ಮಡಿಕೇರಿ, ನ. ೪: ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಚೆನೈಯಲ್ಲಿ ಅ.೨೭ ರಿಂದ ನ.೪ ರವರೆಗೆ ನಡೆದ ೨೭ನೇ ರಾಷ್ಟಿçÃಯ ಕುಮಾರ್ ಸುರೇಂದರ್ ಸಿಂಗ್ ಇಂಟರ್ ಸ್ಕೂಲ್ ಶೂಟಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕಾನಡ್ಕ ಧನ್ವಿ ೧೦ ಮೀ. ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಸಬ್ ಯೂತ್ ಮಹಿಳೆಯರ ವಿಭಾಗದಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾಳೆ.

ರಾಷ್ಟçದ ವಿವಿಧ ಭಾಗಗಳ ೨೫೦೦ಕ್ಕೂ ಹೆಚ್ಚು ಯುವ ಶೂಟರ್‌ಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಕಾನಡ್ಕ ಧನ್ವಿ ಬೆಂಗಳೂರಿನ ಡೆಲ್ಲಿ ಪಬ್ಲಿಕ್ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಅಂತರರಾಷ್ಟಿçÃಯ ಕೋಚ್ ಶರಣೇಂದ್ರ ಕೆ.ವೈ ಅವರ ಮಾರ್ಗದರ್ಶನದಲ್ಲಿ ಹಾಕ್ ಐ ಸ್ಪೋರ್ಟ್ಸ್ ರೈಫಲ್ ಮತ್ತು ಪಿಸ್ತೂಲ್ ಶೂಟಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ಧನ್ವಿ ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದ ಕೃಷಿಕ ಕಾನಡ್ಕ ಹನೀಶ್ ಹಾಗೂ ಆಶಾ ದಂಪತಿಯ ಪುತ್ರಿ.