ನಾಪೋಕ್ಲು, ನ. ೪: ಸಮೀಪದ ಮೂರ್ನಾಡಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಕೊಡಗು ಜಿಲ್ಲಾ ಕುಲಾಲ (ಕುಂಬಾರ)ರ ಸಂಘದ ಯುವ ಘಟಕದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕೊಡಗು ಜಿಲ್ಲಾ ಕುಲಾಲ (ಕುಂಬಾರ) ಚಾಂಪಿಯನ್ಸ್ ಟ್ರೋಫಿ-೨೦೨೫ ಸೀಸನ್ ೧ ಕ್ರಿಕೆಟ್ ಪಂದ್ಯಾಟದಲ್ಲಿ ಮಡಿಕೆಬೀಡು ಕುಲಾಲ ಕುಂಬಾರ ಬಳಗ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.

ವಿಜೇತ ತಂಡಕ್ಕೆ ರೂ. ೨೦,೦೦೦ ನಗದು ಹಾಗೂ ಟ್ರೋಫಿಯನ್ನು ವಿತರಿಸಲಾಯಿತು. ದ್ವಿತೀಯ ಸ್ಥಾನವನ್ನು ಕುಂಬಾರ ರಾಕರ್ಸ್ ತಂಡ ಪಡೆದುಕೊಂಡು ೧೫,೦೦೦ ನಗದು ಹಾಗೂ ಟ್ರೋಫಿಯನ್ನು ವಿತರಿಸಲಾಯಿತು. ಮಡಿಕೇರಿಯ ಕುಲಾಲ ಬ್ರದರ್ಸ್ ೧೧ ತಂಡ ತೃತೀಯ ಸ್ಥಾನ ಪಡೆದು ೫,೦೦೦ ನಗದು ಹಾಗೂ ಟ್ರೋಫಿಯನ್ನು, ಮೂರ್ನಾಡಿನ ಟೀಮ್ ಶ್ರೀದೇವಿ ತಂಡ ನಾಲ್ಕನೇ ಸ್ಥಾನ ತನ್ನದಾಗಿಸಿಕೊಂಡಿತು.

ಮ್ಯಾನ್ ಆಫ್ ದಿ ಸೀರೀಸ್ ಆಗಿ ದುರ್ಗಾ ಪ್ರಸಾದ್, ಎಮರ್ಜಿಂಗ್ ಪ್ಲೇಯರ್ ಹೇಮಂತ್, ಬೆಸ್ಟ್ ಬೌಲರ್ ದಿಲೀಪ್ ಕುಲಾಲ್, ಮ್ಯಾನ್ ಆಫ್ ದಿ ಮ್ಯಾಚ್ ಯಶಸ್, ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಅಭಿಷೇಕ್ ಕುಲಾಲ್, ಬೆಸ್ಟ್ ಫೀಲ್ಡರ್ ಪ್ರಶಸ್ತಿಯನ್ನು ಪ್ರಸಾದ್ ಪಡೆದುಕೊಂಡರು.

ಸಮಾರೋಪ :

ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧ್ಯಕ್ಷ ಕೆ. ಕುಶಾಲಪ್ಪ ಮೂಲ್ಯ ಮಾತನಾಡಿ, ಜಿಲ್ಲೆಯಲ್ಲಿ ಕುಲಾಲ ಕುಂಬಾರ ಸಂಘವು ಸಕ್ರಿಯವಾಗಿದ್ದು, ಮುಂದಿನ ದಿನಗಳಲ್ಲಿ ಜನಾಂಗದವರು ಸದಸ್ಯತ್ವ ಪಡೆದುಕೊಂಡು ಸಂಘದ ಏಳಿಗೆ ಸಹಕರಿಸಬೇಕು ಎಂದರು. ಸಮಾಜ ಬಾಂಧವರ ಐಎಎಸ್, ಐಪಿಎಸ್ ಕಲಿಯಲು ಇಚ್ಚಿಸುವ ಮಕ್ಕಳಿಗೆ ವೈಯಕ್ತಿಕವಾಗಿ ರೂ.೨೫,೦೦೦ ನೀಡುವುದಾಗಿ ಘೋಷಿಸಿದರು.

ಯುವ ಘಟಕದ ಅಧ್ಯಕ್ಷ ಚಂದ್ರಶೇಖರ್ ಕುಲಾಲ್ ಮಾತನಾಡಿ, ಕಾರ್ಯಕ್ರಮದ ಯಶಸ್ಸಿನ ಹಿಂದೆ ಯುವ ಘಟಕದ ಸದಸ್ಯರ ಶ್ರಮ ಬಹಳಷ್ಟು ಇದೆ. ಸಮಾಜ ಬಾಂಧವರ ಪೂರಕ ಸಹಕಾರದಿಂದ ಅದ್ದೂರಿ ಕಾರ್ಯಕ್ರಮ ನಡೆಯಲು ಸಹಕಾರಿಯಾಯಿತು ಎಂದು ಸ್ಮರಿಸಿದರು.

ಸಭಾಧ್ಯಕ್ಷತೆ ವಹಿಸಿಕೊಂಡಿದ್ದ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಸ್ಥಾಪಕ ಅಧ್ಯಕ್ಷ ಮುತ್ತಮ್ಮ ಕೋಟಿ ಮಾತನಾಡಿ, ಸಂಘಟನೆಯಾದಾಗ ಮಾತ್ರ ಸಮಾಜದಲ್ಲಿ ನಾವು ಗುರುತಿಸಿಕೊಳ್ಳಲು ಸಾಧ್ಯ. ಆ ಮೂಲಕ ನಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿತರಾಗೋಣ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ವೀರಾಜಪೇಟೆ ಜೀವವಿಮಾ ನಿಗಮದ ವ್ಯವಸ್ಥಾಪಕ ಮಧುಸೂದನ, ಉಪಾಧ್ಯಕ್ಷ ಕೆ.ಕೆ. ದಾಮೋದರ್, ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಖಜಾಂಚಿ ಗಿರೀಶ್, ಕ್ರೀಡಾ ಸಮಿತಿ ಅಧ್ಯಕ್ಷ ಶಾಂತಕುಮಾರ್ ಕೆ.ಡಿ, ಅರುಣ ಪಿಯು ಕಾಲೇಜು ಪ್ರಾಂಶುಪಾಲ ರಮೇಶ್ ಕೆ.ಆರ್. ಎಎಸ್‌ಐ ಚಂದ್ರಶೇಖರ್, ಪದಾಧಿಕಾರಿಗಳಾದ ಎಂ.ಡಿ. ಸುರೇಶ್ ಕುಲಾಲ್, ಪೂವಯ್ಯ ಉದ್ಯಮಿ ಲಕ್ಷö್ಮಣ್, ತಮ್ಮಯ್ಯ, ರಮೇಶ್, ಮನು ಚಂಗಪ್ಪ ಜಿಲ್ಲಾ ಘಟಕ ಮತ್ತು ಯುವ ಘಟಕದ ಪದಾಧಿಕಾರಿಗಳು ಹಾಜರಿದ್ದರು.

ನವೀನ್ ಕುಲಾಲ್ ಪುತ್ತೂರು ಕಾರ್ಯಕ್ರಮ ನಿರೂಪಿಸಿ, ಪವನ್ ಕುಲಾಲ್ ವಂದಿಸಿದರು. - -ದುಗ್ಗಳ ಸ