ಸೋಮವಾರಪೇಟೆ, ಅ. ೩: ಕಳೆದ ೨ ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ೨೧ ವರ್ಷ ಪ್ರಾಯದ ಯುವಕನೋರ್ವ ಮಡದಿಯ ಮನೆಯಲ್ಲಿ ಸಾವನ್ನಪ್ಪಿದ್ದು, ಮೇಲ್ನೋಟಕ್ಕೆ ಹೃದಯಾಘಾತ ಎಂದು ನಂಬಲಾಗಿದ್ದರೂ, ಮೃತನ ಸಾವಿಗೆ ಸಂಬAಧಿಸಿದAತೆ ಮನೆಯವರು ಸಂಶಯ ವ್ಯಕ್ತಪಡಿಸಿ ಪೊಲೀಸ್ ದೂರು ನೀಡಿದ್ದಾರೆ.
ಐಗೂರು ಗ್ರಾಮದ ಪ್ರೇಮನಗರ ನಿವಾಸಿ ರೋಹನ್(೨೧) ಎಂಬಾತ ಕಳೆದ ಎರಡು ತಿಂಗಳ ಹಿಂದಷ್ಟೇ ಹೊಸಬೀಡು ಗ್ರಾಮದ ಯುವತಿಯನ್ನು ವಿವಾಹವಾಗಿದ್ದ. ವಿವಾಹಕ್ಕೆ ಮನೆಯವರ ಸಹಮತ ಇಲ್ಲದ್ದರಿಂದ ಪತ್ನಿಯ ಮನೆಯಲ್ಲಿಯೇ ನೆಲೆಸಿದ್ದ.
ಈ ನಡುವೆ ನಿನ್ನೆ ದಿನ ಕೆಲಸಕ್ಕೆ ತೆರಳಿ ಸಂಜೆ ವಾಪಸ್ ಆಗಿದ್ದ ರೋಹನ್, ಮನೆಯಲ್ಲಿ ಕುಸಿದು ಬಿದ್ದಿದ್ದಾನೆ ಎನ್ನಲಾಗಿದ್ದು, ತಕ್ಷಣ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಷ್ಟರಲ್ಲಾಗಲೇ ರೋಹನ್ ಮೃತಪಟ್ಟಿರುವ ಬಗ್ಗೆ ವೈದ್ಯರು ದೃಢೀಕರಿಸಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಮೃತ ರೋಹನ್ನ ಸಂಬAಧಿಕರು ಸಾವಿಗೆ ಸಂಬAಧಿಸಿದAತೆ ಸಂಶಯ ವ್ಯಕ್ತಪಡಿಸಿ, ತನಿಖೆ ನಡೆಸುವಂತೆ ಸೋಮವಾರಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತ ರೋಹನ್ ಪತ್ನಿ ಸೇರಿದಂತೆ ಪೋಷಕರನ್ನು ಅಗಲಿದ್ದಾನೆ.