ಪೊನ್ನAಪೇಟೆ, ನ. ೧: ಗೋಣಿಕೊಪ್ಪಲು ಕಾವೇರಿ ಕಾಲೇಜು ವತಿಯಿಂದ ಆಯೋಜಿಸಲಾಗಿದ್ದ ಎರಡು ದಿನಗಳ ಕಾವೇರಿಯನ್ಸ್ ಫೆಸ್ಟ್ ಗೆ ವರ್ಣರಂಜಿತ ತೆರೆ ಎಳೆಯಲಾಯಿತು.

ಕಾವೇರಿಯನ್ಸ್ ಫೆಸ್ಟ್ - ೨೦೨೫ ರ ಸಮಗ್ರ ಚಾಂಪಿಯನ್ ಆಗಿ ಪೊನ್ನಂಪೇಟೆ ಹಳ್ಳಿಗಟ್ಟು ಸಿ.ಐ.ಪಿ.ಯು ಕಾಲೇಜು ಹೊರಹೊಮ್ಮಿತು. ಮಡಿಕೇರಿ ಸೆಂಟ್ ಮೈಕಲ್ ಪದವಿ ಪೂರ್ವ ಕಾಲೇಜು ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು. ಗೋಣಿಕೊಪ್ಪ ಕಾವೇರಿ ಪದವಿ ಪೂರ್ವ ಕಾಲೇಜು ತೃತೀಯ ಹಾಗೂ ಹುಣಸೂರು ಸೆಂಟ್ ಜೋಸೆಫ್ ಕಾಲೇಜು ನಾಲ್ಕನೇ ಸ್ಥಾನ ಪಡೆದು ಕೊಂಡಿತು.

ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆದ ಈ ಫೆಸ್ಟ್ ನಲ್ಲಿ ಕೊಡಗು ಹಾಗೂ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು ಸೇರಿದಂತೆ ೨೯ ಕಾಲೇಜುಗಳ ೧೮೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಸಂಭ್ರಮಿಸಿದರು.

ಫಲಿತಾAಶ: ಹಗ್ಗಜಗ್ಗಾಟ ಪುರುಷರ ವಿಭಾಗದಲ್ಲಿ ಮಡಿಕೇರಿ ಸೆಂಟ್ ಮೈಕಲ್ಸ್ ಪ್ರಥಮ, ಹಳ್ಳಿಗಟ್ಟು ಸಿ.ಐ.ಪಿ.ಯು ಕಾಲೇಜು ದ್ವಿತೀಯ, ಮಹಿಳೆಯರಲ್ಲಿ ಹಳ್ಳಿಗಟ್ಟು ಸಿ. ಐ.ಪಿ.ಯು ಕಾಲೇಜು ಪ್ರಥಮ, ಮಡಿಕೇರಿ ಸೆಂಟ್ ಮೈಕಲ್ಸ್ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಬಾಕ್ಸ್ ಕ್ರಿಕೆಟ್‌ನಲ್ಲಿ ಗೋಣಿಕೊಪ್ಪ ಕಾವೇರಿ ಪಿ. ಯು. ಕಾಲೇಜು ಪ್ರಥಮ, ಪಾಲಿಬೆಟ್ಟ ಸರ್ಕಾರಿ ಪಿ. ಯು. ಕಾಲೇಜು ದ್ವಿತೀಯ, ವಾಲಿಬಾಲ್‌ನಲ್ಲಿ ಹುಣಸೂರು ಸೆಂಟ್ ಜೋಸೆಫ್ ಕಾಲೇಜು ಪ್ರಥಮ, ಬೆಟ್ಟದಪುರ ಎಸ್ ಎಂ ಎಸ್ ಕಾಲೇಜು ದ್ವಿತೀಯ, ಮಹಿಳೆಯರ ಥೋಬಾಲ್‌ನಲ್ಲಿ ಹುಣಸೂರು ಸೆಂಟ್ ಜೋಸೆಫ್ ಪ್ರಥಮ, ಹುಣಸೂರು ಬಾಲಕಿಯರ ಪಿ.ಯು ಕಾಲೇಜು ದ್ವಿತೀಯ, ಸಮೂಹ ನೃತ್ಯದಲ್ಲಿ ಹಳ್ಳಿಗಟ್ಟು ಸಿ.ಐ.ಪಿ.ಯು ಕಾಲೇಜು ಪ್ರಥಮ, ವೀರಾಜಪೇಟೆ ಸೆಂಟ್ ಆನ್ಸ್ ಕಾಲೇಜು ದ್ವಿತೀಯ, ಸಮೂಹ ಗಾಯನದಲ್ಲಿ ಮರ್ಕಝ್ ಪಿ ಯು ಕಾಲೇಜು ಪ್ರಥಮ, ಸಿ.ಐ. ಪಿ. ಯು ಕಾಲೇಜು ದ್ವಿತೀಯ, ರಸಪ್ರಶ್ನೆಯಲ್ಲಿ ವಿದ್ಯಾನಿಕೇತನ ಪ್ರಥಮ, ಸಿ.ಐ.ಪಿ.ಯು ಕಾಲೇಜು ದ್ವಿತೀಯ, ಚರ್ಚಾ ಸ್ಪರ್ಧೆಯಲ್ಲಿ ಸಿ ಐ.ಪಿ.ಯು ಕಾಲೇಜು ಪ್ರಥಮ, ಗೋಣಿಕೊಪ್ಪ ಕಾವೇರಿ ಪಿ. ಯು. ಕಾಲೇಜು ದ್ವಿತೀಯ, ನಿಧಿ ಶೋಧ ವಿಭಾಗದಲ್ಲಿ ಕೆ.ಬಿ.ಕಾಲೇಜು ಪ್ರಥಮ, ಪೊನ್ನಂಪೇಟೆ ಸರ್ಕಾರಿ ಪಿ.ಯು ಕಾಲೇಜು ದ್ವಿತೀಯ, ಗೇಮಿಂಗ್‌ನಲ್ಲಿ ಮೂಕಾಂಬಿಕ ಪಿ.ಯು ಕಾಲೇಜು ಪ್ರಥಮ, ಮಡಿಕೇರಿ ಸೆಂಟ್ ಮೈಕಲ್ಸ್ ಕಾಲೇಜು ದ್ವಿತಿಯ ಸ್ಥಾನ ಪಡೆದುಕೊಂಡಿತು.

ನೃತ್ಯ ವಿಭಾಗಕ್ಕೆ ಕಲಾವಿದರಾದ ನಿರ್ಮಲ ಬೋಪಣ್ಣ, ವಿಷ್ಣು, ಹಾಡುಗಾರಿಕೆಗೆ ವತ್ಸಲಾ, ಅನ್ವಿತ್ ಕುಮಾರ್, ಚರ್ಚಾ ಸ್ಪರ್ಧೆಯಲ್ಲಿ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ತೀರ್ಪು ನೀಡಿದರು.

ಸಮಾರೋಪ ಸಮಾರಂಭ : ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಮಂಡೆಪAಡ ಸುಗುಣ ಮುತ್ತಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ವೈದ್ಯರಾದ ಡಾ. ಮಾಪಂಗಡ ಎಸ್. ಬೆಳ್ಳಿಯಪ್ಪ ಅವರು ಮಾತನಾಡಿ, ಕಾವೇರಿಯನ್ಸ್ ಫೆಸ್ಟ್ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶಕ್ಕೆ ಉತ್ತಮ ವೇದಿಕೆ ಒದಗಿಸಿಕೊಟ್ಟಿದೆ. ವಿದ್ಯಾರ್ಥಿಗಳು ಮೌಲ್ಯಯುತ ಶಿಕ್ಷಣದ ಜೊತೆಗೆ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕು ಎಂದರು.

ಮತ್ತೊಬ್ಬ ಅತಿಥಿ ಕಾವೇರಿ ಎಜುಕೇಶನ್ ಸೊಸೈಟಿ ಗೌರವ ಕಾರ್ಯದರ್ಶಿ ಕುಲ್ಲಚಂಡ ಬೋಪಣ್ಣ ಮಾತನಾಡಿ ವಿದ್ಯಾರ್ಥಿಗಳು ಬದುಕಿನಲ್ಲಿ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದರು.

ಪ್ರಾAಶುಪಾಲ ಡಾ. ಎಂ. ಬಿ. ಕಾವೇರಿಯಪ್ಪ ಮಾತನಾಡಿ ಕಾಲೇಜಿನ ಎಲ್ಲಾ ಸಿಬ್ಬಂದಿಗಳು ಹಾಗೂ ಎಲ್ಲಾ ವಿದ್ಯಾರ್ಥಿಗಳ ಹಲವು ದಿನಗಳ ಶ್ರಮದ ಫಲವಾಗಿ ಹಾಗೂ ದಾನಿಗಳ ಸಹಕಾರದಿಂದ ಕಾವೇರಿಯನ್ಸ್ ಫೆಸ್ಟ್ ಯಶಸ್ವಿಯಾಗಲು ಸಾಧ್ಯವಾಯಿತು ಎಂದು ಹೇಳಿದರು.

ಇದೇ ಸಂದರ್ಭ ಇತ್ತೀಚೆಗೆ ನಿವೃತ್ತಿ ಹೊಂದಿದ ಕಾಲೇಜಿನ ಡಿ ಗ್ರೂಪ್ ಸಿಬ್ಬಂದಿ ಲತಾ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಕಾವೇರಿ ಎಜುಕೇಷನ್ ಸೊಸೈಟಿ ನಿರ್ದೇಶಕರಾದ ಕೆ.ಪಿ. ಅಚ್ಚಯ್ಯ, ಪಳಂಗAಡ ವಾಣಿ ಚಂಗಪ್ಪ, ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಉಪ ಪ್ರಾಂಶುಪಾಲೆ ಪ್ರೊ. ಎಂ.ಎಸ್. ಭಾರತಿ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಎಸ್. ಮಾದಯ್ಯ, ಕಾವೇರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಕೆ. ಶ್ರೀನಿವಾಸ್, ಐ.ಕ್ಯೂ.ಎ.ಸಿ ಸಂಚಾಲಕಿ ಡಾ. ನಯನಾ ತಮ್ಮಯ್ಯ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕರಾದ ಡಾ. ಪಿ.ಪಿ. ಸವಿತಾ, ಕೆ.ಕೆ. ಚಿತ್ರಾವತಿ, ಹಿರಿಯ ಉಪನ್ಯಾಸಕರಾದ ಎಂ.ಕೆ. ಪದ್ಮ, ಸಿ.ಪಿ. ಸುಜಯ, ಕಾವೇರಿಯನ್ಸ್ ಫೆಸ್ಟ್ ಸಂಯೋಜಕ ಯು. ಟಿ. ಪೆಮ್ಮಯ್ಯ, ಕಚೇರಿ ಅಧೀಕ್ಷಕಿ ಟಿ.ಕೆ. ಲತಾ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. -ಚನ್ನನಾಯಕ