ಮಾನ್, ಅಲಿ ಮುಂತಾದವರು ಉಪಸ್ಥಿತರಿದ್ದರು.