ಮಡಿಕೇರಿ, ನ. ೨: ಕೊಡವ ತಕ್ಕ್ ಜನಾಂಗಕಾರಡ ಒಕ್ಕೂಟದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿತು. ಇದೇ ಸಂದರ್ಭ ಒಕ್ಕೂಟದ ಲೋಗೋವನ್ನು ಸಿಎಂ ಬಿಡುಗಡೆಗೊಳಿಸಿದರು.

ಕೊಡಗಿನಲ್ಲಿ ಕೊಡವ ಭಾಷೆ ಮಾತನಾಡುವ ಮತ್ತು ಸಂಸ್ಕೃತಿಯನ್ನು ಒಳಗೊಂಡ ಮೂಲನಿವಾಸಿ ಸಮುದಾಯಗಳಿವೆ. ೪೫ ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಮೂಲನಿವಾಸಿ ಸಮುದಾಯಗಳು ತನ್ನದೇ ಆದ ಸಂಸ್ಕೃತಿ, ಸಂಪ್ರದಾಯವನ್ನು ಹೊಂದಿದೆ. ಈ ನಿಟ್ಟಿನಲ್ಲಿ ಮೂಲನಿವಾಸಿಗಳ ಸಾಂಸ್ಕೃತಿಕ ಸಮುದಾಯ ನಿರ್ಮಾಣಕ್ಕೆ ೧೦ ಎಕರೆ ಜಾಗ ಮಂಜೂರಾತಿ ಮಾಡಬೇಕೆಂದು ಒಕ್ಕೂಟದ ಪದಾಧಿಕಾರಿಗಳು ಬೇಡಿಕೆ ಸಲ್ಲಿಸಿದರು.

ಇದರೊಂದಿಗೆ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಸರಕಾರದಲ್ಲಿ ಸಚಿವ ಸ್ಥಾನಮಾನ ನೀಡಬೇಕೆಂದು ಪದಾಧಿಕಾರಿಗಳು ಒತ್ತಾಯಿಸಿದರು.

ಭೇಟಿ ಸಂದರ್ಭ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ವೀರಾಜಪೇಟೆ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಒಕ್ಕೂಟದ ಸ್ಥಾಪಕ ಅಧ್ಯಕ್ಷ ಕೊರಕುಟ್ಟೀರ ಸರ ಚಂಗಪ್ಪ, ಅಧ್ಯಕ್ಷ ಪಡಿಞ್ಞರಂಡ ಜಿ ಅಯ್ಯಪ್ಪ ಪ್ರಧಾನ ಕಾರ್ಯದರ್ಶಿ ಮೊಳ್ಳೆಕುಟ್ಟಂಡ ದಿನು ಬೋಜಪ್ಪ, ಉಪಾಧ್ಯಕ್ಷ ಕುಡಿಯರ ಮುತ್ತಪ್ಪ, ಬಾನಂಡ ಪ್ರಥ್ಯು ಖಜಾಂಚಿ ತೋರೆರ ಮುದ್ದಯ್ಯ, ನಿರ್ದೇಶಕರುಗಳಾದ ಪಂದಿಕAಡ ಕುಶ (ದಿನೇಶ್), ಕಳ್ಳೀರ ಲವಪ್ಪ, ಕಣಿಯರ ನಾಣಯ್ಯ, ಐನಮಂಡ ರೈನಾ ಕಾರ್ಯಪ್ಪ, ಕೈಪಂಗಡ ಕೆ ಉತ್ತಪ್ಪ, ಪಣಿಕಡ ಅನು ಕಾರ್ಯಪ್ಪ, ಐನತಂಡ ನಂದ ಉತ್ತಯ್ಯ, ಚೆಲ್ಲಿಯಂಡ ಪ್ರಣೀತ್, ಮಡಿವಾಳರ ಲೋಹಿತ್, ಕಾರಿಪಟ್ಟಡ ದೀಪಕ್ ಅಚ್ಚಯ್ಯ ಹಾಜರಿದ್ದರು.