ಮಡಿಕೇರಿ, ನ. ೪: ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸೌಹಾರ್ದತೆ, ಒಗ್ಗಟ್ಟು ಸಾಧ್ಯವಿದೆ ಎಂದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ..ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಬಿ. ರಾಘವ ಅಭಿಪ್ರಾಯಪಟ್ಟಿದ್ದಾರೆ.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ರೋಟರಿ ವಲಯ ೬ ರ ಕಲಾಕಲರವ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ರೋಟರಿ ಸಂಸ್ಥೆಯು ಸ್ವಾರ್ಥರಹಿತವಾಗಿ ಸಾಮಾಜಿಕ ಕಳಕಳಿಯೊಂದಿಗೆ ನಿರಂತವಾಗಿ ಸೇವೆ ಸಲ್ಲಿಸುತ್ತಾ ಬಂದಿದೆ. ರೋಟರಿ ಕೇವಲ ಸಂಸ್ಥೆಯಾಗಿ ಮಾತ್ರವಲ್ಲದೇ ಸಮಾಜದಲ್ಲಿಯೂ ಜನರನ್ನು ಒಗ್ಗೂಡಿಸುವ ಸಂದೇಶಗಳನ್ನು ಸಾರಿ ಹೇಳುತ್ತಾ ಬಂದಿದೆ ಎಂದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಮಾತನಾಡಿ, ೨೨ ವರ್ಷಗಳ ಇತಿಹಾಸವಿರುವ ಮಿಸ್ಟಿ ಹಿಲ್ಸ್ ೩ ನೇ ಬಾರಿಗೆ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಸಿದ್ದು, ೭ ಕ್ಲಬ್‌ಗಳಿಗೆ ಸೇರಿದ ೧೬೦ ಸದಸ್ಯರು ಪಾಲ್ಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ರೋಟರಿ ವಲಯ ೬ ರ ಸಹಾಯಕ ಗವರ್ನರ್ ದಿಲನ್ ಚಂಗಪ್ಪ ಮಾತನಾಡಿ, ಸೇವೆಗೆ ಎಷ್ಟು ಮಹತ್ವ ನೀಡುತ್ತೇವೆಯೋ ಅಂತೆಯೇ ಸಾಂಸ್ಕೃತಿಕ ಕ್ರೀಡೆ ಸೇರಿದಂತೆ ಸ್ನೇಹಪರ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗುತ್ತಿದೆ ಎಂದರು.
ವಲಯ ೬ ರ ಸಹಾಯಕ ಗವರ್ನರ್ ರಾಜುಗೌಡ ಮಾತನಾಡಿ, ಸದಸ್ಯರಲ್ಲಿರುವ ಪ್ರತಿಭೆ ಹೊರಹಾಕಲು ಇಂತಹ ಕಾರ್ಯಕ್ರಮ ಮಹತ್ವ ಪಡೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ವಲಯ ೬ರ ಸಾಂಸ್ಕೃತಿಕ ಸ್ಪರ್ಧೆಗಳ ಸಮಿತಿ ಸಂಚಾಲಕಿ ತೋಟಂಬೈಲು ಸುಭಾಷಿಣಿ ಮಾತನಾಡಿ, ರೋಟರಿ ಸದಸ್ಯರಲ್ಲಿನ ಕಲಾಸಕ್ತಿಯನ್ನು ಉತ್ತೇಜಿಸಲು ಇಂತಹ ಕಾರ್ಯಕ್ರಮ ಅಗತ್ಯ ಎಂದರು.
ರೋಟರಿ ಮಿಸ್ಟಿ ಹಿಲ್ಸ್ನ ಸಾಂಸ್ಕೃತಿಕ ಸಮಿತಿ ಸಂಚಾಲಕ ಜಯಂತ್ ಪೂಜಾರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಬಿ.ಕೆ. ಕಾರ್ಯಪ್ಪ, ವಲಯ ಸೇನಾನಿ ಕಾರ್ಯಪ್ಪ ವೇದಿಕೆಯಲ್ಲಿದ್ದರು. ರೋಟರಿ ಜಿಲ್ಲಾ ಪಬ್ಲಿಕ್ ಇಮೇಜ್ ಸಮಿತಿ ಉಪಾಧ್ಯಕ್ಷ ಅನಿಲ್ ಹೆಚ್.ಟಿ. ನಿರೂಪಿಸಿದರು.
ಕಲಾಕಲರವ ಸ್ಪರ್ಧಾ ವಿಜೇತರು
ಹಾಡುಗಾರಿಕೆ (ಪುರುಷರು) - ಪ್ರಥಮ ಶ್ರೀಹರಿರಾವ್ (ಮಿಸ್ಟಿ ಹಿಲ್ಸ್ ಮಡಿಕೇರಿ) ದ್ವಿತೀಯ - ರವಿ (ಮಡಿಕೇರಿ ರೋಟರಿ ವುಡ್ಸ್) ತೃತೀಯ - ಕೆ.ರಾಜೀವ್ (ಗೋಣಿಕೊಪ್ಪ ರೋಟರಿ)
ಹಾಡುಗಾರಿಕೆ (೧೪ ವರ್ಷಕ್ಕಿಂತ ಕೆಳಗಿನ ವಿಭಾಗ) - ಪ್ರಥಮ - ಲಿಪಿಕಾ ದೇಚಮ್ಮ (ರೋಟರಿ ವುಡ್ಸ್ ಮಡಿಕೇರಿ) ದ್ವಿತೀಯ - ಸುಮೇದ ರಾವ್ (ಮಿಸ್ಟಿ ಹಿಲ್ಸ್), ತೃತೀಯ ಮಹದೇವ (ಹುಣಸೂರು) ನಾಲ್ಕನೇ ಸ್ಥಾನ - ಚಿರಂಜೀವಿ (ಪಿರಿಯಾಪಟ್ಟಣ ಮಿಡ್ ಟೌನ್)
ಹಾಡುಗಾರಿಕೆ (೧೪ ರಿಂದ ೨೧ ನೇ ವಯಸ್ಸಿನ ವಿಭಾಗ) ಪ್ರಥಮ -ಶಾರ್ವರಿ ರೈ (ಮಿಸ್ಟಿ ಹಿಲ್ಸ್) ದ್ವಿತೀಯ - ಇಶಾನಿ ರೈ (ವೀರಾಜಪೇಟೆ ರೋಟರಿ) ತೃತೀಯ - ನÀಮೃತ್ ಗೌಡ (ಮಿಸ್ಟಿ ಹಿಲ್ಸ್)
ನೃತ್ಯ (೧೪ ರಿದ ೨೧ ವಯಸ್ಸಿನ ವಿಭಾಗ) - ಪ್ರಥಮ - ಪ್ರಚೋದಯ (ಗೋಣಿಕೊಪ್ಪ ರೋಟರಿ) ದ್ವಿತೀಯ - ಅನೂಹ್ಯ ಜಿ. ರವಿಶಂಕರ್ (ಮಿಸ್ಟಿ ಹಿಲ್ಸ್), ತೃತೀಯ - ಸೃಜನ್ (ಹುಣಸೂರು ರೋಟರಿ)
ನೃತ್ಯ ಸ್ಪರ್ಧೆ (ಸೋಲೋ) - ಪ್ರಥಮ - ಮೃದಂಗ (ಹುಣಸೂರು ರೋಟರಿ) ದ್ವಿತೀಯ - ರಿಶಾ ಪೂಜಾರಿ (ಮಿಸ್ಟಿ ಹಿಲ್ಸ್) ತೃತೀಯ - ನವನಿಕ (ಗೋಣಿಕೊಪ್ಪ)
ಹಾಡುಗಾರಿಕೆ (ಗ್ರೂಪ್) - ಪ್ರಥಮ - ಹುಣಸೂರು ರೋಟರಿ, ದ್ವಿತೀಯ - ರೋಟರಿ ವುಡ್ಸ್ ಮಡಿಕೇರಿ, ತೃತೀಯ ಗೋಣಿಕೊಪ್ಪ ರೋಟರಿ ಹಾಡುಗಾರಿಕೆ (ಸೋಲೋ - ಮಹಿಳಾ ವಿಭಾಗ) - ಪ್ರಥಮ - ಪ್ರಮೀಳಾ ಶೆಟ್ಟಿ (ರೋಟರಿ ವುಡ್ಸ್), ದ್ವಿತೀಯ - ಡಾ. ಸಂಗೀತ (ಹುಣಸೂರು), ತೃತೀಯ - ಕೆ.ಎಸ್. ಮಮತಾ (ಕೆ.ಆರ್. ನಗರ)
ಡ್ಯೂಯೆಟ್ ನೃತ್ಯ - ಪ್ರಥಮ - ದಿಲನ್ ಚಂಗಪ್ಪ ಮತ್ತು ರಿಶ್ತಾ ಚಂಗಪ್ಪ (ಗೋಣಿಕೊಪ್ಪ ರೋಟರಿ) ದ್ವಿತೀಯ - ಡಾ. ಸಂಗೀತ ಮತ್ತು ಮೃದಂಗ್ (ಹುಣಸೂರು ರೋಟರಿ), ನೃತೀಯ - ನಮಿತಾ ರೈ ಮತ್ತು ಅಧಿತಿ ಚೇತನ್ (ಮಿಸ್ಟಿ ಹಿಲ್ಸ್)
ಹಾಡುಗಾರಿಕೆ (ಡ್ಯುಯೆಟ್) - ಪ್ರಥಮ - ಶ್ರೀಹರಿರಾವ್ ಮತ್ತು ಅನೂಹ್ಯ ರವಿಶಂಕರ್ (ಮಿಸ್ಟಿ ಹಿಲ್ಸ್) ದ್ವಿತೀಯ - ಡಾ. ಸಂಗೀತ ಮತ್ತು ಮಹೇಶ್ (ಹುಣಸೂರು ರೋಟರಿ), ತೃತೀಯ - ಆದಿತ್ಯ ಮತ್ತು ಇಶಾನಿ ರೈ (ವಿರಾಜಪೇಟೆ ರೋಟರಿ) ನಾಲ್ಕನೇ ಸ್ಥಾನ - ರವಿಕುಮಾರ್ ಮತ್ತು ಸ್ಮಿತಾ (ರೋಟರಿ ವುಡ್ಸ್) ಸ್ಟಾಂಡ್ ಅಪ್ ಕಾಮಿಡಿ - ಪ್ರಥಮ - ನಾಗರಾಜ್ ಭಾವಿಕಟ್ಟೆ (ಕೆ.ಆರ್. ನಗರ ರೋಟರಿ), ದ್ವಿತೀಯ - ಡಾ. ಬಸವರಾಜ್ (ಹುಣಸೂರು ರೋಟರಿ) ತೃತೀಯ - ಹರೀಶ್ ಕಿಗ್ಗಾಲು (ರೋಟರಿ ವುಡ್ಸ್)
ಸ್ಕಿಟ್ - ಪ್ರಥಮ - ಶಾಲೆಯಲ್ಲಿ ಸ್ವಚ್ಚತಾ ಸಂದೇಶ (ಹುಣಸೂರು ರೋಟರಿ), ದ್ವಿತೀಯ - ರೋಟರಿಯಿಂದ ಸಹಾಯ ಹಸ್ತ ಸಂದೇಶ (ಗೋಣಿಕೊಪ್ಪ ರೋಟರಿ), ತೃತೀಯ - ಸ್ವಚ್ಛ ಕೊಡಗು - ಸುಂದರ ಕೊಡಗು ಸಂದೇಶ (ರೋಟರಿ ವುಡ್ಸ್ ಮಡಿಕೇರಿ)ಸಮೂಹ ನೃತ್ಯ - ಪ್ರಥಮ - ಗೋಣಿಕೊಪ್ಪ ರೋಟರಿ ಕ್ಲಬ್, ದ್ವಿತೀಯ - ಹುಣಸೂರು ರೋಟರಿ ಕ್ಲಬ್, ತೃತೀಯ - ರೋಟರಿ ವುಡ್ಸ್ ಮಡಿಕೇರಿ.
ರೋಟರಿ ಜಿಲ್ಲೆಯ ಮಾಜಿ ಗವರ್ನರ್ ರವೀಂದ್ರ ಭಟ್, ನಿಯೋಜಿತ ಗವರ್ನರ್ ಸೋಮಶೇಖರ್, ರೋಟರಿ ಸಹಾಯಕ ಗವರ್ನರ್ ದಿಲನ್ ಚಂಗಪ್ಪ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾರ್ಯದರ್ಶಿ ಬಿ.ಕೆ. ಕಾರ್ಯಪ್ಪ, ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಸುಭಾಷಿಣಿ, ಜಯಂತ್ ಪೂಜಾರಿ ಹಾಜರಿದ್ದ ಕಾರ್ಯಕ್ರಮವನ್ನು ಮಿಸ್ಟಿ ಹಿಲ್ಸ್ ನಿರ್ದೇಶಕರಾದ ಅನಿಲ್ ಎಚ್.ಟಿ. ಮತ್ತು ರಶ್ಮಿ ದೀಪಾ ನಿರೂಪಿಸಿದರು. ಸ್ಪರ್ಧಾ ತೀರ್ಪುಗಾರರಾಗಿ ಮಾದಾಪುರ ಶ್ರೀಮತಿ ಡಿ. ಚೆನ್ನಮ್ಮ ಕಾಲೇಜಿನ ಉಪನ್ಯಾಸಕಿ ಚೆಯ್ಯಂಡ ಸೀಮಾ ಮಂದಪ್ಪ, ವಿರಾಜಪೇಟೆಯ ನೃತ್ಯ ತರಬೇತುದಾರರಾದ ಜಿನಿನ್ ಮೋರಾಸ್, ಪಿ.ಡಿ. ಸುಧಾ ಕಾರ್ಯನಿರ್ವಹಿಸಿದ್ದರು.