ಮಡಿಕೇರಿ, ನ. ೩: ಅಖಿಲ ಕೊಡಗು ಕೆಂಬಟ್ಟಿ ಸಮಾಜದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಯಾಗಿ ಮನವಿ ಸಲ್ಲಿಸಲಾಯಿತು.
ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರ ಮೂಲಕ ಬೆಂಗಳೂರಿನಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಯಾದ ಅಖಿಲ ಕೊಡಗು ಕೆಂಬಟ್ಟಿ ಸಮಾಜ ಹಾಗೂ ಕೆಂಬಟ್ಟಿ ಪೊಮ್ಮಕ್ಕಡ ಕೂಟದ ಪದಾಧಿಕಾರಿಗಳ ನಿಯೋಗ ಕೆಂಬಟ್ಟಿ ಹೆಸರನ್ನು ಜಾತಿ ಪಟ್ಟಿಯಲ್ಲಿ ಸೇರಿಸಬೇಕೆಂದು ಮನವಿ ಸಲ್ಲಿಸಿತು. ಜೊತೆಗೆ ಎ.ಎಸ್. ಪೊನ್ನಣ್ಣ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಪ್ರಮುಖರು ಒತ್ತಾಯಿಸಿದರು.
ಸಮಾಜದ ಅಧ್ಯಕ್ಷ ಬಿಲ್ಲರಿಕುಟ್ಟಡ ಪ್ರಭು ಅಯ್ಯಪ್ಪ, ಪ್ರಮುಖರಾದ ಚಿಮ್ಮಿಕುಟ್ಟಡ ನಿತೇಶ್, ಚವರೆಕುಟ್ಟಡ ಜೀವನ್, ಬಾಳೆಕುಟ್ಟಡ ಉದಯ್ ಮಾದಪ್ಪ, ಚವರೆಕುಟ್ಟಡ ಸುಬ್ರಮಣಿ, ಕೂಪರೆಕುಟ್ಟಡ ಸಾಗರ್ ಪೂವಣ್ಣ, ಮೂಳೆಕುಟ್ಟಡ ದಿನೇಶ್ ಪೆಗ್ಗೋಲಿ, ಚೋಕುಟ್ಡಡ ಚಿಮ್ಮ ಅಯ್ಯಪ್ಪ, ಯಾರಕುಟ್ಟಡ ವಿನೋದ್, ಉಪ್ಪಚ್ಚುಕುಟ್ಟಡ ಅನಿಕೇತನ್, ರಂಜಿತ್, ಉತ್ತುಕುಟ್ಟಡ ಚರಣ್, ಬಿದ್ದಣಕುಟ್ಟಡ ಕಿರಣ್ ಕಾವೇರಪ್ಪ, ಉಮ್ಮಣಕುಟ್ಟಡ ಡಾಲಿ, ಯಾರಕುಟ್ಟಡ ಮಹೇಶ್, ಚಿಮ್ಮಿಕುಟ್ಟಡ ವಿಲ್ಮ, ಬಿದ್ದಣಕುಟ್ಟಡ ರೋಹಿಣಿ, ಚೋಕುಟ್ಟಡ ವೈಶಾಲಿ, ಉತ್ತುಕುಟ್ಟಡ ದೀಪಿಕಾ, ತಿಲಕ್ ಈ ಸಂದರ್ಭ ಹಾಜರಿದ್ದರು.