ವೀರಾಜಪೇಟೆ, ನ. ೪: ಸ್ವಚ್ಛ ನಗರ ಸುಂದರ ನಗರ ಎಂಬ ಘೋಷಣೆಗಳ ನಡುವೆ ವೀರಾಜಪೇಟೆ ನಗರದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಯನ್ನು ಬಿಸಾಕುವ ಸಾಂಕ್ರಾಮಿಕ ಪಿಡುಗನ್ನು ತೊಡೆದು ಹಾಕುವುದೇ ದೊಡ್ಡ ಸವಾಲಾಗಿ ವೀರಾಜಪೇಟೆ ಪುರಸಭೆ ಅಧಿಕಾರಿಗಳಿಗೆ ಪರಿಣಮಿಸಿದೆ. ಜನಸಾಮಾನ್ಯರು ಮಾತ್ರವಲ್ಲದೆ ವಿದ್ಯಾವಂತರು ರಸ್ತೆ ಬದಿ ತ್ಯಾಜ್ಯ ಸುರಿಯುತ್ತಿದ್ದು ಪೌರಪ್ರಜ್ಞೆ ಇಲ್ಲವಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಕಸ ವಿಲೇವಾರಿ ಪ್ರತಿ ಊರಿನ ಸಮಸ್ಯೆಯಾಗಿದ್ದು ಯೂಸ್ ಅಂಡ್ ತ್ರೋ ವಸ್ತುಗಳ ಬಳಕೆ ಅಧಿಕವಾಗಿದೆ. ಎಲ್ಲಾ ತ್ಯಾಜ್ಯಗಳನ್ನು ಒಂದು ಪ್ಲಾಸ್ಟಿಕ್ ಕವರ್‌ನಲ್ಲಿ ತುಂಬಿ ಕಸದ ಗಾಡಿಗೆ ಎಸೆಯುವ ಜಾಯಾಮಾನ ಮುಂದುವರೆದಿದೆ. ಕಸ ಗುಡಿಸಿ ಹಾಕುವುದೊಂದೇ ಸ್ವಚ್ಛತೆಯ ಲಕ್ಷಣವಲ್ಲ. ಕಸವನ್ನು ಸರಿಯಾಗಿ ವಿಂಗಡಿಸಿ ವಿಲೆವಾರಿ ಮಾಡುವುದು ಸಂಪೂರ್ಣ ಸ್ವಚ್ಛ ಪರಿಸರದ ನಿರ್ಮಾಣದ ಜವಾಬ್ದಾರಿ ಎನ್ನುವ ಅರಿವು ನಾಗರಿಕರಲ್ಲಿ ಮೂಡಬೇಕಾಗಿದೆ. ಪ್ರತಿದಿನ ಸಂಗ್ರಹಿಸುವ ಟನ್‌ಗಟ್ಟಲೆ ಕಸವನ್ನು ಹಸಿಕಸ, ಒಣಕಸವನ್ನಾಗಿ ವಿಂಗಡಣೆ ಮಾಡಲು ಪೌರಕಾರ್ಮಿಕರಿಂದ ಸಾಧ್ಯವಿಲ್ಲ. ಆ ರಾಶಿಯನ್ನು ಮರುಬಳಕೆ ಮಾಡಲು ತೋಚದೆ ಊರ ಹೊರಗೆ ಗುಡ್ಡೆ ಹಾಕುತ್ತಾರೆ. ಪ್ರತಿಯೊಬ್ಬರೂ ಬೇರ್ಪಡಿಸಿಕೊಟ್ಟರೆ ಗೊಬ್ಬರಕ್ಕೆ, ಮರುಬಳಕೆಗೆ ಮಾದರಿಯಾಗುವಂತಹ ನಾಡು ನಮ್ಮದಾಗುತ್ತದೆ ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಬೇಕು ಎಂದು ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಮನವಿ ಮಾಡುತ್ತಲೇ ಬರುತ್ತಿದ್ದಾರೆ.
ರೋಗ ಹರಡುವಿಕೆ
ಪ್ರತಿದಿನ ಕಸ ಸಂಗ್ರಹ ಮಾಡುತ್ತಿದ್ದರು ಅನೇಕ ನಾಗರಿಕರು ಕಸದ ಗಾಡಿಗಳಿಗೆ ಕಸ ನೀಡುವುದಕ್ಕೆ ಬದಲಾಗಿ ರಸ್ತೆಯಲ್ಲಿ ಕಸದ ಬ್ಯಾಗುಗಳನ್ನು ಎಸೆಯುವುದನ್ನು ರೂಢಿಸಿಕೊಂಡಿದ್ದಾರೆ. ಇದರಿಂದ ರಸ್ತೆಗಳ ಸೌಂದರ್ಯ ಹಾಳಾಗುವುದರ ಜೊತೆಗೆ ಅನೇಕ ರೋಗ ರುಜಿನಗಳು ಹರಡುವುದಕ್ಕೂ ಕಾರಣವಾಗಿದೆ. ಇದರಿಂದ ಸೊಳ್ಳೆಗಳ ಉತ್ಪಾದನೆ ಹೆಚ್ಚಾಗುತ್ತಿದೆ. ನಾಯಿಗಳು ಕಸದ ಚೀಲಗಳನ್ನು ಎಳೆದಾಡಿ ರಸ್ತೆಯವರೆಗೂ ಎಳೆದು ತರುತ್ತವೆ.
ಅಭಿಯಾನ:
ಪುರಸಭೆ ವತಿಯಿಂದ ನಗರದ ಅತ್ಯಂತ ಹೆಚ್ಚು ಕಸ ಹಾಕುವ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು, ಹೂ ಕುಂಡಗಳನ್ನು ಇಟ್ಟು ವಿಶೇಷವಾಗಿ ಅರಿವು ಮೂಡಿಸಲಾಗಿತ್ತು. ಆದರೆ ಗಿಡಗಳನ್ನು ಹಾಕಿರುವ ಜಾಗದ ಪಕ್ಕದಲ್ಲಿಯೇ ಕಸ ಹಾಕಿ ಅನಾಗರಿಕರಂತೆ ವರ್ತಿಸುತ್ತಿದ್ದಾರೆ. ಇದಕ್ಕೂ ಎಚ್ಚೆತ್ತುಕೊಳ್ಳದ್ದರಿಂದ ಕ್ಲೀನ್ ವೀರಾಜಪೇಟೆ ಎಂಬ ಫೆೆÃಸ್‌ಬುಕ್ ಪೇಜ್ ಖಾತೆ ತೆರೆದು ಅದರಲ್ಲಿ ಕಸ ಹಾಕುವವರ ಪೋಟೋ ಹಾಕುವಂತೆ ಮತ್ತು ಅಧಿಕಾರಿಗಳು ದಂಡ ವಿಧಿಸುವ ಪ್ರಕ್ರಿಯೇ ಮಾಡಿದರೂ ಜನ ಕ್ಯಾರೇ ಎನ್ನುತ್ತಿಲ್ಲ.
ಸಿ.ಸಿ. ಕ್ಯಾಮೆರಾ ಅಳವಡಿಕೆ
ಇದರಿಂದ ಬೇಸತ್ತ ಪುರಸಭೆ ಅಧ್ಯಕ್ಷರು ನಿರಂತರವಾಗಿ ಕಸ ಬಿಸಾಡುವ ಸ್ಥಳಗಳಲ್ಲಿ ಸಿಸಿ ಕ್ಯಾಮಾರಗಳ ಅಳವಡಿಕೆಯ ದಿಟ್ಟ ಕ್ರಮ ತೆಗೆದುಕೊಂಡರು. ಆದರೂ ಕಸವನ್ನು ಚೀಲದಲ್ಲಿ ತಂದು ಹಾಕುವವರ ಸಂಖ್ಯೆ ಕ್ಷೀಣಿಸಲಿಲ್ಲ. ಇದನ್ನು ಗಮನಿಸಿದ ಪುರಸಭೆ ಅಧ್ಯಕ್ಷರು ಮತ್ತು ಅಧಿಕಾರಿ ವರ್ಗದವರು ಇಂತವರ ವಿರುದ್ದ ಕ್ರಮ ತೆಗೆದುಕೊಳ್ಳಲು ಸಿ.ಸಿ.ಟಿ.ವಿ. ಪರೀಕ್ಷಿಸಿ ಮತ್ತು ಸ್ಥಳದಲ್ಲಿ ಖುದ್ದು ಹಾಜರಿದ್ದು ಬಿಸಾಕಿದವರಿಗೆ ಛೀಮಾರಿ ಹಾಕಿ ದಂಡವನ್ನು ವಿಧಿಸುತ್ತಿದ್ದಾರೆ.
ಸ್ವಚ್ಛತೆ ಕಾಪಾಡಿ
ಪ್ರತಿದಿನ ಬೆಳಿಗ್ಗೆ, ಸಂಜೆ ಎಲ್ಲ ವಾರ್ಡುಗಳಿಗೆ ತೆರಳಿ ತ್ಯಾಜ್ಯಗಳನ್ನು ಸಂಗ್ರಹ ಮಾಡಿ ವಿಲೇವಾರಿ ಘಟಕಕ್ಕೆ ಸಾಗಿಸಲಾಗುತ್ತಿದೆ. ಕೆಲವು ಉದ್ಯೋಗಸ್ಥರು, ವಾಹನ ಸವಾರರು, ಸಂಸ್ಥೆಗಳಿAದ ರಸ್ತೆ ಬದಿಯಲ್ಲಿ ಕಸ ಬಿಸಾಕುವುದು ನಿರಂತರವಾಗಿದ್ದು ಇದಕ್ಕೆ ಕಡಿವಾಣ ಇಲ್ಲವಾಗಿದೆ. ಅಲ್ಲಲ್ಲಿ ಸುರಿದಿರುವ ಕಸದ ಮೇಲೆ ಮಳೆ ನೀರು ಬಿದ್ದು ಸೊಳ್ಳೆಗಳು ಕ್ರಿಮಿ ಕೀಟಗಳ ಸಂತಾನೋತ್ಪತ್ತಿ ಹೆಚ್ಚುತ್ತಿದೆ. ಪುರಸಭೆ ಅಧಿಕಾರಿಗಳು ನಾಗರಿಕರಿಗೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಪರಿಸ್ಥಿತಿ ಬದಲಾಗಿಲ್ಲ ಎಂಬುದು ವಿಪರ್ಯಾಸ. ಇನ್ನು ಮುಂದಾದರು ಸ್ವಚ್ಛತೆ ಕಾಪಾಡಲು ಜನತೆ ಮುಂದಾಗುವುದÀರೋAದಿಗೆ ಸಹಕಾರ ನೀಡಬೇಕು ಎಂಬುದು ಪ್ರಜ್ಞಾವಂತರ ಆಗ್ರಹವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕಸದ ಸಮಸ್ಯೆ ಬಗ್ಗೆ ವ್ಯಾಪಕ ಚರ್ಚೆ ನಡೆದ ಬೆನ್ನಲೇ ಪುರಸಭೆ ಅಧ್ಯಕ್ಷರು ಮತ್ತು ಅಧಿಕಾರಿಗಳು ದಿಟ್ಟ ಕ್ರಮಕ್ಕೆ ಮುಂದಾಗಿದ್ದಾರೆ.