ಮಡಿಕೇರಿ, ನ. ೧: ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ರೋಟರಿ ಸದಸ್ಯರಿಗಾಗಿ ನ.೨ ರಂದು (ಇಂದು) ಕಲಾಕಲರವ ಸಾಂಸ್ಕೃತಿಕ ಸ್ಪರ್ಧೆಗಳು ಆಯೋಜಿಸಲ್ಪಟ್ಟಿದೆ ಎಂದು ಸಮಿತಿ ಸಂಚಾಲಕ ಜಯಂತ್ ಪೂಜಾರಿ ತಿಳಿಸಿದ್ದಾರೆ.

ಬೆಳಿಗ್ಗೆ ೧೦ ಗಂಟೆಗೆ ರೋಟರಿ ವಲಯ ೬ರ ಸದಸ್ಯರಿಗಾಗಿ ಆಯೋಜಿತ ಸ್ಪರ್ಧೆಗಳಿಗೆ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಪ್ರಾಂಶುಪಾಲ ಮೇಜರ್ ಬಿ. ರಾಘವ ಚಾಲನೆ ನೀಡಲಿದ್ದಾರೆ. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾರ್ಯದರ್ಶಿ ಬಿ.ಕೆ. ಕಾರ್ಯಪ್ಪ, ವಲಯ ೬ ರ ಸಹಾಯಕ ಗವರ್ನರ್ ದಿಲನ್ ಚಂಗಪ್ಪ, ರಾಜುಗೌಡ, ಉಲ್ಲಾಸ್ ಕೃಷ್ಣ, ಸಾಂಸ್ಕೃತಿಕ ಸಮಿತಿಯ ವಲಯಾಧ್ಯಕ್ಷೆ ತೋಟಂಬೈಲು ಶುಭಾಷಿಣಿ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ವಲಯ ೬ ಕ್ಕೆ ಸೇರಿರುವ ರೋಟರಿಯ ೧೪ ಕ್ಲಬ್‌ಗಳ ಸದಸ್ಯರು, ಕುಟುಂಬ ವರ್ಗದ ೨೨೦ ಸದಸ್ಯರು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಯಂತ್ ಪೂಜಾರಿ ಮಾಹಿತಿ ನೀಡಿದ್ದಾರೆ.