ಗುಡ್ಡೆಹೊಸೂರು, ನ. ೪: ಸಾಕ್ಷರತೆ ಬಗ್ಗೆ ಅರಿವು ಮೂಡಿಸಲು ಗುಡ್ಡೆಹೊಸೂರು ವೃತ್ತದ ಬಳಿ ಬೀದಿ ನಾಟಕ ನಡೆಯಿತು. ನಾಟಕವನ್ನು ಕಲಾಸಾಗರ ನಾಟಕ ತಂಡದ ರಾಜು ಮತ್ತು ತಂಡದವರು ನಡೆಸಿಕೊಟ್ಟರು.

ಈ ಸಂದರ್ಭ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆರ್. ಹೇಮಂತ್ ರಾಜ್ ಮತ್ತು ಜಿಲ್ಲಾ ವಯಸ್ಕರ ಶಿಕ್ಷಣ ಕಾರ್ಯಕ್ರಮ ಸಹಾಯಕಿ ಯಮುನಾ ಮತ್ತು ಇಲ್ಲಿನ ಶಾಲಾ ಮುಖ್ಯೋಪಾಧ್ಯಾಯ ಕೆ.ಎಸ್. ಸಣ್ಣಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕುಡೆಕ್ಕಲ್ ಚಿದಾನಂದ, ನಿತ್ಯಾನಂದ, ಸಾರ್ವಜನಿಕರು ಹಾಜರಿದ್ದರು.