ಐಸಿಸಿ ವನಿತೆಯರ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ, ಇಂದು ಟೀಂ ಇಂಡಿಯಾ - ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸೆಣಸಲಿದೆ. ಈ ಪಂದ್ಯ ನವೀ ಮುಂಬಯಿ ಡಾ. ಡಿ.ವೈ. ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮುವ ತಂಡ ೩೯ ಕೋಟಿ ೫೫ ಲಕ್ಷ ರೂಪಾಯಿ ಬಹುಮಾನ ಪಡೆಯಲಿದೆ. ರನ್ನರ್ ಅಪ್ ಗೌರವಕ್ಕೆ ಪಾತ್ರವಾಗುವ ತಂಡ ೧೯ ಕೋಟಿ ೭೭ ಲಕ್ಷ ರೂಪಾಯಿ ಬಹುಮಾನ ತನ್ನದಾಗಿಸಿಕೊಳ್ಳಲಿದೆ. ಒಂದುವೇಳೆ ಮಳೆ ಅಡ್ಡಿಯಾಗಿ ಈ ಪಂದ್ಯದಲ್ಲಿ ಫಲಿತಾಂಶ ಹೊರಹೊಮ್ಮದಿದ್ದರೆ, ಉಭಯ ತಂಡಗಳನ್ನು ಜಂಟಿ ವಿಶ್ವ ಚಾಂಪಿಯನ್ ಎಂದು ಘೋಷಿಸಲಾಗುವುದು.
ಇದುವರೆಗೆ ಟೀಂ ಇಂಡಿಯಾ ಆಗಲಿ, ದಕ್ಷಿಣ ಆಫ್ರಿಕಾ ಆಗಲಿ, ವನಿತೆಯರ ವಿಶ್ವಕಪ್ ಪಂದ್ಯಾವಳಿಯ ಯಾವುದೇ ಮಾದರಿಯಲ್ಲಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿಲ್ಲ. ಆದ್ದರಿಂದ ಈ ಬಾರಿ ಹೊಸ ತಂಡವೊAದು ವಿಶ್ವ ಚಾಂಪಿಯನ್ ಪಟ್ಟಕ್ಕೇರುವುದು ಖಚಿತ.
ಇದುವರೆಗೆ ನಡೆದಿರುವ ಈ ಪಂದ್ಯಾವಳಿಯ ೧೨ ಆವೃತ್ತಿಗಳಲ್ಲಿ ಆಸ್ಟೆçÃಲಿಯಾ ೭ ಬಾರಿ ವಿಶ್ವ ಚಾಂಪಿಯನ್ ಆಗಿದ್ದರೆ, ಇಂಗ್ಲೆAಡ್ ೪ ಬಾರಿ ಈ ಗೌರವಕ್ಕೆ ಪಾತ್ರವಾಗಿದೆ. ನ್ಯೂಜಿಲೆಂಡ್ ಒಂದು ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಭಾರತ ಈ ಪಂದ್ಯಾವಳಿಯ ಆತಿಥ್ಯ ವಹಿಸಿದ್ದು, ಪಾಕಿಸ್ತಾನವೂ ಪಂದ್ಯಾವಳಿಯಲ್ಲಿ ಆಡಿದ್ದರಿಂದ, ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಿದ್ದು, ಕೆಲವು ಪಂದ್ಯಗಳು ಶ್ರೀಲಂಕಾದ ಕೊಲಂಬೊದಲ್ಲಿ ನಡೆದಿವೆ.
ಬುಧವಾರ ಗುವಾಹಟಿಯಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆAಡ್ ತಂಡದ ವಿರುದ್ಧ ೧೨೫ ರನ್‌ಗಳಿಂದ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ. ಗುರುವಾರ ನವೀ ಮುಂಬಯಿನಲ್ಲಿ ನಡೆದ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟೆçÃಲಿಯಾ ವಿರುದ್ಧ ಗೆಲುವು ಸಾಧಿಸಿ, ಟೀಂ ಇಂಡಿಯಾ ಆತ್ಮವಿಶ್ವಾಸದೊಂದಿಗೆ ಫೈನಲ್‌ಗೆ ಲಗ್ಗೆಯಿಟ್ಟಿದೆ.
ಆಸ್ಟೆçÃಲಿಯಾ ಒಡ್ಡಿದ್ದ ೩೩೮ ರನ್ ಸವಾಲನ್ನು ಯಶಸ್ವಿಯಾಗಿ ಬೆನ್ನತ್ತಿ ಗೆಲುವು ಸಾಧಿಸಿದ ಟೀಂ ಇಂಡಿಯಾ, ಬೃಹತ್ ಮೊತ್ತವನ್ನು ಬೆನ್ನತ್ತಿ ಗೆಲುವು ತನ್ನದಾಗಿಸಿಕೊಂಡ ದಾಖಲೆ ನಿರ್ಮಿಸಿದೆ. ಜೆಮಿಮಾ ರಾಡ್ರಿಗಸ್ ಗಳಿಸಿದ ಅಜೇಯ ೧೨೭ ಮತ್ತು ನಾಯಕಿ ಹರ್ಮನ್ ಪ್ರೀತ್ ಕೌರ್ ಗಳಿಸಿದ ೮೯ ರನ್ ನೆರವಿನಿಂದ ೪೮.೩ ಓವರುಗಳಲ್ಲಿ ೫ ವಿಕೆಟ್‌ಗಳಿಗೆ ೩೪೧ ರನ್ ಗಳಿಸಿ ೫ ವಿಕೆಟ್ ಅಂತರದ ಜಯದೊಂದಿಗೆ ಭಾರತ ಫೈನಲ್ ಪ್ರವೇಶಿಸಿದೆ.
ದಕ್ಷಿಣ ಆಫ್ರಿಕಾ ತಂಡ ಇಂಗ್ಲೆAಡ್ ವಿರುದ್ಧ ಸೆಮಿಫೈನಲ್‌ನಲ್ಲಿ ೫೦ ಓವರ್‌ಗಳಲ್ಲಿ ೭ ವಿಕೆಟ್‌ಗೆ ೩೧೯ ರನ್ ಗಳಿಸಿತ್ತು. ತಂಡದ ನಾಯಕಿ ಲಾರಾ ವೊಲ್ವಾರ್ಟ್ ೧೬೯ ರನ್, ತಾಜ್ಮೀನ್ ಬ್ರಿಟ್ಸ್ ೪೫ ಮತ್ತು ಮರೈಝೂನ್ ಕಾಪ್ ೪೨ ರನ್ ಗಳಿಸಿದ್ದು, ಇಂಗ್ಲೆAಡ್ ವಿರುದ್ಧ ಗೆಲುವಿಗೆ ಸಹಕಾರಿಯಾಯಿತು.
ಸೆಮಿಫೈನಲ್ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಮತ್ತು ಟೀಂ ಇಂಡಿಯಾ, ಉಭಯ ತಂಡಗಳೂ ೩೦೦ ರನ್‌ಗಳಿಗಿಂತ ಹೆಚ್ಚಿನ ಮೊತ್ತ ಕಲೆಹಾಕಿದ್ದರಿಂದ, ಈ ಬಾರಿ ಹೈವೋಲ್ಟೇಜ್ ಫೈನಲ್ ಪಂದ್ಯವನ್ನು ನಿರೀಕ್ಷಿಸಬಹುದು.
ಆದರೆ, ದಕ್ಷಿಣ ಆಫ್ರಿಕಾ ತಂಡದ ಆಟಗಾರ್ತಿಯರು ಸ್ಪಿನ್ ಬೌಲಿಂಗ್ ದಾಳಿಗೆ ತಿಣುಕಾಡುವುದರಿಂದ, ಆ ತಂಡದ ಬಲಹೀನತೆಯನ್ನು ಭಾರತದ ಬೌಲರ್‌ಗಳು ಲಾಭವಾಗಿಸಿಕೊಳ್ಳಬೇಕಿದೆ.
ಸೆಮಿಫೈನಲ್‌ನಲ್ಲಿ ಎಡವಿದ ಟೀಂ ಇಂಡಿಯಾ ಉಪನಾಯಕಿ ಸ್ಮೃತಿ ಮಂದಾನ ಮತ್ತು ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ತಮ್ಮ ಉತ್ತಮ ಪ್ರದರ್ಶನವನ್ನು ಫೈನಲ್‌ಗೆ ಕಾದಿರಿಸಿದಂತಿದೆ. ಸೆಮಿಫೈನಲ್‌ನಲ್ಲಿ ಸಾಂಘಿಕ ಪ್ರದರ್ಶನ ನೀಡಿ ಗೆಲುವಿನ ರೂವಾರಿಗಳಾದ ಜೆಮಿಮಾ ರಾಡ್ರಿಗಸ್, ಹರ್ಮನ್ ಪ್ರೀತ್ ಕೌರ್, ದೀಪ್ತಿ ಶರ್ಮಾ, ರಿಚಾ ಘೋಷ್, ರೇಣುಕಾ ಸಿಂಗ್, ನಲ್ಲಮರೆಡ್ಡಿ ಚರಣಿ ಫೈನಲ್‌ನಲ್ಲೂ ತಂಡಕ್ಕೆ ಆಸರೆಯಾಗುವ ನಿರೀಕ್ಷೆ ಇದೆ.
ರೌಂಡ್ ರಾಬಿನ್ ಮಾದರಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ೩ ಪಂದ್ಯಗಳಲ್ಲಿ ಸೋಲು ಕಂಡರೂ, ಧೃತಿಗೆಡದೆ ಗೆಲುವಿನ ಲಯ ಕಂಡುಕೊAಡಿರುವ ಟೀಂ ಇಂಡಿಯಾ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಲಿ. ‘ಇಂದು ಕಪ್ ನಮ್ಮದೇ!!’
- ಕಲ್ಲುಮಾಡಂಡ ದಿನೇಶ್ ಕಾರ್ಯಪ್ಪ, ಮಡಿಕೇರಿ.
ಮೊ. ೯೮೪೫೪೯೯೧೧೨.