*ಗೋಣಿಕೊಪ್ಪ, ನ. ೨: ಶ್ರೀಗಂಧ ಮರದನ್ನು ಅಕ್ರಮವಾಗಿ ಕಡಿದು ನಾಟಾಗಳನ್ನಾಗಿಸಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ತಿತಿಮತಿ ವನ್ಯಜೀವಿ ವಲಯ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.

ಪೊನ್ನAಪೇಟೆ ತಾಲೂಕಿನ ತಿತಿಮತಿ ರಾಜೀವ್ ಗಾಂಧಿ ರಾಷ್ಟಿçÃಯ ಉದ್ಯಾನವನ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಆನೆಚೌಕೂರು ವನ್ಯಜೀವಿ ವಲಯದ ಅರಿಕೇರಿ ಮೀಸಲು ಅರಣ್ಯ ಪ್ರದೇಶದ ಮತ್ತಿಗೋಡು ಶಾಖೆಯಲ್ಲಿ ಈ ಘಟನೆ ನಡೆದಿದೆ.

ಮತ್ತಿಗೋಡು ಗಸ್ತಿನ ಚೌಡಿಕಟ್ಟೆ ಅರಣ್ಯ ಪ್ರದೇಶದಲ್ಲಿ ಆರೋಪಿಗಳಾದ ತಿತಿಮತಿ ವಿನಾಯಕ ನಗರ, ನೊಕ್ಕ ಗ್ರಾಮದ ನಿವಾಸಿಗಳಾದ ಶಫೀಕ್ ಕೆ.ಬಿ, ಪ್ರಮೋದ್ ಅವರುಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹುಣಸೂರು ನಾಗರಹೊಳೆ ಹುಲಿ ಸಂರಕ್ಷಿತ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕಿ ಸೀಮಾ, ವನ್ಯಜೀವಿ ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷಿö್ಮÃಕಾಂತ್ ಎಸ್. ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆನೆಚೌಕೂರು ವನ್ಯಜೀವಿ ವಲಯ ಅರಣ್ಯಾಧಿಕಾರಿ ದೇವರಾಜು ಡಿ, ಉಪ ವಲಯ ಅರಣ್ಯಾಧಿಕಾರಿ ಭರತ್ ಎಸ್, ಮತ್ತಿಗೋಡು ಶಾಖೆ ಮೋಜಣಿದಾರ ರಘು ಕೆ.ಸಿ, ಗಸ್ತು ಅರಣ್ಯ ಪಾಲಕರುಗಳಾದ ಪೂರ್ಣಿಮಾ ಟಿ.ಎಸ್, ರಮೇಶ ಎಂ. ಹಾಗೂ ಅರಣ್ಯ ಸಿಬ್ಬಂದಿಗಳು ಇದ್ದರು.