ನಾಪೋಕ್ಲು, ನ. ೧: ಜಿಲ್ಲೆಯಲ್ಲಿ ವಿವಿಧ ಜನಾಂಗದವರು ನಡೆಸುವ ಕ್ರೀಡಾಕೂಟಗಳು ಸಾಮರಸ್ಯ ಮೂಡಲು ಸಹಕಾರಿಯಾಗುತ್ತವೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕರಾದ ಎ.ಎಸ್ ಪೊನ್ನಣ್ಣ ಹೇಳಿದರು. ಸಮೀಪದ ಮೂರ್ನಾಡಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಕೊಡಗು ಜಿಲ್ಲಾ ಕುಲಾಲ (ಕುಂಬಾರ) ಸಂಘದ ಆಶ್ರಯದಲ್ಲಿ ಶನಿವಾರ ಆಯೋಜಿಸಲಾಗಿದ್ದ ಚಾಂಪಿಯನ್ಸ್ ಟ್ರೋಫಿ-೨೦೨೫ ಸೀಸನ್ ೧ ಕ್ರಿಕೆಟ್ ಪಂದ್ಯಾಟದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಜನಾಂಗ ಜನಾಂಗದ ನಡುವೆ ಸಾಮರಸ್ಯ ಮೂಡುವ ನಿಟ್ಟಿನಲ್ಲಿ ಕ್ರೀಡಾಕೂಟಗಳು ಸಹಕಾರಿ. ಸಣ್ಣ ಸಣ್ಣ ಸಮುದಾಯದವರು ಉತ್ಸುಕರಾಗಿ ಕ್ರೀಡಾಕೂಟವನ್ನು ಆಯೋಜಿಸುತ್ತಿರುವುದು ಆರೋಗ್ಯಕರ ಬೆಳವಣಿಗೆ. ಜಿಲ್ಲಾ ಕುಲಾಲ (ಕುಂಬಾರ)ರ ಸಂಘದ ಅಧ್ಯಕ್ಷ ಕುಶಾಲಪ್ಪ ಮೂಲ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕಾಂತೂರು ಮುರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶನ್ ರೈ , ಯುವ ಘಟಕದ ಅಧ್ಯಕ್ಷ ಚಂದ್ರಶೇಖರ ಕುಲಾಲ್ ಮೂರ್ನಾಡು, ಕುಲಾಲ ಸಂಘದ ಖಜಾಂಚಿ ಗಿರೀಶ್ , ಕ್ರೀಡಾ ಸಮಿತಿ ಅಧ್ಯಕ್ಷ ರಮೇಶ್ ಕೆ .ಆರ್, ಶಾಂತಕುಮಾರ್ ಕೆ.ಡಿ, ರಾಮ ಮಂಚಿಕೆರೆ , ದೇವಯ್ಯ ಹೆಮ್ಮಾಡು, ಚಿನ್ನಪ್ಪ ವೀರಾಜಪೇಟೆ, ಎಂ. ಡಿ. ನಾಣಯ್ಯ, ಹರೀಶ್ ಮಡಿಕೇರಿ ಹಾಗೂ ಪದಾಧಿಕಾರಿಗಳು, ಸಮುದಾಯದವರು ಉಪಸ್ಥಿತರಿದ್ದರು. - ದುಗ್ಗಳ ಸದಾನಂದ