ಗೋಣಿಕೊಪ್ಪ ವರದಿ, ನ. ೪ ; ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ನಡೆದ ಲೀಗ್ ಕಮ್ ನಾಕೌಟ್ ಹಾಕಿ ಟೂರ್ನಿಯಲ್ಲಿ ಕೋಣನಕಟ್ಟೆ ಇಲೆವೆನ್ ತಂಡವು ಚಾಂಪಿಯನ್ ಸ್ಥಾನ ಅಲಂಕರಿಸಿದ್ದು, ಬೊಟ್ಯತ್ನಾಡ್ ಕುಂದ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಅAತಿಮ ಪಂದ್ಯದಲ್ಲಿ ಕೋಣನಕಟ್ಟೆ ಜಯ ಸಾಧನೆ ಮಾಡಿತು. ಕೋಣನಕಟ್ಟೆ ೨, ಬೊಟ್ಯತ್ನಾಡ್ ಕುಂದ ೧ ಗೋಲು ದಾಖಲಿಸಿತು. ಕೋಣನಕಟ್ಟೆ ಇಲೆವೆನ್ ಪರ ನರನ್, ಶಾನ್ ತಲಾ ಒಂದೊAದು ಗೋಲು ಬಾರಿಸಿದರು. ಬೊಟ್ಯತ್ನಾಡ್ ಪರ ಪೆಮ್ಮಂಡ ಸೋಮಣ್ಣ ಗೋಲು ಹೊಡೆದರು.

ಕೋಣನಕಟ್ಟೆ ಇಲೆವೆನ್ ತಂಡದ ಆಟಗಾರ ಬಲ್ಲಚಂಡ ಮೋನಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಬೊಟ್ಯತ್ನಾಡ್ ಕುಂದ ಆಟಗಾರ ಮೊಹಮ್ಮದ್ ಉಮೈಜ್ ಬೆಸ್ಟ್ ಫಾರ್ವರ್ಡ್, ಕೂರ್ಗ್ ಚಾಲೆಂಜರ್ಸ್ ಆಟಗಾರ ವಲ್ಲಂಡ ಸೋಮಣ್ಣ ಬೆಸ್ಟ್ ಗೋಲ್ ಕೀಪರ್, ಕಕ್ಕಬ್ಬೆ ಮಲ್ಮ (ಎ) ಆಟಗಾರ ಅಪ್ಪಚೆಟ್ಟೋಳಂಡ ಅಯ್ಯಪ್ಪ ಬೆಸ್ಟ್ ಹಾಫ್, ಕೋಣನಕಟ್ಟೆ ಇಲೆವೆನ್ ಆಟಗಾರ ಚೆಪ್ಪುಡೀರ ದಿವಾನ್ ಬೆಸ್ಟ್ ಡಿಫೆಂಡರ್ ಪ್ರಶಸ್ತಿ ಸ್ವೀಕರಿಸಿದರು.

ಮಹಾದೇವ ಸ್ಪೋರ್ಟ್ಸ್ ಕ್ಲಬ್, ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್, ವೀರಾಜಪೇಟೆ ಕೊಡವ ಸಮಾಜ (ಬಿ), ಬೊಳಿಯೂರ್ ಕ್ಲಬ್ (ಬಿ), ಬೊಳಿಯೂರ್ ಕ್ಲಬ್ (ಎ), ನೀಲಿಯತ್ ಕೋಕೇರಿ, ಚಾರ್ಮರ್ಸ್ ಮಡಿಕೇರಿ, ವಿ. ಎಸ್. ಹಾತೂರು, ಕಕ್ಕಬ್ಬೆ ಮಲ್ಮ (ಬಿ), ಕಕ್ಕಬ್ಬೆ ಮಲ್ಮ (ಎ), ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್, ಟಾಟಾ ಕಾಫಿ, ಟವರ್ಸ್, ಕೋಣನಕಟ್ಟೆ ಇಲೆವೆನ್, ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್, ಗೋಣಿಕೊಪ್ಪ ಬಿಬಿಸಿ, ಭಗವತಿ ಹಾಕಿ ಕ್ಲಬ್, ಬೊಟ್ಯತ್ನಾಡ್ ಕುಂದ, ನಾಪೋಕ್ಲು ಶಿವಾಜಿ, ಕಾಕೋಟ್ ಸ್ಟೆçöÊಕರ್ಸ್, ವೀರಾಜಪೇಟೆ ಕೊಡವ ಸಮಾಜ (ಎ), ಬೇರಳಿನಾಡ್ ಯುಎಸ್‌ಸಿ, ಎಎಸ್‌ಎಫ್ ಕ್ಯಾಲ್ಸ್ ಗೋಣಿಕೊಪ್ಪ, ಕೂರ್ಗ್ ಚಾಲೆಂಜರ್ಸ್, ಪನ್ನಂಗಾಲ ಪಾಂರ‍್ಸ್, ಕುತ್ತ್ನಾಡ್ ಸ್ಟೆçöÊಕರ್ಸ್, ಅಂಜಿಗೇರಿನಾಡ್, ಕಿರ್ಗೂರ್ ಸ್ಪೋರ್ಟ್ಸ್ ಕ್ಲಬ್, ಡ್ರಿಬ್ಲ್ ಹೆಂಪ್, ಕ್‌ಗ್ಗಟ್ಟ್ನಾಡ್ ಫ್ಲೆöÊಯಿಂಗ್ ಎಲ್ಬೋಸ್, ಕಡಿಯತ್ತ್ನಾಡ್, ಬ್ಲೇಜ್ ಹಾಕಿ ಕ್ಲಬ್, ಅಮ್ಮತ್ತಿ ರಾಯಲ್ಸ್, ಸೋಮವಾರಪೇಟೆ ಡಾಲ್ಫಿನ್ಸ್, ಅಮ್ಮತ್ತಿ ಕೈಗ್ ವಾರಿಯರ್ಸ್ ತಂಡಗಳು ಹೋರಾಟ ನಡೆಸಿದ್ದವು.

ಬಹುಮಾನ ವಿತರಣೆ

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕರ್ನಾಟಕ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ ಮಾತನಾಡಿ, ಕೊಡಗು ಕ್ರೀಡಾಪಟುಗಳ ಉದಯಕ್ಕೆ ಮೂಲವಾಗುತ್ತಿದೆ. ಕೇಂದ್ರ ಸರ್ಕಾರ ಗುರುತಿಸಿರುವ ಕ್ರೀಡಾ ಜಿಲ್ಲೆಗಳಲ್ಲಿ ಕೊಡಗು ಕೂಡ ಸೇರಿರುವುದು ಹೆಮ್ಮಯ ವಿಚಾರ. ದೇಶ, ವಿದೇಶದಲ್ಲಿ ಕೊಡಗಿನ ಕ್ರೀಡಾಪಟುಗಳ ಸಾಧನೆಯಿಂದ ಕಿರಿಯರಿಗೂ ಸ್ಪೂರ್ತಿಯಾಗಿದೆ. ಕರ್ನಾಟಕ ಸರ್ಕಾರ ಕೂಡ ಕೊಡಗು ಜಿಲ್ಲೆಯ ಕೊಡುಗೆ ಬಗ್ಗೆ ಹೆಮ್ಮೆ ಪಡುವ ಕಾರ್ಯ ಮಾಡಿದೆ. ಶಾಸಕ ಎ. ಎಸ್. ಪೊನ್ನಣ್ಣ ಮುತುವರ್ಜಿಯಿಂದ ವಿ. ಬಾಡಗದಲ್ಲಿ ಕ್ರೀಡಾ ಕೇಂದ್ರ ಸ್ಥಾಪನೆಯಾಗಲಿದೆ. ಮ್ಯಾನ್ಸ್ ಕಾಂಪೌAಡ್ನಲ್ಲಿ ಸಿಂಥೆಟಿಕ್ ಮೈದಾನ ನಿರ್ಮಾಣಕ್ಕೆ ಶಾಸಕ ಮಂಥರ್ ಗೌಡ ಮುತುವರ್ಜಿ ವಹಿಸಿದ್ದಾರೆ. ಪ್ರತ್ಯೇಕವಾಗಿ ಶೂಟಿಂಗ್ ರೇಂಜ್ ಮತ್ತು ಆರ್ಚರಿ ತರಬೇತಿ ಕೇಂದ್ರ ಸ್ಥಾಪನೆಗೆ ಮುಂದಾಗಬೇಕಿದೆ. ಈ ಬಗ್ಗೆ ವಿಶೇಷವಾಗಿ ಗಮನ ಹರಿಸಲಾಗುವುದು ಎಂದರು. ಸ್ಥಳೀಯ ಪ್ರತಿಭೆಗಳಿಗೆ ಶೂಟಿಂಗ್ ಮತ್ತು ಆರ್ಚರಿ ಕ್ರೀಡೆ ಅವಶ್ಯ ಎಂದರು.

ಹಾಕಿ ಕೂರ್ಗ್ ಅಧ್ಯಕ್ಷ ಪಳಂಗAಡ ಲವಕುಮಾರ್ ಮಾತನಾಡಿ, ತೀರ್ಪುಗಾರರ ಕೊರತೆ ನೀಗಿಸಲು ಹಾಗೂ ತೀರ್ಪುಗಾರರ ಮೇಲೆ ಬರುವ ಆರೋಪಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಲೀಗ್ ತಂಡದ ಆಟಗಾರರು ತೀರ್ಪುಗಾರಿಕೆಗೆ ಉತ್ಸಾಹ ತೋರಬೇಕಿದೆ ಎಂದರು. ಇದು ಹಾಕಿಗೆ ಮತ್ತಷ್ಟು ಬಲ ಸಿಗಲಿದೆ ಎಂಬ ಬಗ್ಗೆ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು. ಟೂರ್ನಿ ಯಶಸ್ವಿ ಹಿಂದೆ ದಾನಿಗಳ ಪ್ರೋತ್ಸಾಹ ಕೂಡ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಹಾಕಿಗೆ ಸಾಕಷ್ಟು ಪ್ರೋತ್ಸಾಹ ಸಿಗುವಂತಾಗಿದೆ ಎಂದರು.

ಹಾಕಿ ಅಕಾಡೆಮಿ ಕಾರ್ಯಾಧ್ಯಕ್ಷ ಒಲಿಂಪಿಯನ್ ಚೆಪ್ಪುಡೀರ ಪೂಣಚ್ಚ, ಕರ್ನಲ್ ಬಾಳೆಯಡ ಸುಬ್ರಮಣಿ, ಅಂಜುA ಸುಬ್ರಮಣಿ, ಕ್ರೀಡಾ ಪ್ರೇಮಿಗಳಾದ ಅಪ್ಪಚೆಟ್ಟೋಳಂಡ ಜನತ್, ಕುಂಡ್ಯೋಳAಡ ರಮೇಶ್ ಮುದ್ದಯ್ಯ ಉಪಸ್ಥಿತರಿದ್ದರು. ಹಾಕಿಕೂರ್ಗ್ ಉಪಾಧ್ಯಕ್ಷೆ ಯಮುನಾ ಚಂಗಪ್ಪ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಮ್ಮಾಂಡಿರ ಚೇತನ್ ವಂದಿಸಿದರು.

ಟೂರ್ನಿ ನಿರ್ದೇಶಕರಾಗಿ ಕಳ್ಳಿಚಂಡ ಗೌತಂ, ತೀರ್ಪುಗಾರರಾಗಿ ಪಟ್ರಪಂಡ ಮಂದಣ್ಣ, ಕರವಂಡ ಅಪ್ಪಣ್ಣ, ಬೊಳ್ಳಚಂಡ ನಾಣಯ್ಯ, ಬೊಳಿಯಾಡೀರ ಸುಬ್ಬಯ್ಯ, ಅನ್ನಾಡಿಯಂಡ ಪೊನ್ನಣ್ಣ, ಮೇರಿಯಂಡ ಅಯ್ಯಣ್ಣ, ಅಯ್ಯನೆರವಂಡ ತನುಶ್, ತಿರೋಡೀರ ನಿರೂಪ್, ಬಲ್ಲಚಂಡ ಸಜನ್, ಕೊಳುವಂಡ ಚಂಗಪ್ಪ, ಮುಕ್ಕಾಟೀರ ಕಾವ್ಯ, ದಿಲಿಪ್, ಕುಂಞÂಯAಡ ರಿವಿನ್ ಕಾರ್ಯನಿರ್ವಹಿಸಿದರು. ಅಜ್ಜೇಟೀರ ವಿಕ್ರಂ ವೀಕ್ಷಕ ವಿವರಣೆ ನೀಡಿದರು.