ಗೋಣಿಕೊಪ್ಪ ವರದಿ, ನ. ೪: ಬೆಂಗಳೂರು ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೧೪ ವಯೋಮಿತಿಯ ನಾಲ್ಕನೇ ಕರ್ನಾಟಕ ಮಿನಿ ಒಲಿಂಪಿಕ್ಸ್ ಹಾಕಿ ಕ್ರೀಡಾಕೂಟದ ಬಾಲಕಿಯರ ವಿಭಾಗದಲ್ಲಿ ಹಾಕಿ ಕೂರ್ಗ್ ಬಾಲಕಿಯರ ತಂಡವು ಮೊದಲ ಪಂದ್ಯದಲ್ಲಿ ಸೋಲನ್ನುಭವಿಸಿದೆ.

ಧಾರವಾಡ ವಿರುದ್ದ ಸೋಲನ್ನುಭವಿಸಿತು. ಧಾರವಾಡ ೬, ಹಾಕಿಕೂರ್ಗ್ ೧ ಗೋಲು ದಾಖಲಿಸಿತು. ಕೂರ್ಗ್ ಪರ ಪ್ರತಿಕ್ಷಾ ಏಕೈಕ ಗೋಲು ಹೊಡೆದು ಸೋಲಿನ ಅಂತರ ತಗ್ಗಿಸಿದರು.

ತರಬೇತುದಾರ ವಿನೋದ್‌ಕುಮಾರ್, ವ್ಯವಸ್ಥಾಪಕಿ ಕೊಕ್ಕಲೆಮಾಡ ಗೌತಮಿ ಕಾರ್ಯನಿರ್ವಹಿಸಲಿದ್ದಾರೆ.