ಗೋಣಿಕೊಪ್ಪಲು. ನ. ೨: ಗ್ರಾಮೀಣ ಭಾಗವಾದ ದ. ಕೊಡಗಿನ ಬಾಳೆಲೆ ಗ್ರಾಮದಲ್ಲಿ ಹಲವು ದಶಕಗಳಿಂದ ಸರ್ಕಾರಿ ಆಸ್ಪತ್ರೆಯಾಗಿ ಸಕಲ ಸೌಕರ್ಯಗಳೊಂದಿಗೆ ಉತ್ತಮ ವೈದ್ಯರ ಹಾಗೂ ಸಿಬ್ಬಂದಿಗಳ ತಂಡದೊAದಿಗೆ ಸಾಗುತ್ತಿದ್ದ ಆಸ್ಪತ್ರೆಯ ಸೇವೆಯು ಬಾಳೆಲೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ವರದಾನವಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರೇ ಈ ಭಾಗದಲ್ಲಿ ನೆಲೆಸಿರುವುದರಿಂದ ಆಸ್ಪತ್ರೆಯ ಪ್ರಯೋಜನಗಳು ಲಭಿಸುತ್ತಿದ್ದವು. ಸ್ಥಳೀಯ ದಾನಿಗಳ ಸಹಕಾರದಿಂದ ಆಸ್ಪತ್ರೆಯ ಅಭಿವೃದ್ಧಿ ಕಾರ್ಯಗಳಿಗೂ ಪೂರಕ ಬೆಂಬಲ ವ್ಯಕ್ತವಾಗುತ್ತಿದ್ದವು.
ಬದಲಾದ ಕಾಲಘಟ್ಟದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದ ಈ ಸರ್ಕಾರಿ ಆಸ್ಪತ್ರೆಯ ನಿರ್ವಹಣೆ ಜವಾಬ್ದಾರಿಯನ್ನು ಕೆಲ ವರ್ಷಗಳ ಹಿಂದೆ ಖಾಸಗಿ ಸಂಸ್ಥೆಗೆ ವಹಿಸಲಾಗಿತ್ತು. ಆರಂಭದ ವರ್ಷದಲ್ಲಿ ಉತ್ತಮ ರೀತಿಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳು ಹಾಗೂ ವೈದ್ಯರ ತಂಡ ವರ್ಷ ಕಳೆಯುತ್ತಿದ್ದಂತೆಯೇ ವೈದ್ಯರ ಸಮಸ್ಯೆ ಈ ಆಸ್ಪತ್ರೆಗೆ ಕಾಡಲಾರಂಭಿಸಿತು. ಅಲ್ಲದೆ ರೋಗಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಆಸ್ಪತ್ರೆಯ ಆವರಣ ಸುತ್ತಲಿನಲ್ಲಿ ಗಿಡಗಂಟಿಗಳಿAದ ತುಂಬಿದೆ. ಶುಚಿತ್ವದ ಕೊರತೆ ಎದ್ದು ಕಾಡುತ್ತಿದೆ. ಆಸ್ಪತ್ರೆಯ ಒಳಾಂಗಣದಲ್ಲಿ ಟೈಲ್ಸ್ಗಳು ಒಡೆದು ಹೋಗಿದ್ದು ಹಲವು ಸಮಯಗಳೇ ಕಳೆದಿವೆ. ಆಸ್ಪತ್ರೆಗೆ ತೆರಳುವ ವಯೋವೃದ್ದರು ಭಯದಿಂದಲೇ ಹೆಜ್ಜೆ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾರ್ವಜನಿಕರ ಹಿತಕ್ಕಾಗಿ ಸ್ಥಳೀಯ ದಾನಿಗಳಿಂದ ಆಸ್ಪತ್ರೆಯ ನಿರ್ವಹಣೆಗೆ ಬೇಕಾದ ಸಹಕಾರವನ್ನು ಪಡೆಯಬಹುದಾದ ಅವಕಾಶವಿದ್ದರೂ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಖಾಸಗಿ ಸಂಸ್ಥೆಯು ಸ್ಥಳೀಯ ನಾಗರಿಕರೊಂದಿಗೆ ಉತ್ತಮ ಬಾಂಧವ್ಯ ಇಲ್ಲದಿರುವುದರಿಂದ ಸಣ್ಣ ಪುಟ್ಟ ಸಮಸ್ಯೆಗಳು ಕೂಡ ಹಾಗೆ ಮುಂದುವರೆದಿದೆ.
ಖಾಸಗಿ ಸಂಸ್ಥೆ ವಹಿಸಿಕೊಂಡ ನಂತರ ವೈದ್ಯರ ಸಮಸ್ಯೆ ನಿರಂತರವಾಗಿ ಕಾಡುತ್ತಿದೆ. ಇಲ್ಲಿನ ಕಾರ್ಮಿಕ ವರ್ಗ ಬಹುತೇಕ ಇದೇ ಆಸ್ಪತ್ರೆಯನ್ನು ನಂಬಿದ್ದಾರೆ. ಆದರೆ ಉತ್ತಮ ಚಿಕಿತ್ಸೆ ಹಾಗೂ ಸೌಕರ್ಯಗಳು ಸಿಗುತ್ತಿಲ್ಲ ಎಂಬ ಆರೋಪವು ವ್ಯಕ್ತವಾಗುತ್ತಿವೆ. ಅನಿವಾರ್ಯವಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಇಲ್ಲಿನ ಆಸ್ಪತ್ರೆಗೆ ತೆರಳದೆ ದೂರದ ಗೋಣಿಕೊಪ್ಪ ಆಸ್ಪತ್ರೆಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ದಾನಿಗಳ ಸಹಕಾರದಿಂದ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಈ ಆಸ್ಪತ್ರೆಯ ಸೇವೆಯು ಕೆಲ ವರ್ಷಗಳಿಂದ ನಿರ್ವಹಣೆ ಇಲ್ಲದಂತಾಗಿದೆ. ಖಾಸಗಿ ಸಂಸ್ಥೆ ಆಸ್ಪತ್ರೆ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ಸಾರ್ವಜನಿಕರಿಗೆ ನೀಡಬೇಕಾದ ಸೌಕರ್ಯಗಳು ಮರೀಚಿಕೆಯಾಗುತ್ತಿದೆ. ನಿರೀಕ್ಷಿತ ಮಟ್ಟದಲ್ಲಿ ನಾಗರಿಕರಿಗೆ ಆಸ್ಪತ್ರೆಯ ಸೇವೆ ಲಭ್ಯವಾಗುತ್ತಿಲ್ಲ ಆಸ್ಪತ್ರೆಯ ನಿರ್ವಹಣೆಯ ಬಗ್ಗೆ ಗ್ರಾಮದ ಹಿರಿಯರು, ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಜಿಲ್ಲಾ ಗೌರವ ಅಧ್ಯಕ್ಷರಾದ ಅರಮಣಮಾಡ ಸತೀಶ್ ದೇವಯ್ಯ ಪ್ರತಿಕ್ರಿಯಿಸಿ, ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಟ್ರಸ್ಟ್ ಆಸ್ಪತ್ರೆಯ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ಆರಂಭದ ವರ್ಷದಲ್ಲಿ ಉತ್ತಮವಾಗಿಯೇ ನಾಗರಿಕರಿಗೆ ಸೇವೆ ಲಭ್ಯವಾಗುತ್ತಿತ್ತು.
ವರ್ಷ ಕಳೆಯುತ್ತಿದ್ದಂತೆಯೇ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯೊಂದಿಗೆ ಸಮಸ್ಯೆ ಕಾಡಲಾರಂಭಿಸಿದೆ. ಈ ಬಗ್ಗೆ ಆಸ್ಪತ್ರೆಯ ನಿರ್ವಹಣೆ ಹೊತ್ತಿರುವ ಸಂಸ್ಥೆಯೊAದಿಗೆ ಮಾತನಾಡಿದರೂ ಉದ್ಗಟತನ ಪ್ರದರ್ಶನ ಮಾಡುತ್ತಾರೆ. ಪ್ರಮುಖವಾಗಿ ವೈದ್ಯರ ಕೊರತೆ ಇರುವುದರಿಂದ ಇಲ್ಲಿನ ಜನರಿಗೆ ಈ ಆಸ್ಪತ್ರೆಯ ಪ್ರಯೋಜನ ಅಷ್ಟಾಗಿ ದೊರಕುತ್ತಿಲ್ಲ. ಆಸ್ಪತ್ರೆಯ ಆವರಣವೂ ಗಿಡಗಂಟಿಗಳಿAದ ತುಂಬಿ ಹೋಗಿದೆ.
ನಿರ್ವಹಣೆಯನ್ನು ಮರೆತಂತಿದೆ. ಜಿಲ್ಲೆಗೆ ಹೆಸರುವಾಸಿ ಯಾಗಿದ್ದ ಬಾಳೆಲೆ ಆಸ್ಪತ್ರೆಯು ಇದೀಗ ಸಮಸ್ಯೆಯ ಗೂಡಾಗಿ ಕಾಡುತ್ತಿದೆ. ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಈ ಬಗ್ಗೆ ಗಂಭೀರ ಪರಿಗಣಿಸಿ ಆಸ್ಪತ್ರೆ ನಿರ್ವಹಣೆ ಹಾಗೂ ವೈದ್ಯರ ನೇಮಕಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಹಳೆಯ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಪ್ರಯತ್ನ ಮುಂದಾಗುವAತೆ ಮನವಿ ಮಾಡಿದರು.
ಈ ವೇಳೆ ಗ್ರಾಮಸ್ಥರಾದ ಅರಮಣಮಾಡ ಪ್ರಸಿನ್ ಬೋಪಣ್ಣ, ಮಚ್ಚಮಾಡ ಸಭಿ ಅಯ್ಯಪ್ಪ, ಮುತ್ತಮ್ಮ, ಮಾಚಂಗಡ ಪೂನಂ, ಉಪಸ್ಥಿತರಿದ್ದರು.
-ಹೆಚ್.ಕೆ. ಜಗದೀಶ್